Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭೀಮಾ ತೀರದಲ್ಲಿ ನಿರ್ಮಾಪಕರಿಗೆ ರವಿ ಬೆಳಗೆರೆ ಆವಾಜ್
'ಭೀಮಾ ತೀರದಲ್ಲಿ' ಚಿತ್ರದ ವಿವಾದ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ಕೃತಿ 'ಭೀಮಾ ತೀರದ ಹಂತಕರು' ಕತೆಯನ್ನು ಕದ್ದು ಚಿತ್ರವನ್ನು ತೆರೆಗೆ ತಂದಿದ್ದಾರೆ ಎಂದು 'ಹಾಯ್ ಬೆಂಗಳೂರು' ವಾರ ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ನೇರಾನೇರವಾಗಿ ಆರೋಪಿಸಿದ್ದಾರೆ. 'ಟಿವಿ 9' ಕನ್ನಡ ಸುದ್ದಿವಾಹಿನಿ ಶನಿವಾರ ಮಧ್ಯಾಹ್ನ (ಏ.7) ಪ್ರಸಾರ ಮಾಡಿದ ವಿಶೇಷ ವರದಿಯ ಹೈಲೈಟ್ಸ್ ಹೀಗಿವೆ.
ತಮ್ಮ ಕೃತಿಯನ್ನು ಕದ್ದು ಚಿತ್ರವನ್ನು ತೆರೆಗೆ ತಂದಿದ್ದಾರೆ. ಆದರೆ ಚಿತ್ರದಲ್ಲಿ ತಮಗೆ ಕನಿಷ್ಠ ಪಕ್ಷ ಯಾವುದೇ ಕೃತಜ್ಞತೆಗಳನ್ನು ತಿಳಿಸಿಲ್ಲ. ಚಿತ್ರವನ್ನು ತೆರೆಗೆ ತರುವುದಕ್ಕೂ ಮುನ್ನ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ನಮ್ಮನ್ನು ಒಮ್ಮೆಯೂ ಸಂಪರ್ಕಿಸಿಲ್ಲ. ಅಣಜಿ ನಾಗರಾಜ್ ಅವರಂತಹ 'ಅವಿವೇಕಿ' ಇನ್ನೊಬ್ಬನಿಲ್ಲ ಎಂದು ರವಿ ಬೆಳಗೆರೆ ತರಾಟೆಗೆ ತೆಗೆದುಕೊಂಡರು.
ಆದರೆ ಈ ಬಗ್ಗೆ ನಿರ್ಮಾಪಕ ಅಣಜಿ ನಾಗರಾಜ್ ಅವರು ಟಿವಿ 9 ಸ್ಟುಡಿಯೋದಲ್ಲಿ ಮುಗುಮ್ಮಾಗಿ ಕುಳಿತು ರವಿ ಬೆಳಗೆರೆ ಅವರ ಯಾವುದೇ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವಲ್ಲಿ ವಿಫಲರಾದರು. ಅಣಜಿ ಮೇಲೆ ರವಿ ಬೆಳಗೆರೆ ಮಾತಿನ ಚಾಟಿ ಬೀಸಿ ಹಿಗ್ಗಾಮುಗ್ಗಾ ಜಡಿದರು. (ಒನ್‌ಇಂಡಿಯಾ ಕನ್ನಡ)