Just In
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಬ್ಬಿಂಗ್ ಬೇಕೇ ಬೇಡವೇ ಧೈರ್ಯವಾಗಿ ಹೇಳಿ
ಕನ್ನಡದಲ್ಲಿ ಡಬ್ಬಿಂಗ್ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ, ಕಾಫಿ ಶಾಪ್ ಚಿತ್ರದ ಬಿಡುಗಡೆ ವಿರುದ್ದ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ನಟ ಅಶೋಕ್ ನೇತೃತ್ವದಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಡಬ್ಬಿಂಗ್ ಕನ್ನಡ ಚಿತ್ರರಂಗಕ್ಕೆ ಮಾರಕವಲ್ಲ. ಮತ್ತು ಕನ್ನಡ ಕ್ಕೆ ಡಬ್ಬಿಂಗ್ ಬೇಕು /ಬೇಡ ಅನ್ನೋದನ್ನ ಪ್ರೇಕ್ಷಕ ನಿರ್ಧಾರ ಮಾಡಲಿ ಎಂಬ ಆರೋಗ್ಯಕರ ಚರ್ಚೆಗೆ ಆನ್ ಲೈನ್ ಸಿನಿ ಪ್ರಿಯರು ಆಗ್ರಹಿಸಿದ್ದಾರೆ. ಡಬ್ಬಿಂಗ್ ಪರ ವಿರೋಧ ಚರ್ಚೆಗೆ ಮುಕ್ತ ಆಹ್ವಾನ ಇಲ್ಲಿದೆ. ಓದುಗರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮ್ಮ ಇಮೇಲ್ ಗೆ ಪತ್ರಿಸಬಹುದು.
ಮನೋರಂಜನೆ ಎನ್ನೋದು ಎಲ್ಲರ ಹಕ್ಕು, ಒಬ್ಬ ವ್ಯಕ್ತಿ ಮನೊರಂಜನೆಯನ್ನು ತನ್ನ ಭಾಷೆಯಲ್ಲೆ ಪಡೆಯುವುದು ಕೂಡ ಆ ವ್ಯಕ್ತಿಯ ಹಕ್ಕೂ ಕೂಡ. ಇದನ್ನ ತಡೆಯಲು ಯಾವುದೇ ಕಾನೂನು ಮುಂದೆಬರುವುದಿಲ್ಲ. ಇದಕ್ಕಾಗಿಯೇ ಇರಬೇಕು ಇಂದಿಗೂ ಕನ್ನಡಕ್ಕೆ ಡಬ್ ಮಾಡಬಾರದು ಅನ್ನೋ ಕಾನೂನು ಇಲ್ಲ.
ಚಲನಚಿತ್ರಗಳು, ವಾಣಿಜ್ಯ ಮಂಡಳಿ ಅಥವಾ ಇನ್ಯಾವುದೋ ಸಂಸ್ಥೆ ಪ್ರೇಕ್ಷಕನಿಗೆ ನೀಡುತ್ತಿರುವ ಬಿಕ್ಷೆಯಲ್ಲ. ಪ್ರತಿಯೊಬ್ಬ ಪ್ರೇಕ್ಷಕನೂ ತನಗೆ ಬೇಕಾದ ಚಿತ್ರವನ್ನು ದುಡ್ಡು ಕೊಟ್ಟು ನೋಡ್ತಾನೆ ಹೊರೆತು ಬಿಟ್ಟಿಯಾಗಿ ಅಲ್ಲ. ಅದರಿಂದ ಯಾವ ಸಿನೆಮಾ ನೋಡ್ಬೇಕು ಅಥವಾ ಯಾವ ಸಿನೆಮಾ ನೋಡ್ಬಾರ್ದು ಅನ್ನೊದನ್ನ ಪ್ರೇಕ್ಷಕ ನಿರ್ಧಾರ ಮಾಡ್ತಾನೆ. ಕಾನೂನು ಇಲ್ಲದಿದ್ದರೂ ಸಹ, ಕನ್ನಡಿಗನಿಗೆ ಪ್ರಪಂಚದ ಒಳ್ಳೆಒಳೆಯ ಚಿತ್ರಗಳನ್ನು ತನ್ನ ಭಾಷೆಯಲ್ಲೇ ನೋಡಲು ಆಗದಿರುವಂತೆ ಮಾಡಿರುವುದು ಗೋರ ಅಪರಾದ ಮತ್ತು ಇದು ಮಾನವ ಹಕ್ಕುಗಳ ಉಲ್ಲಂಗನೆ ಅಂತಲೂ ಹೇಳಬಹುದಾಗಿದೆ.
