»   » ಶ್ರೀನಗರ ಕಿಟ್ಟಿ ಮತ್ತೆ ಮದುವೆಯಾಗಿದ್ದಾರಾ!

ಶ್ರೀನಗರ ಕಿಟ್ಟಿ ಮತ್ತೆ ಮದುವೆಯಾಗಿದ್ದಾರಾ!

By: ಜೀವನರಸಿಕ
Subscribe to Filmibeat Kannada

ಫ್ರೆಶ್ ಅನ್ನಿಸೋ ಈ ಫೋಟೋ ನೋಡ್ತಿದ್ರೆ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಯಾರ ಜೊತೆಗೋ ಮದುವೆ ಆಗಿಬಿಟ್ರಾ ಅಂತ ಒಂದು ಕ್ಷಣ ಅನ್ನಿಸದೇ ಇರೋದಿಲ್ಲ. ಸದ್ಯ ಕಿಟ್ಟಿ ಎಷ್ಟು ಬಿಜಿಯಾಗಿದ್ದಾರೆಂದರೆ ಕತ್ರೀನಾ ಕೈಫ್ ಸಿಕ್ತೀನಿ ಅಂದ್ರೂ ಮದ್ವೆಯಾಗುವಷ್ಟು ಫ್ರೀ ಇಲ್ಲ.

ಯಾಕಂದ್ರೆ ಕಿಟ್ಟಿ ನಾಲ್ಕೈದು ಸಿನಿಮಾಗಳಲ್ಲಿ ಫುಲ್ ಬಿಜಿ. 'ಬಹುಪರಾಕ್' ರಿಲೀಸ್ ಗೆ ಹತ್ತಿರವಾಗ್ತಿದ್ರೆ 'ಸವಾರಿ-2' ಶೂಟಿಂಗ್ ನಡೀತಿದೆ. 'ಗೀತಾಂಜಲಿ' ಕೂಡ ಶೂಟಿಂಗ್ ಹಂತದಲ್ಲಿದೆ. ಸದ್ಯಕ್ಕೆ ಈ ಮದುವೆ ಫೋಟೋ ಅಷ್ಟೇ ಸಿಕ್ಕಿರುವುದು! [ಸಿಂಪಲ್ಲಾಗಿ ಕಾಯ್ತಾ ಇರಿ 'ಬಹುಪರಾಕ್' ಬರ್ತಾ ಇದೆ]


ಈ ಫೋಟೋ ನೋಡಿದರೆ ಕಿಟ್ಟಿ ಮತ್ತೆ ಮದುವೆಯಾದರೆ ಅಂಥ ಅನ್ನಿಸದೆ ಇರದು. ಇಷ್ಟಕ್ಕೂ ಈ ಫೋಟೋದಲ್ಲಿರುವ ನಟಿ ಯಾರು ಎಂದು ಗೊತ್ತಾಯ್ತಾ? ಎಲ್ಲೋ ನೋಡಿದ್ದೀವಲ್ಲಾ ಎಂದು ನಿಮಗೂ ಅನ್ನಿಸುತ್ತದೆ. 'ಗೀತಾಂಜಲಿ' ಚಿತ್ರದ ನಾಯಕಿ ಸನಾತನಿ ಈಕೆ.

'ಕ್ರೇಜಿ ಕುಟುಂಬ' ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ ಚೆಲುವೆ ಸನಾತನಿ. ಸೀರಿಯಸ್ ಆಗ್ಬೇಡಿ ಇಷ್ಟಕ್ಕೂ ಕಿಟ್ಟಿಯವ್ರ ಈ ಮದುವೆ ನಡೆದಿರೋದು 'ಗೀತಾಂಜಲಿ' ಸಿನಿಮಾದಲ್ಲಿ. ಸಿನಿಮಾದಲ್ಲಿ ನಿಖಿತಾ ನಾರಾಯಾಣ್ ಮತ್ತು ಸನಾತನಿ ಕಿಟ್ಟಿಗೆ ಜೋಡಿಯಾಗಿದ್ದಾರೆ. ಇದೊಂದು ಫ್ಯಾಮಿಲಿ ಓರಿಯಂಟೆಡ್ ಪ್ರೇಮಕಥೆ.

English summary
Is Diamond Star Srinagara Kitty married again? Don't confuse it's an exclusive photo from his upcoming film Geethanjali with actress Sanatani. Kitty will be seen playing a lover boy in Geethanjali.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada