»   »  ಪ್ರಭುದೇವನಿಗೆ ಮನಸ್ಸು ಕೊಟ್ಟ ನಯನತಾರಾ

ಪ್ರಭುದೇವನಿಗೆ ಮನಸ್ಸು ಕೊಟ್ಟ ನಯನತಾರಾ

Subscribe to Filmibeat Kannada

ಸದಾ ಒಂದಿಲ್ಲೊಂದು ಕಿರಿಕಿರಿ ಸುದ್ದಿ ಮಾಡದಿದ್ದರೆ ನಟಿ ನಯನತಾರಾಗೆ ನಿದ್ದೆ ಬರುವುದಿಲ್ಲ ಅನ್ನಿಸುತ್ತದೆ. ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ನಟ ಪ್ರಭುದೇವಾ ಅವರೆಂದರೆ ನನಗೆ ತುಂಬಾ ಇಷ್ಟ ಎಂದು ಹೇಳಿ ಇದೀಗ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.

ನಯನತಾರಾ ಮತ್ತು ಪ್ರಭುದೇವಾ ನಡುವಿನ ಪ್ರೇಮ ವ್ಯವಹಾರವೇನು ಗುಟ್ಟಾಗಿ ಉಳಿದಿಲ್ಲ. ಕದ್ದು ಮುಚ್ಚಿ ನಡೆಯುತ್ತಿದ್ದ ಇವರಿಬ್ಬರ ನಡುವಿನ ಪ್ರೇಮ ಸಲ್ಲಾಪ ಮಾಧ್ಯಮಗಳಲ್ಲಿ ಸ್ಥಾನಪಡೆದಿತ್ತು. ಇದೀಗ ಪ್ರಭುದೇವ ಅವರನ್ನ್ನು ತಾವು ಇಷ್ಟಪಟ್ಟಿರುವುದಾಗಿ ನಯನತಾರಾ ಬಹಿರಂಗವಾಗಿ ಹೇಳಿ ಬೆಚ್ಚಿಬೀಳಿಸಿದ್ದಾರೆ.

ದೀಪಾವಳಿ ಪ್ರಯುಕ್ತ ಟಿವಿ ವಾಹಿನಿ ನಯನತಾರಾ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಿತ್ತು. ನಯನತಾರಾ ತೋಳ ಮೇಲಿನ 'P Dev' ಎಂಬ ಹಚ್ಚೆಯನ್ನು ನೋಡಿದ ಸಂದರ್ಶಕ ಹಾಗ್ಯಾಕೆ ಹಾಕಿಸಿಕೊಂಡಿದ್ದೀರಿ ಎಂದು ಕೇಳಿಯೇ ಬಿಟ್ಟ. ಆ ವ್ಯಕ್ತಿ ನನಗಿಷ್ಟ ಹಾಗಾಗಿ ಆ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದೇನೆ ಎಂದು ಪ್ರಾಮಾಣಿಕವಾಗಿ ಉತ್ತರಿಸಿ ಸಂದರ್ಶನಕ ಬಾಯಿಗೆ ಬೀಗ ಜಡಿದರು.

ಶಾಲಾ ದಿನಗಳಿಂದಲೂ ತಮಗೆ ಬಹಳಷ್ಟು ಪಡ್ಡೆ ಹುಡುಗರು ಲವ್ ಲೆಟರ್ ಬರೆಯುತ್ತಿದ್ದರು. ಆದರೆ ಯಾವುದನ್ನೂ ನಾನು ಸ್ವೀಕರಿಸುತ್ತಿರಲಿಲ್ಲ ಎಂಬ ವಿಚಾರವನ್ನು ನಯನತಾರ ಈ ಸಂದರ್ಭದಲ್ಲಿ ನೆನೆಸಿಕೊಂಡರು. ಒಟ್ಟಿನಲ್ಲಿ ನಯನತಾರಾ ಮತ್ತು ಪ್ರಭುದೇವಾ ನಡುವಿನ ಪ್ರೇಮ ಸಲ್ಲಾಪ ಬರೀ ಪುಕಾರಲ್ಲ ಎಂಬುದು ಸ್ಪಷ್ಟವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada