»   »  ಜೊತೆಗಾರನಿಗೆ ಲವ್ಲಿಸ್ಟಾರ್ ಪ್ರೇಮ್ ಎಳ್ಳುನೀರು!

ಜೊತೆಗಾರನಿಗೆ ಲವ್ಲಿಸ್ಟಾರ್ ಪ್ರೇಮ್ ಎಳ್ಳುನೀರು!

Posted By:
Subscribe to Filmibeat Kannada
Prem Kumar and Ramya in Jothegara
'ಜೊತೆಗಾರ'ಚಿತ್ರೀಕರಣದ ವೇಳೆ ತನಗೆ ಅಪಮಾನವಾಗಿದೆ. ಚಿತ್ರದ ನಿರ್ಮಾಪರು ನನ್ನ ಬಗ್ಗೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿ ಹೆಸರು ಕೆಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಜೊತೆಗಾರ ಚಿತ್ರದ ನಿರ್ಮಾಪರ ಧೋರಣೆಯಿಂದ ನಾನು ಬೇಸತ್ತಿದ್ದೇನೆ. ಚಿತ್ರದ ಮುಂದಿನ ಚಟುವಟಿಕೆಗಳಿಂದ ದೂರ ಸರಿಯುತ್ತಿರುವುದಾಗಿ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರೇಮ್ ಮತ್ತು ನಿರ್ಮಾಪಕ ಅಶ್ವಿನಿ ರಾಮ್ ಕುಮಾರ್ ನಡುವೆ ಹೊಗೆಯಾಡುತ್ತಿದ್ದ್ದ ದ್ವೇಷ ಈಗ ದುತ್ತನೆ ಹೊತ್ತಿಕೊಂಡಿದೆ.

''ಚಿತ್ರೀಕರಣದ ವೇಳೆ ನನ್ನನ್ನುಅವಹೇಳನ ಮಾಡಲಾಯಿತು. ನನ್ನನ್ನು ಸಹ ನಟ ಎಂದು ಕರೆದಿದ್ದಾರೆ. ಹೀಗೆ ನಿಂದಿಸಿದ ವ್ಯಕ್ತಿಗೆ ಫೋನ್ ಮಾಡಿ ಮುಂದಿನ ಚಟುವಟಿಕೆಗಳಲ್ಲಿ ತಾನು ಭಾಗಿಯಾಗುವುದಿಲ್ಲ'' ಎಂದು ಹೇಳಿದ್ದಾಗಿ ಪ್ರೇಮ್ ತಿಳಿಸಿದ್ದಾರೆ. 'ತಾಕತ್ತು' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಯದಲ್ಲಿ ಸುದ್ದಿ ಮಿತ್ರರೊಂದಿಗೆ ಮಾತನಾಡಿದ ಪ್ರೇಮ್, ಜೊತೆಗಾರ ಚಿತ್ರದ ನಿರ್ಮಾಪಕರು 'ಹಾಯ್ ಬೆಂಗಳೂರು' ಪತ್ರಿಕೆಯೊಂದಿಗೆ ನನ್ನ ಬಗ್ಗೆ ಕೆಟ್ಟದಾಗಿ ಹೇಳಿದ್ದಾರೆ ಎಂದರು.

ಜೊತೆಗಾರ ಚಿತ್ರಕ್ಕಾಗಿ ನಟಿ ರಮ್ಯಾ ಅವರಿಗೆ ರು.30 ಲಕ್ಷ ಸಂಭಾವನೆ ನೀಡಲಾಗಿದೆಯಂತೆ. ಚಿತ್ರದ ನಾಯಕ ನಟ ಪ್ರೇಮ್ ಪಡೆದ ಸಂಭಾವನೆ ಕೇವಲ ರು.15 ಲಕ್ಷ! ''ಚಿತ್ರದ ನಿಜವಾದ ಬಂಡವಾಳ ರಮ್ಯಾ ಹೊರತು ಮತ್ಯಾರು ಅಲ್ಲ.ರಮ್ಯಾ ಅವರನ್ನು ಉದ್ದೇಶವಾಗಿಟ್ಟುಕೊಂಡೇ 'ಜೊತೆಗಾರ' ಚಿತ್ರಕತೆಯನ್ನು ಸಿದ್ಧಪಡಿಸಲಾಗಿದೆ. ಪ್ರೇಮ್ ಪಾತ್ರ ಇದಕ್ಕೆ ಪೂರಕ ಅಷ್ಟೇ '' ಎಂದು ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ 'ಹಾಯ್ ಬೆಂಗಳೂರು' ಪತ್ರಿಕೆಯೊಂದಿಗೆ ಹೇಳಿ ಪ್ರಕಟಿಸಿದ್ದಾರೆ.

ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ರಮ್ಯಾ ಇದ್ದರೆ ನಾನು ನಟಿಸುವುದಿಲ್ಲ ಎಂದಿದ್ದರು ಪ್ರೇಮ್. ಆರಂಭದಲ್ಲಿ ರಮ್ಯಾ ಸಹಾ ಪ್ರೇಮ್ ಜತೆ ನಟಿಸಲು ಒಪ್ಪಲಿಲ್ಲ. ನಾನೇ ಇಬ್ಬರನ್ನು ನಟಿಸುವಂತೆ ಓಲೈಸಿದ್ದು. ರಾಮ್ ಪ್ರಸಾದ್ ಜತೆ ಮುನಿಸುಕೊಂಡಿರುವ ಪ್ರೇಮ್ 'ಲವ್ಲಿ ಸ್ಟಾರ್' ಜತೆ ರಮ್ಯಾಳ 'ಲಕ್ಕಿ ಸ್ಟಾರ್' ಬಿರುದನ್ನು ಸೇರಿಸಲು ತಕಾರಾರು ಮಾಡುತ್ತಿರುವುದಾಗಿ ಪತ್ರಿಕೆಯೊಂದಿಗೆ ರಾಮ್ ಪ್ರಸಾದ್ ಹೇಳಿಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಪ್ರೇಮ್ ತಾವು ಮುಂದಿನ ಚಟುವಟಿಕೆಗಳಿಂದ ದೂರ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನಂ.1 ಪಟ್ಟಕ್ಕಾಗಿ ನಟಿ ರಮ್ಯಾ ಹಾರಾಟ,ಹೋರಾಟ!
ರಮ್ಯಾ ಜೊತೆಗಾರನಿಗೆ ಹಾಡೊಂದು ಬಾಕಿ
ಕನ್ನಡ ಗಾಯಕರ ಮೇಲೆ ಹಿಂದಿ ಗಾಯಕರ 'ಸವಾರಿ'
ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!
ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada