Just In
Don't Miss!
- News
ಬೈಡನ್ಗೆ ನ್ಯೂಕ್ಲಿಯರ್ ಬಾಂಬ್ ಮೂಲಕ ಸ್ವಾಗತ ಕೋರಿದ ಉ. ಕೊರಿಯಾ..!
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Sports
ಐಎಸ್ಎಲ್: ಹೈದರಾಬಾದ್ಗೆ ಬಲಿಷ್ಠ ಮುಂಬೈ ಸಿಟಿ ಎಫ್ಸಿ ಸವಾಲು
- Education
KIOCL Recruitment 2021: ಆಫೀಸರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರ್ತಿಕ್, ಅರ್ಚನಾ ಗುಪ್ತಾ ನಡುವೆ ಸಮ್‌ಥಿಂಗ್ ಸಮ್‌ಥಿಂಗ್!?
ಸಿನಿಮಾ ಜಗತ್ತಲ್ಲಿ ಪ್ರೀತಿ ಪ್ರೇಮ ಪ್ರಣಯ ವಿಸ್ಮಯಗಳು ಮಾಮೂಲಿ. ದೊಡ್ಡ ಸ್ಟಾರ್ ಒಬ್ಬರ ಮಗನ ಜೊತೆ ಬೆಂಗಾಲಿ ಬೆಡಗಿಯೊಬ್ಬಳು ಮೆರವಣಿಗೆ ಹೊರಟಿದ್ದು ಈಗ ಹಳೇ ಸುದ್ದಿ. ಇಬ್ಬರು ದೊಡ್ಡ ಸ್ಟಾರ್-ಸ್ಟಾರಿಣಿ ಜಸ್ಟ್ ಜಗಳ ಜಗಳ ಯಾಕೆ ಆಡಿಕೊಂಡರು ಎನ್ನುವುದಕ್ಕೆ ಹೆಚ್ಚಿನವರಿಗೆ ಉತ್ತರ ಗೊತ್ತಿದೆ. ನಟಿಸುವಾಗ ಸೆಳೆತ ಮಿಡಿತಗಳು ಮಾಮೂಲಿ.
ಅದೇ ರೀತಿ ಸೆಳೆತಕ್ಕೆ ಒಳಗಾದವರಲ್ಲಿ ಕಾರ್ತಿಕ್ ಮತ್ತು ಅರ್ಚನಾ ಗುಪ್ತಾ ಕೂಡ ಸೇರಿದ್ದಾರೆ ಎನ್ನುವುದು ಸದ್ಯದ ಗಾಸಿಪ್ ಸುದ್ದಿ. ಗಾಂಧಿನಗರದ ಗಲ್ಲಿಯ ಮೂಲೆಯೊಂದರಿಂದ ಈ ಸುದ್ದಿ ಬಂದಿದೆ. ಇದೇ ವಾರ ತೆರೆ ಕಂಡಿರುವ 'ಕಾರ್ತಿಕ್' ಎಂಬ ಚಿತ್ರದ ನಾಯಕನ ಅಸಲೀ ಹೆಸರೇ ಕಾರ್ತಿಕ್. ಈ ಕಾರ್ತಿಕ್ ಶೂಟಿಂಗ್ ಟೈಮಿನಲ್ಲಿ ಅದೇ ಚಿತ್ರದ ನಾಯಕಿ ಅರ್ಚನಾ ಮತ್ತು ಕಾರ್ತಿಕ್ ಮಧ್ಯೆ ಸಮ್‌ಥಿಂಗ್ ಸಮ್‌ಥಿಂಗ್ ಎದ್ದಿದೆಯಂತೇ ಎನ್ನುವುದು ಸದ್ಯದ ಸುರು ಸುರು ಸುದ್ದಿ!
ಅಂದಹಾಗೇ ಪರಭಾಷಾ ನಟಿ ಅರ್ಚನಾ ಅವರನ್ನು ಕನ್ನಡಕ್ಕೆ ಕರೆತಂದು ಬಿಟ್ಟಿದ್ದು ದಯಾಳ್ ಪದ್ಮನಾಭನ್. 'ಸರ್ಕಸ್' ಸಿನಿಮಾ ಮೂಲಕ. ಅದಾದ ನಂತರ ಜಗ್ಗೇಶ್ ಜೊತೆ 'ಲಿಫ್ಟ್ ಕೊಡ್ಲಾ' ಸಿನಿಮಾದಲ್ಲಿ ನಟಿಸಿದ ಅರ್ಚನಾ ಮತ್ತು ಕಾರ್ತಿಕ್ ಬಗ್ಗೆ ಹಬ್ಬಿರುವ ಸುದ್ದಿ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಗುಸು ಗುಸು ಅಂತೂ ನಿಜ!