»   » ಯಶ್-ರಾಧಿಕಾ ಪಂಡಿತ್ ಮದುವೆ ದಿನಾಂಕ ಫಿಕ್ಸ್ ಆಯ್ತಾ?

ಯಶ್-ರಾಧಿಕಾ ಪಂಡಿತ್ ಮದುವೆ ದಿನಾಂಕ ಫಿಕ್ಸ್ ಆಯ್ತಾ?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಎಲ್ಲರ ಹಾಟ್ ಫೆವರಿಟ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ಇಡೀ ಸ್ಯಾಂಡಲ್ ವುಡ್ ಮಂದಿಗೆ ಹಬ್ಬ ಆಗಿತ್ತು.

ತೆರೆಯ ಮೇಲೆ ಕ್ಯೂಟ್ ಆಗಿ ರೋಮ್ಯಾನ್ಸ್ ಮಾಡುತ್ತಾ ಎಲ್ಲರಿಗೂ ಮೋಡಿ ಮಾಡುತ್ತಿದ್ದ ಈ ಜೋಡಿ ನಿಜ ಜೀವನದಲ್ಲಿ ದಂಪತಿಗಳಾಗುತ್ತಿದ್ದಾರೆ ಎಂದಾಗ ಎಲ್ಲರಿಗೂ ಖುಷಿಯೋ ಖುಷಿ.

ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ, ಈ ಸ್ಟಾರ್ ಜೋಡಿಯ ಮದುವೆ ದಿನಾಂಕ ಕೂಡ ