For Quick Alerts
  ALLOW NOTIFICATIONS  
  For Daily Alerts

  ಮತ್ತೆ ಹಾರಲಿದೆ 'ಗಾಳಿಪಟ': ಭಟ್ಟರ ಅಡ್ಡಾಗೆ ಬಂದ ಮತ್ತೊಬ್ಬ ಸ್ಟಾರ್ ನಟ!

  By Bharath Kumar
  |

  ನಿರ್ದೇಶಕ ಯೋಗರಾಜ್ ಭಟ್ ಸದ್ಯ 'ಮುಗುಳುನಗೆ' ಚಿತ್ರದ ಚಿತ್ರೀಕರಣದಲ್ಲಿ ಮುಳುಗಿ ಹೋಗಿದ್ದಾರೆ. ಹಲವು ವರ್ಷಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಸಿನಿಮಾ ತಯಾರಾಗ್ತಿದೆ. ಹೀಗಿರುವಾಗ ಭಟ್ಟರ ಬಳಗದಿಂದ ಮತ್ತೊಂದು ಬಿಸಿಬಿಸಿ ಸುದ್ದಿ ಹರಿದಾಡುತ್ತಲೇ ಇದೆ.

  ಅದೇನಪ್ಪಾ ಅಂದ್ರೆ, 'ಗಾಳಿಪಟ' ಚಿತ್ರದ ಮುಂದುವರೆದ ಭಾಗ ಬರುತ್ತೆ ಎನ್ನುವುದು. ಇದು ಅಧಿಕೃತವಾಗಿ ಖಚಿತವಾಗದಿದ್ದರೂ, ಪಾರ್ಟ್ 2 ಬರುವುದು ಬಹುತೇಕ ಕನ್ ಫರ್ಮ್ ಎನ್ನಲಾಗುತ್ತಿದೆ.[ಗಣೇಶ್-ಭಟ್ ಕಾಂಬಿನೇಷನ್ ನಲ್ಲಿ 'ಗಾಳಿಪಟ-2' ಬರಲಿದೆ.. ನಿರೀಕ್ಷಿಸಿ..]

  ಇನ್ನು ಗಾಳಿಪಟ ಚಿತ್ರದಲ್ಲಿದ್ದ ಚಿತ್ರದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ 'ಗಾಳಿಪಟ-2'ನಲ್ಲೂ ಇರ್ತಾರ? ಎಂಬ ಕುತೂಹಲ ಹೆಚ್ಚಾಗಿದೆ. ಹೀಗಿರುವಾಗ 'ಗಾಳಿಪಟ' ಚಿತ್ರದ ಹಳೆ ಸದಸ್ಯರ ಜೊತೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿಯಾಗಲಿದೆ ಎಂಬ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

  ಮತ್ತೆ ಬರಲಿದೆ 'ಗಾಳಿಪಟ'

  ಮತ್ತೆ ಬರಲಿದೆ 'ಗಾಳಿಪಟ'

  2008 ರಲ್ಲಿ ಬಿಡುಗಡೆಯಾಗಿದ್ದ 'ಗಾಳಿಪಟ'ದ ಮುಂದುವರೆದ ಭಾಗ ಬರಲಿದೆಯಂತೆ. ಯೋಗರಾಜ್ ಭಟ್ ನಿರ್ದೇಶನದಲ್ಲೇ ಮತ್ತೊಮ್ಮೆ 'ಗಾಳಿಪಟ' ಹಾರಲಿದೆಯಂತೆ.

  ಭಟ್ಟರ ತಂಡಕ್ಕೆ ಪ್ರಜ್ವಲ್ ಎಂಟ್ರಿ!

  ಭಟ್ಟರ ತಂಡಕ್ಕೆ ಪ್ರಜ್ವಲ್ ಎಂಟ್ರಿ!

  ಮೂಲಗಳ ಪ್ರಕಾರ 'ಗಾಳಿಪಟ-2' ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದಾರಂತೆ. ಈ ಮೂಲಕ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಮೊದಲ ಭಾರಿಗೆ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳಲಿದ್ದಾರೆ.

  ರಾಜೇಶ್ ಕೃಷ್ಣನ್ ಡೌಟು!

  ರಾಜೇಶ್ ಕೃಷ್ಣನ್ ಡೌಟು!

  ಮೊದಲ ಭಾಗದಲ್ಲಿ ಗಣೇಶ್, ದಿಗಂತ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಆದ್ರೆ, ಈ ಬಾರಿ ರಾಜೇಶ್ ಕೃಷ್ಣನ್ ಅವರ ಬದಲು ಪ್ರಜ್ವಲ್ ದೇವರಾಜ್ ಬಣ್ಣ ಹಚ್ಚಲಿದ್ದಾರಂತೆ. ಹೀಗಾಗಿ ರಾಜೇಶ್ ಕೃಷ್ಣನ್ 'ಗಾಳಿಪಟ-2' ಚಿತ್ರದಲ್ಲಿ ಇರುವುದು ಅನುಮಾನವಂತೆ.

  ಒಂದಾದ ಭಟ್-ದಿಗಂತ್

  ಒಂದಾದ ಭಟ್-ದಿಗಂತ್

  ದಿಗಂತ್ ಅಭಿನಯದ 'ಪಂಚರಂಗಿ' ಚಿತ್ರವನ್ನ ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್, ನಂತರ ದಿಗಂತ್ ಅಭಿನಯದ 'ಲೈಪು ಇಷ್ಟೇನೆ' ಚಿತ್ರವನ್ನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಈ ಚಿತ್ರದ ನಂತರ ಯೋಗರಾಜ್ ಭಟ್ ಹಾಗೂ ದಿಗಂತ್ ಕಾಂಬಿನೇಷನ್ ನಲ್ಲಿ ಯಾವುದು ಸಿನಿಮಾ ಬಂದಿಲ್ಲ. ಈಗ 'ಗಾಳಿಪಟ-2' ಚಿತ್ರದ ಮುಖಾಂತರ ಸ್ಟಾರ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ.

  'ಗಾಳಿಪಟ'ದಲ್ಲಿರುತ್ತಾ ಹಳೇ ತಂಡ!

  'ಗಾಳಿಪಟ'ದಲ್ಲಿರುತ್ತಾ ಹಳೇ ತಂಡ!

  ಇನ್ನುಳಿದಂತೆ ಮೊದಲ ಭಾಗದಲ್ಲಿದ್ದ ಅನಂತ್ ನಾಗ್, ಡೈಸಿ ಭೂಪಣ್ಣ, ನೀತು, ಭಾವನಾ ರಾವ್, ಮುಂದುವರೆದ ಭಾಗದಲ್ಲಿ ಇರ್ತಾರ ಎಂಬ ಕುತೂಹಲ ಕಾಡುತ್ತೆ. ಆದ್ರೆ, ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ.

  ಗೋಲ್ಡನ್ ಸ್ಟಾರ್ ಪಕ್ಕಾ!

  ಗೋಲ್ಡನ್ ಸ್ಟಾರ್ ಪಕ್ಕಾ!

  ಸದ್ಯದ ಮಟ್ಟಿಗೆ ನೋಡುವುದಾದರೇ ಗೋಲ್ಡನ್ ಸ್ಟಾರ್ ಗಣೇಶ್ ಭಾಗ-2ರಲ್ಲಿ ಅಭಿನಯಿಸುವುದು ಖಚಿತ ಎನ್ನಲಾಗುತ್ತಿದೆ. ಗಣೀ ಜೊತೆಯಲ್ಲಿ ದಿಗಂತ್ ಫಿಕ್ಸ್. ಪ್ರಜ್ವಲ್ ಬರುವ ಸಾಧ್ಯತೆಯಿದೆ. ಎಲ್ಲ ಅಂದುಕೊಂಡಂತೆ ಆದರೇ, ಯೋಗರಾಜ್ ಭಟ್ ಅವರೇ ಈ ಚಿತ್ರವನ್ನ ನಿರ್ಮಾಣ ಮಾಡಿ, ನಿರ್ದೇಶನ ಮಾಡಲಿದ್ದಾರೆ.

  English summary
  Dainamic Prince Prajwal Devraj One of the Hero for Gaalipata 2. According to Source The Movie has Starreing Ganesh, Diganth and Prajwal Devraj and Directed by Yograj Bhat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X