»   » ಜೋಗಯ್ಯನ ಬಗ್ಗೆ ಮೌನ ಮುರಿದ ಶಿವರಾಜ್ ಕುಮಾರ್

ಜೋಗಯ್ಯನ ಬಗ್ಗೆ ಮೌನ ಮುರಿದ ಶಿವರಾಜ್ ಕುಮಾರ್

Posted By:
Subscribe to Filmibeat Kannada

ಕಡೆಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ನೂರನೇ ಚಿತ್ರ ಜೋಗಯ್ಯನ ಬಗ್ಗೆ ಮೌನ ಮುರಿದಿದ್ದಾರೆ. ಈ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ ಎಂಬ ಮಾತನ್ನು ಶಿವಣ್ಣ ಕೂಡ ಒಪ್ಪುತ್ತಾರೆ. ಚಿತ್ರದ ನಿರ್ದೇಶಕ ಪ್ರೇಮ್ ಬಗ್ಗೆಯೂ ಎಲ್ಲೋ ಒಂಚೂರು ಬೇಸರವಿದೆ ಶಿವಣ್ಣನಿಗೆ.

'ಜೋಗಯ್ಯ' ಚಿತ್ರಕ್ಕೆ ಕೊಟ್ಟ ಪ್ರಚಾರ, ಅತಿಯಾದ ಆತ್ಮವಿಶ್ವಾಸವೇ ಚಿತ್ರಕ್ಕೆ ಮುಳುವಾಯಿತೆ? ಆರಂಭದ ಎರಡು ಮೂರು ವಾರ ಇದ್ದ ಕ್ರೇಜ್ ಕ್ರಮೇಣ ಕಡಿಮೆಯಾಯಿತು. ಚಿತ್ರಕ್ಕೆ ಸಿಕ್ಕಾಪಟ್ಟೆ ಪ್ರಚಾರ ಕೊಟ್ಟಿದ್ದೇ ಇದಕ್ಕೆ ಕಾರಣ ಎನ್ನುತ್ತಾರೆ ಶಿವಣ್ಣ.

ಚಿತ್ರದಲ್ಲಿನ ತಮ್ಮ ಅಭಿನಯದ ಬಗ್ಗೆ ಎಲ್ಲಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಈ ಬಗ್ಗೆ ತಮಗೆ ಸಂತೋಷವಿದೆ. ಆದರೆ ಚಿತ್ರ ಪ್ರೇಕ್ಷಕರ ನಿರೀಕ್ಷೆಯಂತಿರಲಿಲ್ಲ. 'ಜೋಗಯ್ಯ' ಚಿತ್ರ ಕನ್ನಡ ಚಿತ್ರೋದ್ಯಮಕ್ಕೆ ಒಂದು ಪಾಠ ಕಲಿಸಿದೆ. ಚಿತ್ರವೊಂದು ಸೆಂಚುರಿ ಬಾರಿಸಲಿ ಎಂಬ ಆಸೆ ಎಲ್ಲ ಕಲಾವಿದ, ನಿರ್ದೇಶಕ ನಿರ್ಮಾಪಕರಿಗಿರುತ್ತದೆ. ಆದರೆ ಪ್ರೇಕ್ಷಕರ ಸ್ಪಂದನೆಯೂ ಇದಕ್ಕೆ ಬೇಕಾಗುತ್ತದಲ್ಲವೆ ಎಂದಿದ್ದಾರೆ ಶಿವಣ್ಣ. (ಏಜೆನ್ಸೀಸ್)

English summary
Kannada actor Shivarajkumar breaks silence on his 100th film Jogayya failure. Prem directed movie seemed to suffer from an overdose of promotion. Read actor Shivarajkumar introspection.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada