»   »  ಬೆಳ್ಳಿತೆರೆಗೆ ಶ್ರುತಿ, ಮಹೇಂದರ್ ತೆರೆಮರೆಯ ಕತೆ!

ಬೆಳ್ಳಿತೆರೆಗೆ ಶ್ರುತಿ, ಮಹೇಂದರ್ ತೆರೆಮರೆಯ ಕತೆ!

Subscribe to Filmibeat Kannada
Nayaki, Teremareyalli a fim on Shruti
ಕನ್ನಡ ಚಿತ್ರೋದ್ಯಮದ ಪ್ರಚೋದನಕಾರಿ, ಅತ್ಯಾಕರ್ಷಕ ಶೀರ್ಷಿಕೆಗಳ ಕಡೆಗೆ ಒಲವು ತೋರಿಸುತ್ತಿದೆ. ಶಿವರಾಜ್ ಕುಮಾರ್ ಅಭಿನಯದ 'ಹೊಡಿಮಗ' ಶೀರ್ಷಿಕೆ ವಿವಾದ ನಂತರ ಈ ಬೆಳವಣಿಗೆಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ. ಈ ನಿಟ್ಟಿನಲ್ಲಿ ಉಪೇಂದ್ರ ಅವರ 'ಲಂಡನ್ ಗೌಡ' ಚಿತ್ರ ಹೊರತಾಗಿಲ್ಲ. ಸೆನ್ಸಾರ್ ಮಂಡಳಿಗೆ ತಲೆನೋವು ತಪ್ಪಿದ್ದಲ್ಲ.

'ನಾಯಕಿ'ಎಂಬ ಹೊಸ ಶೀರ್ಷಿಕೆಯನ್ನು ನಿರ್ಮಾಪಕ ರಮೇಶ್ ಯಾದವ್ ನೋಂದಾಯಿಸಿಕೊಂಡಿದ್ದಾರೆ. ಈ ಶೀರ್ಷಿಕೆಗೆ 'ತೆರೆಮರೆಯಲ್ಲಿ'ಎಂಬ ಅಡಿ ಬರಹವನ್ನು ಕೊಟ್ಟು ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಮತ್ತೊಂದು ಮುಖ್ಯವಾದ ಅಂಶವೆಂದರೆ ಈ ಚಿತ್ರ ನಟಿ ಶ್ರುತಿ ಮತ್ತು ಎಸ್ ಮಹೇಂದರ್ ಅವರ 'ಕತೆ'ಯನ್ನು ಒಳಗೊಂಡಿದೆಯಂತೆ!

ಮಹೇಂದರ್ ಅವರಿಂದ ವಿವಾಹ ವಿಚ್ಛೇದನ ಕೋರಿ ಶ್ರುತಿ ಇತ್ತೀಚೆಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಗೊತ್ತೇ ಇದೆ. ಇವರಿಬ್ಬರ ವಿವಾಹ ವಿಚ್ಚೇದನ ಪ್ರಕರಣ ಪ್ರಮುಖ ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಶ್ರುತಿ ಮತ್ತೊಬ್ಬ ಯುವ ನಿರ್ದೇಶಕ, ಪತ್ರಕರ್ತ ಚಕ್ರವರ್ತಿ ಅವರನ್ನು ಮದುವೆಯಾಗುತ್ತಿರುವುದಾಗಿ ಈಗಾಗಲೇ ಘೋಷಿಸಿಕೊಂಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಚಿತ್ರಕತೆಯಾಗಿಸುವ ತವಕದಲ್ಲಿ ಯಾದವ್ ಇದ್ದಾರೆ. ಈ ಹಿಂದೆ ಯಾದವ್ ಅವರು ಶ್ರುತಿ ಅವರೊಂದಿಗೆ 'ಅಕ್ಕ ತಂಗಿ' ಚಿತ್ರವನ್ನು ನಿರ್ಮಿಸಿದ್ದರು. ಶ್ರುತಿ ಮತ್ತು ಮಹೇಂದರ್ ಜೋಡಿಯ ಕೊನೆಯ ಚಿತ್ರ ಅದಾಗಿತ್ತು.

ಈ ಬಗ್ಗೆ ಯಾದವ್ ಪ್ರತಿಕ್ರಿಯಿಸುತ್ತಾ, ಚಿತ್ರದ ಶೀರ್ಷಿಕೆಯನ್ನು 'ನಾಯಕಿ, ತೆರೆಮರೆಯಲ್ಲಿ' ಎಂಬ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದೇನೆ. ಆದರೆ ಚಿತ್ರಕತೆ ಇನ್ನೂ ಅಂತಿಮವಾಗಿಲ್ಲ. ಹಿಂದಿಯ 'ಫ್ಯಾಷನ್'ಚಿತ್ರವೇ ತಮಗೆ ಸ್ಫೂರ್ತಿ. ನಟಿಯೊಬ್ಬಳ ಜೀವನದಲ್ಲಿ ತೆರೆಯ ಹಿಂದೆ ನಡೆದಂತಹ ಘಟನೆಗಳನ್ನು ಚಿತ್ರ ಮಾಡಲು ಹೊರಟಿದ್ದೇನೆ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ
ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಟಿ ಶ್ರುತಿ
ಟಿವಿ 9 : ಚಕ್ರವ್ಯೂಹದಲ್ಲಿ ಸಿಲುಕಿದ ಶ್ರುತಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada