For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಇಲ್ಲದೇ ಚಿತ್ರಮುಗಿಸ್ತೇನೆ ಎಂದ ಸುದೀಪ್

  By Staff
  |

  ರಮ್ಯಾ ಇಲ್ಲದೆಯೇ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರವನ್ನು ಮುಗಿಸುತ್ತೇನೆ. ಎಲ್ಲಕ್ಕಿಂತ ಗೌರವ ಮುಖ್ಯ. ಯಾವುದೇ ತಪ್ಪಿಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಾವೇಕೆ ಬೈಸಿಕೊಳ್ಳಬೇಕು. ಯಾರಿಗೆ ಬೇಕು ನಿಮ್ಮ ಚಿತ್ರ ಎಂದು ಮುಖಕ್ಕೆ ಉಗಿದರೆ ಇಂತಹವರ ಜತೆ ಚಿತ್ರ ಮಾಡುವುದಾದರೂ ಹೇಗೆ ಎಂದು ಸುದೀಪ್ ಹೇಳಿದ್ದಾರೆ.

  'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ನಟಿ ರಮ್ಯಾ ನಿರ್ದೇಶಕರ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಚಿತ್ರದನಟ ಮತ್ತು ನಿರ್ದೇಶಕ ಸುದೀಪ್ ಇಂದು ಪ್ರತಿಕ್ರಿಯೆ ನೀಡಿದರು. ಮಾಧ್ಯಮಗಳಿ ಪ್ರತಿಕ್ರಿಯಿಸಿರುವ ಸುದೀಪ್, ರಮ್ಯಾ ಅವರು ಪತ್ರಿಕೆಗಳಿಗೆ ನೀಡಿರುವ ಹೇಳಿಕೆಗಳು ನಿರಾಧಾರ ಎಂದು ಸ್ಪಷ್ಟಪಡಿಸಿದ್ದಾರೆ.

  ಇದಿಷ್ಟೇ ಅಲ್ಲದೆ ರಮ್ಯಾ ಅವರು ಚಿತ್ರೀಕ್ರಣಕ್ಕೆ ತಡವಾಗಿ ಬರುತ್ತಿದರು. ಚಿತ್ರ ನಿರ್ದೇಶಕರಿಗೆ ಮೂರು ಕಾಸಿನ ಬೆಲೆ ಕೊಡುತ್ತಿರಲಿಲ್ಲ, ಇಂತಹ ನಟಿಯೊಂದಿಗೆ ತಮಗೆ ಚಿತ್ರ ಮುಂದುವರಿಸಲು ಇಷ್ಟವಿಲ್ಲ. ಶಿವರಾಜ್ ಕುಮಾರ್, ವಿಷ್ಣುವರ್ಧನ್ ಅವರಂತಹ ಹಿರಿಯ ಕಲಾವಿದರೇ ನಿರ್ದೇಶಕ, ಸಹ ಕಲಾವಿದರನ್ನು ಗೌರವದಿಂದ ಕಾಣುತ್ತಾರೆ.

  ನಾನು ಇದುವರೆಗೂ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಎಲ್ಲೂ ಇಷ್ಟೊಂದು ಅವಮಾನವಾಗಿಲ್ಲ ಎಂದರು. ಸಮಾಧಾನ ಪಡಿಸಲು ಹೋದರೆ ''ನೀನ್ಯಾರು ಕೇಳೋದಕ್ಕೆ, F*** your film''ಎಂದು ಮುಖಕ್ಕೆ ಹೊಡೆದಂತೆ ಹೇಳಿದರು.

  ಚಿತ್ರದ ಪ್ರಚಾರಕ್ಕಾಗಿ ನಡೆದ ಘಟನೆ ಇದಲ್ಲ ಎಂದು ಸ್ಪಷ್ಟಪಡಿಸಿರುವ ಸುದೀಪ್, ಚಿತ್ರದಲ್ಲಿ ಬದಲಾವಣೆ ಮಾಡುತ್ತೇನೆ ಎಂದಿದ್ದಾರೆ. ರಮ್ಯಾರೊಂದಿಗೆ ಚಿತ್ರವನ್ನು ಮುಂದುವರಿಸಲು ಇಷ್ಟವಿಲ್ಲ. ಚಿತ್ರವನ್ನು ಖಂಡಿತ ಪೂರ್ಣಗೊಳಿಸುತ್ತೇನೆ. ನನ್ನಿಂದ ನಿರ್ಮಾಪಕರಿಗೆ ತೊಂದರೆ ಆಗಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಬೆಂಗಳೂರಿನ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣ ವೇಳೆ ದೃಶ್ಯವೊಂದನ್ನು ರೀಟೇಕ್ ಮಾಡಬೇಕು ಎಂದು ರಮ್ಯಾ ಹೇಳಿದ್ದರು. ಆದರೆ ನೃತ್ಯ ನಿರ್ದೇಶಕ ಹರ್ಷ ಅದರ ಅವಶ್ಯಕತೆ ಇಲ್ಲ ಎಂದಿದ್ದಾರೆ. 'ಮೊದಲು ನೃತ್ಯ ಕಲಿತು ನನಗೆ ಹೇಳಿಕೊಡಲು ಬರಬೇಕು. ಐ ಡೇಂಟ್ ಕೇರ್ ಎಬೌಟ್ ಯುವರ್ ಡಾನ್ಸ್' ಎಂದು ರಮ್ಯಾ ಹೇಳಿದ್ದಾರೆ. ಮಾತಿನ ಚಕಮಕಿ ನಡೆದು ಜಗಳ ತಾರಕಕ್ಕೇರಿದೆ. ಕೊನೇ ಹಂತದಲ್ಲಿರುವ ಜಸ್ಟ್ ಮಾತಲ್ಲಿ ಚಿತ್ರಕ್ಕೆ ರಮ್ಯಾ ಕೈಕೊಟ್ಟಿದ್ದಾರೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X