»   » ನಟಿ ಅಭಿನಯ, ಕುಟುಂಬಕ್ಕೆ ವಾರಂಟ್ ಜಾರಿ

ನಟಿ ಅಭಿನಯ, ಕುಟುಂಬಕ್ಕೆ ವಾರಂಟ್ ಜಾರಿ

Posted By:
Subscribe to Filmibeat Kannada

ಚಲನಚಿತ್ರ ಹಾಗೂ ಕಿರುತೆರೆ ನಟಿ ಅಭಿನಯ ಮತ್ತು ಅವರ ಕುಟುಂಬದವರಿಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಎಂಟನೇ ಎಸಿಎಂಎಂ ನ್ಯಾಯಾಲಯ ಅಭಿನಯಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಮರುದಿನವೇ ಕೌಟುಂಬಿಕ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಅಭಿನಯ ಸಹೋದರ ಶ್ರೀನಿವಾಸ್ ಮತ್ತವರ ಪತ್ನಿ ಲಕ್ಷ್ಮಿದೇವಿ (ಪುಷ್ಪ)ಅವರ ನಡುವಿನ ವಿವಾಹ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಶ್ರೀನಿವಾಸನ ಪತ್ನಿ ಲಕ್ಷ್ಮಿದೇವಿ ಹಾಗೂ ಮಗುವಿಗೆ ಜೀವನಾಧಾರ ಭತ್ಯೆ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು.

ಆದರೆ ನ್ಯಾಯಾಲಯದ ಆದೇಶವನ್ನು ಪಾಲಿಸದೆ ಕೇವಲ ರು.50 ಸಾವಿರ ನೀಡಿದ ಕಾರಣ ಶುಕ್ರವಾರ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ. ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದ ಲಕ್ಷ್ಮಿದೇವಿ 2005ರಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ತಿಂಗಳಿಗೆ ರು.2000 ಭತ್ಯೆ ನೀಡುವಂತೆ ಆದೇಶಿಸಿದ್ದರು. ತೀರ್ಪು ನೀಡಿದ ದಿನದಿಂದ ಇದುವರೆಗೂ ರು.1.25 ಲಕ್ಷ ನೀಡಬೇಕಿತ್ತು. ಆದರೆ ಬಾಕಿ ರು.75 ಸಾವಿರ ನೀಡದೆ ಇರುವ ಕಾರಣ ನ್ಯಾಯಾಧೀಶರು ಜಾಮೀನು ರಹಿತ ವಾರೆಂಟ್ ಆದೇಶ ಹೊರಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada