»   »  ಶೈನಿ ಅತ್ಯಾಚಾರಎಸಗಿದ್ದು ಖಚಿತ :ಪೊಲೀಸ್

ಶೈನಿ ಅತ್ಯಾಚಾರಎಸಗಿದ್ದು ಖಚಿತ :ಪೊಲೀಸ್

Posted By:
Subscribe to Filmibeat Kannada

ಮುಂಬೈ, ಜೂ. 30 : ಬಾಲಿವುಡ್ ನಟ ಶೈನಿ ಅಹುಜಾ ಮನೆಗೆಲಸದ ಯುವತಿಯ ಮೇಲೆ ಅತ್ಯಾಚಾರ ಮಾಡಿರುವುದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ತಿಳಿಸಿದ್ದಾರೆ. ಈ ಮಧ್ಯೆ ಜುಲೈ 2ರ ವರೆಗೆ ನ್ಯಾಯಾಂಗ ಬಂಧನದಲ್ಲಿರುವ ಅಹುಜಾ ಅವರು ಎಲ್ಲ ವಿಚಾರಣೆಗಳು ಪೂರ್ಣಗೊಂಡಿರುವುದರಿಂದ ಜಾಮೀನು ನೀಡಬೇಕೆಂದು ಸೆಷನ್ಸ್ ಕೋರ್ಟ್ ಗೆ ಮೊರೆಹೋಗಲಾಗಿದೆ.

ವೈದ್ಯಕೀಯ ಪ್ರಮಾಣ ಪತ್ರ, ಡಿಎನ್ ಎ ವರದಿ ಮತ್ತು ಅತ್ಯಾಚಾರಕ್ಕೊಳಗಾದ ಯುವತಿ ಹೇಳಿಕೆಗಳನ್ನು ಕ್ರೋಢಿಕರಿಸಲಾಗಿದೆ. ಶೈನಿ ಅತ್ಯಾಚಾರ ಮಾಡಿರುವುದು ಖಚಿತವಾಗಿದೆ. ಈ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು ಎಂದು ಗುಪ್ತಾ ವಿವರಿಸಿದರು.

ವೈದ್ಯಕೀಯ ವರದಿಯಲ್ಲಿ ಶೈನಿ ಅತ್ಯಾಚಾರ ಎಸಗುವ ಸಂದರ್ಭದಲ್ಲಿ ಮದ್ಯಪಾನ ಮಾಡಿರಲಿಲ್ಲ. ಸಹಜವಾದ ಸ್ಥಿತಿಯಲ್ಲಿದ್ದಾಗ ಈ ಕೃತ್ಯ ಎಸಗಿದ್ದಾನೆ. ಕಳೆದ ಜೂನ್ 13 ರಂದು ಮನೆಗೆಲಸದ ಯುವತಿ ಮೇಲೆ ಶೈನಿ ಅತ್ಯಾಚಾರ ನಡೆಸಿದ್ದ. ನಂತರ ಬಂಧನಕ್ಕೊಳಗಾಗಿ ಪೊಲೀಸರೆದುರು ತಪ್ಪೊಪ್ಪಿಕೊಂಡಿದ್ದ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada