»   » 'ಕುರುಕ್ಷೇತ್ರ'ಕ್ಕೆ ಕಾಲಿಟ್ಟ ಮತ್ತಿಬ್ಬರು ಸ್ಟಾರ್ ನಟರು!

'ಕುರುಕ್ಷೇತ್ರ'ಕ್ಕೆ ಕಾಲಿಟ್ಟ ಮತ್ತಿಬ್ಬರು ಸ್ಟಾರ್ ನಟರು!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ 50 ನೇ ಚಿತ್ರ ಕುರುಕ್ಷೇತ್ರಕ್ಕೆ ಒಬ್ಬೊಬ್ಬರೇ ಕಲಾವಿದರ ಆಯ್ಕೆ ಆಗುತ್ತಿದ್ದಾರೆ. ಈಗ ಲೇಟೆಸ್ಟ್ ಆಗಿ ಮತ್ತಿಬ್ಬರು ಸ್ಟಾರ್ ನಟರು ದರ್ಶನ್ 'ಕುರುಕ್ಷೇತ್ರ'ವನ್ನ ಸೇರಿಕೊಂಡಿದ್ದಾರಂತೆ.

ಇತ್ತಿಚೆಗಷ್ಟೇ ಬಹುಭಾಷಾ ನಟಿ ಸ್ನೇಹ ದ್ರೌಪದಿ ಪಾತ್ರಕ್ಕಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೆ ಕುಂತಿ ಪಾತ್ರಕ್ಕೆ ಜೂಲಿ ಲಕ್ಷ್ಮಿ ಹೆಸರು ಕೇಳಿ ಬರುತ್ತಿದೆ. ಹೀಗಿರುವಾಗ ಕನ್ನಡದ ಇಬ್ಬರು ನಟರು ಹೊಸ ಎಂಟ್ರಿ ಆಗಿದ್ದಾರೆ.

ಹಾಗಿದ್ರೆ, 'ಕುರುಕ್ಷೇತ್ರ'ಕ್ಕಾಗಿ ಪ್ರವೇಶ ಮಾಡುತ್ತಿರುವ ಆ ಇಬ್ಬರು ಸ್ಟಾರ್ ನಟರು ಯಾರು? ಯಾವ ಪಾತ್ರವನ್ನ ನಿರ್ವಹಿಸಲಿದ್ದಾರೆ? ಮುಂದೆ ಓದಿ....

ಶಶಿಕುಮಾರ್ ಮತ್ತು ಸಾಯಿಕುಮಾರ್

ದರ್ಶನ್ 'ಕುರುಕ್ಷೇತ್ರ'ಕ್ಕಾಗಿ ಡೈಲಾಗ್ ಕಿಂಗ್ ಸಾಯಿ ಕುಮಾರ್ ಮತ್ತು ಸುಪ್ರೀ ಹೀರೋ ಶಶಿಕುಮಾರ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.

ದರ್ಶನ್ 'ಕುರುಕ್ಷೇತ್ರ'ಕ್ಕೆ 'ಕುಂತಿ' ಆಯ್ಕೆ ಆದರು.!

ಸಾಯಿಕುಮಾರ್ ಪಾತ್ರವೇನು?

ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು 'ಕುರುಕ್ಷೇತ್ರ'ದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಆದ್ರೆ, ಯಾವ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬುದನ್ನ ಗೌಪ್ಯವಾಗಿಡಲಾಗಿದ್ಯಂತೆ. ಅಂದ್ಹಾಗೆ, ಸಾಯಿಕುಮಾರ್ ಹಾಗೂ ದರ್ಶನ್ ಈ ಹಿಂದೆ 'ಭಗವಾನ್', 'ಬೃಂದಾವನ' ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ.

ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.!

ಶಶಿಕುಮಾರ್ ಪಾತ್ರವೇನು?

ಇನ್ನು ದರ್ಶನ್ ಅಭಿನಯಿಸಿದ್ದ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ನಟಿಸಿದ್ದ ಶಶಿಕುಮಾರ್ ಮತ್ತೊಮ್ಮ ದರ್ಶನ್ ಅವರ ಜೊತೆ ಕುರುಕ್ಷೇತ್ರದಲ್ಲೂ ಯಾಗುತ್ತಿದ್ದಾರಂತೆ. ಆದ್ರೆ, ಶಶಿಕುಮಾರ್ ಅವರ ಪಾತ್ರವನ್ನ ಕೂಡ ಗೌಪ್ಯವಾಗಿ ಇಡಲಾಗಿದೆಯಂತೆ.

50ನೇ ಸಿನಿಮಾ 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ದರ್ಶನ್ ಸಿಕ್ಕಾಪಟ್ಟೆ ಡೆಡಿಕೇಶನ್

ಮುನಿರತ್ನ ಹುಟ್ಟುಹಬ್ಬಕ್ಕೆ ಉತ್ತರ

ದರ್ಶನ್ ಹಾಗೂ ರವಿಚಂದ್ರನ್ ಅವರ ಪಾತ್ರಗಳು ಖಚಿತವಾಗಿದೆ. ಉಳಿದ ಎಲ್ಲಾ ಪಾತ್ರಗಳ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ಎಲ್ಲಾ ನಿರೀಕ್ಷೆ, ಕುತೂಹಲಗಳಿಗೆ ನಿರ್ಮಾಪಕ ಮುನಿರತ್ನ ಅವರ ಹುಟ್ಟುಹಬ್ಬದಂದು ಉತ್ತರ ಸಿಗಲಿದೆ.

English summary
According to Source Kannada Actor Sai Kumar and Shashi Kumar Also Joining Sets of Kurukshetra. Darshan Playing Duryodhan. Kurukshetra Movie Directed By Naganna and Produced By Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada