For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ತಾರೆ ಮೀರಾ ಜಾಸ್ಮಿನ್‍ಗೆ ಕೋರ್ಟ್ ಸಮನ್ಸ್

  By Rajendra
  |

  ಜನಪ್ರಿಯ ಸಿನಿಮಾ ತಾರೆ ಮೀರಾ ಜಾಸ್ಮಿನ್ ವಿರುದ್ಧ ಕೋಜಿಕೋಡ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಮೀರಾ ಜಾಸ್ಮಿನ್ ರು.5 ಲಕ್ಷ ಮುಂಗಡ ಹಣ ತೆಗೆದುಕೊಂಡು ಕಡೆಗೆ ಚಿತ್ರೀಕರಣಕ್ಕೆ ಬರಲಿಲ್ಲ ಎಂದು ಎಂದು ಆರೋಪಿಸಿ ಕೆ ಎ ದೇವರಾಜ್ ಎಂಬ ಮಲಯಾಳಂ ನಿರ್ಮಾಪಕ ಹಾಗೂ ನಿರ್ದೇಶಕ ಕೋರ್ಟ್ ಮೆಟ್ಟಿಲೇರಿದ್ದರು.

  ಕೋಜಿಕೋಡ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಕಾರಣಾಂತರಗಳಿಂದ ತಾವು ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕೊಂಚ ವಿನಾಯಿತಿ ನೀಡಬೇಕು ಎಂದು ಮೀರಾ ಜಾಸ್ಮಿನ್ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಕೇರಳ ಹೈಕೋರ್ಟ್ ಮೀರಾ ಅರ್ಜಿಯನ್ನು ತಿರಸ್ಕರಿಸಿ ಆಗಸ್ಟ್ 8ರಂದು ಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಿದೆ.

  'ಸ್ವಪ್ನಮಲ್ಲಿಕ' ಎಂಬ ಚಿತ್ರಕ್ಕೆ ಮೀರಾ ಸಹಿಹಾಕಿದ್ದರು. ಈಗ ಮೀರಾ ಕೈಕೊಟ್ಟಿರುವ ಕಾರಣ ಚಿತ್ರ ನಿರ್ಮಾಪಕರು ಕತೆಯನ್ನು ಬದಲಾಯಿಸಿ ಮತ್ತೊಬ್ಬ ತಾರೆಯನ್ನು ಕರೆತರುವುದಾಗಿ ತಿಳಿಸಿದ್ದಾರೆ. ಇಜ್ಜೋಡು, ದೇವರು ಕೊಟ್ಟ ತಂಗಿ, ಅರಸು ಸೇರಿದಂತೆ ಮುಂತಾದ ಕನ್ನಡ ಚಿತ್ರಗಳಲ್ಲಿ ಮೀರಾ ಅಭಿನಯಿಸಿದ್ದಾರೆ. (ಏಜೆನ್ಸೀಸ್)

  English summary
  The Chief Judicial Magistrate Court (CJM) in Kozhikode issued summons to popular actress Meera Jasmine in a case filed by producer-director K.A. Devarajan, alleging that the actress had taken an advance of Rs. 5 lakhs from him to do the film Swapnamalika, but failed to honour her commitment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X