For Quick Alerts
  ALLOW NOTIFICATIONS  
  For Daily Alerts

  ಸಂಗೊಳ್ಳಿ ರಾಯಣ್ಣನಿಗೆ ಕೈಕೊಟ್ಟ ಪ್ರಿಯಾಮಣಿ

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಅಭಿನಯಿಸಲಿರುವ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. ಈ ಚಿತ್ರ ನವೆಂಬರ್ ನಲ್ಲಿ ಸೆಟ್ಟೇರಲಿದೆ. ಆದರೆ ಚಿತ್ರಕ್ಕೆ ನಾಯಕಿಯಾಗಿ ಪ್ರಿಯಾಮಣಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ 'ಸಂಗೊಳ್ಳಿ ರಾಯಣ್ಣ'ನನ್ನು ಪ್ರಿಯಾಮಣಿ ಒಲ್ಲೆ ಎಂದಿದ್ದಾರೆ.

  ಈ ಸುದ್ದಿಯನ್ನು ಸ್ವತಃ ಚಿತ್ರದ ನಿರ್ದೇಶಕ ನಾಗಣ್ಣ ಬಹಿರಂಗಪಡಿಸಿದ್ದಾರೆ. ಪ್ರಿಯಾಮಣಿ ಅವರ ಈ ನಿರ್ಧಾರ ತಮ್ಮನ್ನು ಚಕಿತಗೊಳಿಸಿದೆ ಎಂದು ನಾಗಣ್ಣ ಪ್ರತಿಕ್ರಿಯಿಸಿದ್ದಾರೆ. ಭಾರಿ ಬಜೆಟ್‌ನ ಈ ಚಿತ್ರದಲ್ಲಿ ಪ್ರಿಯಾಮಣಿ ನಟಿಸಲು ಆರಂಭದಲ್ಲಿ ಆಸಕ್ತಿ ತೋರಿಸಿದ್ದರು. ಮುಂಗಡ ಹಣ ಕೊಡುವುದಾಗಿ ಪ್ರಿಯಾಮಣಿ ಅವರ ಬೆಂಗಳೂರು ನಿವಾಸಕ್ಕೆ ದೂರವಾಣಿ ಮೂಲಕ ತಿಳಿಸಿದೆವು. ಆಕೆಯ ಮ್ಯಾನೇಜರ್ ಪ್ರಿಯಾಮಣಿ ಅವರಿಗೆ ಈ ಚಿತ್ರದಲ್ಲಿ ನಟಿಸಲು ಆಸಕ್ತಿ ಇಲ್ಲ ಎಂದು ತಿಳಿಸಿದ್ದಾಗಿ ಹೇಳಿದ್ದಾರೆ.

  ಪ್ರಿಯಾಮಣಿ ಜಾಗಕ್ಕೆ ಹೊಸಬರನ್ನು ಕರೆತರುವ ಬಗ್ಗೆ ಚಿಂತನೆ ನಡೆದಿದೆ. ಪ್ರಿಯಾಮಣಿ ಅವರು ಇದ್ದಕ್ಕಿಂದ್ದಂತೆ ಸಂಗೊಳ್ಳಿ ರಾಯಣ್ಣನ ಕೈಬಿಟ್ಟಿದ್ದು ಏಕೆ ಎಂದು ತಿಳಿದುಬಂದಿಲ್ಲ. ನವೆಂಬರ್ 19ರಿಂದ ಚಿತ್ರೀಕರಣ ಆರಂಭವಾಗಲಿರುವ ಈ ಚಿತ್ರದಲ್ಲಿ ಅಭಿನೇತ್ರಿ ಜಯಪ್ರದಾ ಅವರು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ಕಾಣಿಸಲಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X