ರಜನೀ ಬೇಕು ಡಬ್ಬಿಂಗ್ ಬೇಡ?:ಇಂದು ಡಬ್ಬಿಂಗ್ ಅನ್ನು ವಿರೋಧಿಸುತ್ತಿರುವವರು ಪರಭಾಷೆಯ ಚಿತ್ರವನ್ನೇ ನೋಡುತ್ತಿಲ್ಲ ಎಂದೇನಿಲ್ಲ. ಡಬ್ಬಿಂಗ್ ಸಿನೆಮಾ ಬಿಡುಗಡೆಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಹೇಳೋ ಚಿತ್ರರಂಗದ ನಾಯಕರೊಬ್ಬರ ಮನೆಯಲ್ಲಿ ಇಂದಿಗೂ ಪರಭಾಷೆಯ ಚಿತ್ರಗಳನ್ನ ತಮ್ಮ ಮನೆಗೇ ತರಿಸಿಕೊಂಡು ನೋಡೋ ಸಂಪ್ರದಾಯ ಇದೆಯಂತೆ..... ರಜನೀಕಾಂತ್ ಸೇರಿದಂತೆ ಹಲವಾರು ನಟರ ಅದ್ದೂರಿ ಸಿನೆಮಾಗಳನ್ನು ಬಿಡುಗಡೆಗೂ ಮುಂಚೆ ಈ ಕುಟುಂಬದವರಿಗೆಂದೇ ಒಂದು ಪ್ರದರ್ಶನ ಏರ್ಪಾಡು ಮಾಡಿದ್ದರೆಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಡಬ್ಬಿಂಗ್ ವಿರೋಧಿಸಿ ಕನ್ನಡಿಗರಿಗೆ ಓಳ್ಳೆಯ ಸಿನೆಮಾಗಳನ್ನು ನೋಡದಂತೆ ಮಾಡಿರೋ ಜನ ತಾವು ಮಾತ್ರ ಆ ಒಳ್ಳೆಯ ಸಿನೆಮಾಗಳನ್ನು ನೋಡೋದನ್ನ ಮಾತ್ರ ಮರೆತಿಲ್ಲ.
ಡಬ್ಬಿಂಗ್ ನಿಂದ ಕನ್ನಡದ ಸಂಸ್ಕೃತಿ ಹಾಳಾಗುತ್ತೆ ಅನ್ನೋ ಜನ ಅದೇ ಕನ್ನಡದ ಚಿತ್ರಗಳನ್ನ ಪರಭಾಷೆಗೆ ಡಬ್ ಮಾಡಿದಾಗ, ತಮ್ಮ ಮಾತನ್ನ ತಾವೇ ಮರೆತುಹೋಗುತ್ತಾರೆ. ನಿಜವಾಗಿಯೂ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಕನ್ನಡದ ಸಂಸ್ಕೃತಿ ಹಾಳಾಗೋದಾದ್ರೆ, ಕನ್ನಡ ಚಿತ್ರ ಬೇರೆ ಭಾಷೆಗೆ ಡಬ್ ಆದಾಗ ಆ ಭಾಷೆಯ ಸಂಸ್ಕೃತಿ ಹಾಳಾಗೋದಿಲ್ವ?
ಕಳ್ಳ ಭಟ್ಟಿ ಚಿತ್ರ ನಿರ್ಮಾಣಕ್ಕೆ ಧಿಕ್ಕಾರ: ಡಬ್ಬಿಂಗ್ ನಿಂದ ತೊಂದರೆಗೆ ಒಳಗಾಗೋರು ಒಬ್ರೆ, ಅವರು talent ಇಲ್ಲದೇ ಪರಭಾಷೆಯ ಚಿತ್ರಗಳನ್ನ ಬಟ್ಟಿ ಇಳಿಸಿ ಇದಕ್ಕೆ ಇನ್ಯಾವುದನ್ನೋ ಸೇರಿಸಿ ಕಲೆಸಿ/ಬೆರೆಸಿ ರೀಮೇಕ್ ಮಾಡೋ ಜನ ಮಾತ್ರ. ಕನ್ನಡ ಚಿತ್ರರಂಗದಲ್ಲಿರೋ ನಿಜವಾದ talent ಗಳಿಗೆ ಡಬ್ಬಿಂಗ್ ಅಲ್ಲ, ಇನ್ಯಾವುದೋ ಒಂದು ಬೇರೆ ಗ್ರಹದಿಂದ ಇಳಿದು ಬಂದ್ರು ತೊಂದರೆ ಆಗಲ್ಲ. ಡಬ್ಬಿಂಗ್ ಕನ್ನಡ ಚಿತ್ರ ರಂಗನ ಜರಡಿ ಆಡಿ ಇಲ್ಲಿ talent ಇರೋರು ಮಾತ್ರ ಉಳಿಯೋ ಹಾಗೆ ಮಾಡುತ್ತೆ.
ಡಬ್ಬಿಂಗ್ ವಿರೋಧಿಸೋರು ಕನ್ನಡ...ಕನ್ನಡ.....ಅಂತ ಮುಂದೆ ಹೇಳಿ ಹಿಂದೆ ಪರಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡೊಕ್ಕೆ ಹೊರಟು, ಪರಭಾಷೆಯ ಚಿತ್ರರಂಗದ ಏಜೆಂಟ್ಗಳಂತೆ ಆಡ್ತಿರೋದು ಬಹಳ ಆತಂಕಕಾರಿ. ಡಬ್ಬಿಂಗ್ ಗೆ ವಿರೋಧಿಸೋ ಜನ ಪರಬಾಷೆ ಚಿತ್ರ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಕಡೆ ಬಿಡುಗಡೆ ಆಗ್ತಿರೋ ಬಗ್ಗೆ ಯಾಕೆ ಮಾತಾಡ್ತಿಲ್ಲ ಅಥವಾ ಅದಕ್ಕೆ ಪರಹಾರ ಯಾಕೆ ಹುಡುಕ್ತಿಲ್ಲ? ಇದರಿಂದ ನಿಜವಾಗಿಯೂ ಇವರಿಗೆ ಕನ್ನಡದ ಬಗ್ಗೆ ಕಾಳಜಿ ಇದ್ಯ ಅನ್ನೋದೇ ಒಂದು ಪ್ರಶ್ನೆಯಾಗಿದೆ. ಇವರು ಡಬ್ಬಿಂಗ್ ವಿರೋಧಿಸುತ್ತಿರೋದು ತಮ್ಮ ಬೇಳೆ ಬೇಯಿಸಿಕೊಳ್ಳೋಕ್ಕೆ ಹೊರೆತು ಕನ್ನಡಕ್ಕಾಗಿ ಅಲ್ಲ.
ಡಬ್ಬಿಂಗ್ ನಿಂದ ಅದು ಹಾಳಾಗುತ್ತೆ ಇದು ಹಾಳಾಗುತ್ತೆ ಅಂತ ತಮ್ಮ ಬೇಳೆ ಬೇಯಿಸಿಕೊಳ್ಳೊಕ್ಕೆ ಹೊರಟಿರೋ ಜನರ ಮಾತನ್ನ ತಲೆಗೆ ಹಾಕಿಕೊಳ್ಳಬೇಡಿ. ಅದೇ ಜನ ನಾಳೆ ಕಾಫಿ ಶಾಪ್ ಚಿತ್ರ ತೆಲುಗುಭಾಷೆನಲ್ಲಿ ಬಿಡುಗಡೆ ಆದ್ರೆ first day first show ನಲ್ಲಿ ನೋಡ್ತಾರೆ. ಕಾಫಿ ಶಾಪ್ ಚಿತ್ರ ಕನ್ನಡದಲ್ಲಿ ಬಂದ್ರೆ ಒಳ್ಳೆದೇ ಅಲ್ವ? ಸುಮ್ನೆ ಕಾಫಿ ಶಾಪ್ ಚಿತ್ರ ಕನ್ನಡಕ್ಕೆ ಡಬ್ ಆಗೋದನ್ನ ಬೆಂಬಲಿಸಿ. ಬಿಡುಗಡೆ ಆದ್ಮೇಲೆ ಆರಾಮಾಗಿ ಮಲ್ಟಿಪ್ಲೆಕ್ಸ್ ನಲ್ಲಿ ಹೋಗಿ ಕನ್ನಡದಲ್ಲೇ ಸಿನೆಮಾ ನೋಡಿ ಮಜ ಮಾಡಿ. [ಡಬ್ಬಿಂಗ್ ಪರ ವಿರೋಧ ತೂರಿ ಬಂದ ಪತ್ರಗಳನ್ನು ನೋಡಿ]