»   »  ರಘುವೀರ್, ಯಾರಿಗೋಸ್ಕರ ಈ ಕಿತ್ತಾಟ!

ರಘುವೀರ್, ಯಾರಿಗೋಸ್ಕರ ಈ ಕಿತ್ತಾಟ!

Subscribe to Filmibeat Kannada
Actor Raghuveer
ಸುದೀರ್ಘ ವಿರಾಮದ ನಂತರ ಚೈತ್ರದ ಪ್ರೇಮಾಂಜಲಿ ಖ್ಯಾತಿಯ ರಘುವೀರ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಆಗಮಿಸಿರುವ ವಿಚಾರ ಗೊತ್ತೇ ಇದೆ. ಯಾರಿಗೋಸ್ಕರ ಈ ಪ್ರೀತಿ ಚಿತ್ರದ ಮೂಲಕ ಹಳೆಯ ಗೆಳೆಯರಾದ ರಘುವೀರ್ ಮತ್ತು ನಿರ್ದೇಶಕ ರಾಜು ಮತ್ತೆ ಒಂದಾಗಿದ್ದರು. ಈಗ ಇವರಿಬ್ಬ್ಬರ ಸಂಬಂಧ ಮುರಿದುಬಿದ್ದಿದೆ.

''ಹೊರಾಂಗಣ ಚಿತ್ರೀಕರಣಕ್ಕಾಗಿ ನಾನು ಸಕಲೇಶಪುರದಲ್ಲಿದ್ದೆ. ನಿರ್ದೇಶನದ ಬಗ್ಗೆ ರಾಜುಗೆ ಏನೇನು ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಒಂದೇ ಆಕ್ಷನ್, ಕಟ್ ಎಂದು ಕಿರುಚುವುದು. ಹೊಸ ಶೀರ್ಷಿಕೆ ಕೊಟ್ಟು ಈ ಚಿತ್ರವನ್ನು ತಾವೇ ನಿರ್ದೇಶಿಸುವುದಾಗಿ ರಘುವೀರ್ ತಿಳಿಸಿದ್ದಾರೆ. ಕತೆ ಅವರ ಜೀವನದ ನೈಜ ಘಟನೆಗಳಿಗೆ ಹತ್ತಿರವಾದ ಅಂಶಗಳನ್ನು ಹೊಂದಿರುತ್ತ್ತದಂತೆ. ಈ ಚಿತ್ರಕ್ಕೆ ಸಂಗೀತವನ್ನೂ ತಾವೇ ನಿರ್ದೇಶಿಸುವುದಾಗಿ ರಘುವೀರ್ ಹೇಳಿದ್ದಾರೆ.

ನಿರ್ದೇಶಕ ರಾಜು ಮಾತನಾಡುತ್ತಾ, ರಘುವೀರ್ ನನಗೆ ನಂಬಿಕೆ ದ್ರೋಹ ಬಗೆದಿದ್ದಾರೆ. ಕಾನೂನಿನ ರೀತ್ಯಾ ಆ ಚಿತ್ರದ ಮೇಲೆ ನನಗೆ ಹಕ್ಕಿದೆ. ನಾಲ್ಕು ತಿಂಗಳ ಹಿಂದೆಯೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿದ್ದೆ. ಚಿತ್ರಕತೆ ತೀರಾ ಕೆಟ್ಟದಾಗಿತ್ತು. ಅದನ್ನು ಸುಸ್ಥಿತಿಗೆ ತರಲು ಬಹಳಷ್ಟು ಶ್ರಮಿಸಿದ್ದೇನೆ ಎನ್ನುತ್ತಾರೆ.

ಕಳೆದ18 ವರ್ಷಗಳಿಂದ ರಘುವೀರ್ ನನಗೆ ಆತ್ಮೀಯ. ನನ್ನ ಬಳಿ ಕ್ಷಮೆ ಕೇಳಿದರೆ ಖಂಡಿತವಾಗಿ ಆ ಚಿತ್ರಕತೆಯನ್ನು ಅವರಿಗೇ ಕೊಡುತ್ತೇನೆ. ರಘುವೀರ್ ನನ್ನ ಬಳಿ ಕುಡಿದು ತುಂಬ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಎಂಟು ಚಿತ್ರಗಳನ್ನು ನಿರ್ದೇಶಿಸಿದ್ದು ಮೂರು ಚಿತ್ರಗಳನ್ನು ನಿರ್ಮಿಸಿದ್ದೇನೆ. ಉತ್ತಮ ಚಿತ್ರಕತೆ ಮತ್ತು ಹಾಡುಗಳಿಂದ ರಘುವೀರ್ ಮೊದಲ ಚಿತ್ರ ಚೈತ್ರದ ಪ್ರೇಮಾಂಜಲಿ(ಎಸ್ ನಾರಾಯಣ್ ನಿರ್ದೇಶನ) ಗೆದ್ದಿತ್ತು ಎಂಬುದನ್ನು ರಘುವೀರ್ ಮರೆಯಬಾರದು. ಹೀರೋ ಅನ್ನಿಸಿಕೊಳ್ಳಲು ರಘುವೀರ್ ನಾಲಾಯಕ್ ಎಂದು ನಿರ್ದೇಶಕ ರಾಜು ಕೆಂಡಮಂಡಲವಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada