»   » ನವ್ಯಾ ನಾಯರ್ ವಿರುದ್ಧ ಯಾದವ್ ದೂರು

ನವ್ಯಾ ನಾಯರ್ ವಿರುದ್ಧ ಯಾದವ್ ದೂರು

Subscribe to Filmibeat Kannada

ನಟಿ ನವ್ಯಾ ನಾಯರ್ ವಿರುದ್ಧ ನಿರ್ಮಾಪಕ ರಮೇಶ್ ಯಾದವ್ ನಿರ್ಮಾಪಕರ ಸಂಘ ಹಾಗೂ ದಕ್ಷಿಣ ಭಾರತ ಕಲಾವಿದರ ಸಂಘಕ್ಕೆ ದೂರು ಸಲ್ಲಿಸಿದ್ದಾರೆ. 'ಬಾಸ್' ಚಿತ್ರದ ಹಾಡೊಂದನ್ನು ಮುಗಿಸಿಕೊಡಲು ನವ್ಯಾ ನಾಯರ್ ಹೆಚ್ಚಿನ ಹಣ ಕೇಳುತ್ತಿದ್ದಾರೆ. ಹಾಡನ್ನು ಮುಗಿಸಿಕೊಡಬೇಕಾದರೆ ಹೆಚ್ಚುವರಿಯಾಗಿ ರು.5 ಲಕ್ಷ ಕೊಡಿ ಎಂದು ನವ್ಯಾ ಅವರ ತಂದೆ ಬೇಡಿಕೆ ಇಟ್ಟ್ಟಿರುವುದಾಗಿ ರಮೇಶ್ ಯಾದವ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬಾಸ್' ಚಿತ್ರೀಕರಣ ಮುಗಿದಿದೆ. ಚಿತ್ರಕ್ಕೆ ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿತ್ತು. ಈ ಹಾಡನ್ನು ಮುಗಿಸಬೇಕಾದರೆ ಹೆಚ್ಚುವರಿಯಾಗಿ ರು.5 ಲಕ್ಷ ಕೊಡಿ ಎಂದು ನವ್ಯಾ ಅವರ ತಂದೆ ಕೇಳುತ್ತಿದ್ದಾರೆ ಎಂದು ಯಾದವ್ ಆರೋಪಿಸಿದ್ದಾರೆ.

ಆದರೆ ಇವೆಲ್ಲ ಆರೋಪಗಳನ್ನು ನವ್ಯಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ನಿರ್ಮಾಪಕರ ಬಳಿ ದುಡ್ಡಿಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಚಿತ್ರ ಮುಗಿಸಲು ಸಾಧ್ಯವಾಗಿರಲಿಲ್ಲ. ಹೆಚ್ಚುವರಿಯಾಗಿ ಮೂರು ದಿನಗಳ ಕಾಲ ಚಿತ್ರೀಕರಿಸಲಾಯಿತು. ಹಾಡಿನ ಚಿತ್ರೀಕರಣವನ್ನೂ ಮುಗಿಸಿಕೊಟ್ಟಿದ್ದೇನೆ. ಇದೇ ವಿಷಯವನ್ನು ಕಲಾವಿದರ ಸಂಘಕ್ಕೂ ಸ್ಪಷ್ಟಪಡಿಸಿರುವುದಾಗಿ ನವ್ಯಾ ನಾಯರ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada