ಬೆಂಗಳೂರಿನಲ್ಲಿ 'ಪಂಚರಂಗಿ' ನಕಲಿ ಸಿಡಿಗಳು ಲಭ್ಯ
ಪೈರಸಿ ತಡೆಗೆ ಕರ್ನಾಟಕದ ಘನ ಸರಕಾರ ಗೂಂಡಾ ನಿಷೇಧ ಕಾಯಿದೆ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಆದರೆ ನಕಲಿ ಸಿಡಿ, ಡಿವಿಡಿ ತಯಾರಕರು ಮಾತ್ರ ರಂಗೋಲಿ ಕೆಳಗೆ ನುಸುಳಿ ಕಾನೂನು ಕೈಗೆ ಸಿಗದಂತೆ ದಂಧೆಯನ್ನು ನಿರ್ವಹಿಸುತ್ತಿದ್ದಾರೆ. ಇದೀಗ 'ಪಂಚರಂಗಿ' ನಕಲಿ ಡಿವಿಡಿ ಮಾರುಕಟ್ಟೆಗೆ ಬಂದಿದ್ದು ಬೆಂಗಳೂರಿನಲ್ಲಿ ಕಡಲೆ ಪುರಿಯಂತೆ ಬಿಕರಿಯಾಗುತ್ತಿದೆ.
ಈ ಡಿವಿಡಿಗಳು ನೋಡಲು ಅಸಲಿಯಂತೆಯೇ ಇದ್ದು ವಿಡಿಯೋ ಕೆಳಭಾಗದಲ್ಲಿ ಇಂಗ್ಲಿಷ್ ವಿವರಣೆಯನ್ನೂ ನೀಡಲಾಗಿದೆ. ಚಿತ್ರದ ನಿರ್ದೇಶಕ ಯೋಗರಾಜ್ ಭಟ್ಟ ಈ ನಕಲಿ ಡಿವಿಡಿಗಳನ್ನು ಕಂಡು ಬೆಚ್ಚಿಬೀಳುವುದೊಂದು ಬಾಕಿ ಇದೆ.
ಯಾವುದೇ ಚಿತ್ರದ ಡಿವಿಡಿಗಳು ಇಂಗ್ಲಿಷ್ ಭಾಷೆಯ ವಿವರಳೊಂದಿಗೆ ಬಂದಿದೆ ಎಂದರೆ ಅದು ಕಲಾತ್ಮಕ ಚಿತ್ರವಾಗಿರಬೇಕು. ಅಥವಾ ಪ್ರಶಸ್ತಿ ಆಯ್ಕೆಗೆ ಕಳುಹಿಸಿದ ಚಿತ್ರವಾಗಿರುತ್ತದೆ. ಕಮರ್ಷಿಯಲ್ ಚಿತ್ರ 'ಪಂಚರಂಗಿ' ಇಂಗ್ಲಿಷ್ ವಿವರಣೆಯೊಂದಿಗೆ ಹೇಗೆ ಬಂತು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಪಂಚರಂಗಿ ದಿಗಂತ್ ನಿಧಿ ಸುಬ್ಬಯ್ಯ ಪೈರಸಿ ಯೋಗರಾಜ್ ಭಟ್ ಮನೋಮೂರ್ತಿ pancharangi diganth yogaraj bhat nidhi subbaiah piracy mano murthy


Click it and Unblock the Notifications