»   »  ಗುಂಡು ಪಾರ್ಟಿ ನಿಷೇಧ ಚಿತ್ರಾನ್ನ! ಚಿತ್ರಾನ್ನ?

ಗುಂಡು ಪಾರ್ಟಿ ನಿಷೇಧ ಚಿತ್ರಾನ್ನ! ಚಿತ್ರಾನ್ನ?

Subscribe to Filmibeat Kannada

*ಜಯಂತಿ

ನಿಯಮ ಇರೋದು ಮುರಿಯಲಿಕ್ಕೆ ಅಂತ ಕೆಲವು ವಿಚಾರವಾದಿಗಳು ಹೇಳಿದ್ದುಂಟು. ಕನ್‌ಫ್ಯೂಸ್ ದಿ ರೀಡರ್ಸ್ ಅಂತ ವೈಯೆನ್ಕೆ ಕೂಡ ಆಗಾಗ ಹೇಳುತ್ತಿದ್ದರು. ಈಗ ಸುದ್ದಿಮಿತ್ರರು ನಿರ್ಮಾಪಕರನ್ನೇ ಕನ್‌ಫ್ಯೂಸ್ ಮಾಡಹೊರಟಿದ್ದಾರೆ. ಇದೇ ತಿಂಗಳ ಹದಿನೈದರ ನಂತರ ರಾತ್ರಿ ಹೊತ್ತು ಯಾರೂ ಪ್ರೆಸ್‌ಮೀಟ್ ಇಡಕೂಡದು ಅಂತ ನಿರ್ಮಾಪಕರ ಸಂಘ ಫರ್ಮಾನು ಹೊರಡಿಸಿದ್ದು ಗೊತ್ತೇ ಇದೆ. ಈ ವಾರ ಆ ಫರ್ಮಾನನ್ನು ಮೂವರು ನಿರ್ಮಾಪಕರು ಮುರಿಯಲಿರುವುದು ಸುದ್ದಿ.

ಮೊದಲನೆಯದಾಗಿ ಶುಕ್ರವಾರ ಸಂಜೆ ಗ್ರೀನ್‌ಹೌಸ್‌ನಲ್ಲಿ ಏಳು ಗಂಟೆಗೆ ಸರಿಯಾಗಿ 'ಪೊರ್ಕಿ' ಚಿತ್ರದ ಪ್ರೆಸ್‌ಮೀಟ್ ಆಯೋಜಿಸಲಾಗಿತ್ತು. ಇದರ ನಿರ್ಮಾಪಕ ಯಾರು ಅನ್ನೋದು ಗುಟ್ಟು. ಅರ್ಪಿಸಿದ್ದು ಪತ್ರಕರ್ತ ಗಣೇಶ್ ಕಾಸರಗೋಡು. ದರ್ಶನ್ ನಾಯಕ. ರಾತ್ರಿ ಗುಂಡು ಪಾರ್ಟಿಯೂ ಇತ್ತು ಅನ್ನೊದು ಕೆ.ಸಿ.ಎನ್.ಚಂದ್ರು ಗಮನಕ್ಕೆ.

ಶನಿವಾರ, ಅಂದರೆ 24ನೇ ತಾರೀಖು ಸಾಯಂಕಾಲ 7ಕ್ಕೆ ಛಾನ್ಸರಿ ಹೋಟೆಲಿನಲ್ಲಿ ಇನ್ನೊಂದು ಪ್ರೆಸ್‌ಮೀಟ್. 'ಜೊತೆಗಾರ' ಚಿತ್ರದ ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಇದನ್ನು ಆಯೋಜಿಸಿದ್ದಾರೆ. ಯಾರು ಏನೇ ಹೇಳಿಕೊಳ್ಳಲಿ, ನನಗೆ ಪ್ರಚಾರ ಬೇಕು. ಪತ್ರಕರ್ತರು ಬೇಕು ಅಂತ ರಾಮ್‌ಪ್ರಸಾದ್ ಎದೆ ಮುಟ್ಟಿಕೊಂಡು ಹೇಳುತ್ತಿದ್ದಾರೆ.

ಇನ್ನು ಭಾನುವಾರದ ಮಾತು. ಆ ದಿನ ಸಿನಿಮಾ ಸುದ್ದಿಮಿತ್ರರೆಲ್ಲಾ ಸೇರಿ ಮೀಟ್ ದಿ ಪ್ರೆಸ್ ಆಯೋಜಿಸಿದ್ದಾರೆ. ಕೆ.ಮಂಜು ಗ್ರೀನ್‌ಹೌಸ್‌ನಲ್ಲಿ ಸಂಜೆ 7ಕ್ಕೆ ಮುಕ್ತವಾಗಿ ಮಾತಾಡಲಿದ್ದಾರೆ. ಅವರೂ ನಿರ್ಮಾಪಕರ ಸಂಘದ ಫರ್ಮಾನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ದುಡ್ಡು ನಮ್ಮದು. ನಾವು ಏನಾದ್ರೂ ಮಾಡ್ಕೋತೀವಿ ಅನ್ನೋ ಧಾಟಿಯಲ್ಲಿ ಅವರು ಮಾತಾಡಿದ್ದಾರೆ.

ಈ ಎಲ್ಲಾ ವಿದ್ಯಮಾನಗಳ ಸಾರ- ನಿಯಮ ಇರೋದು ಮುರಿಯಲಿಕ್ಕೆ!

ಅಂದಹಾಗೆ, ಕೆಸಿಎನ್ ಚಂದ್ರು ಕೈಲಿ ದರ್ಶನ್ ಕಾಲ್‌ಷೀಟ್ ಇದೆ. ಒಂದು ವೇಳೆ ಅವರು ಪೊರ್ಕಿ ಪ್ರೆಸ್‌ಮೀಟ್‌ಗೆ ಕ್ಯಾತೆ ತೆಗೆದರೆ? ಹಾಗೇನೂ ಆಗೋಲ್ಲ ಬಿಡಿ. ಎಷ್ಟೇ ಆದರೂ ಇವರೆಲ್ಲಾ ಸಿನಿಮಾದೋರೇ ಅಲ್ಲವೇ?

ಪೂರಕ ಓದಿಗೆ
ಘಾ ನಿರ್ಮಾಪಕರಿಗೆ ಗುಂಡು ಪಾರ್ಟಿ ನಿಷೇಧ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada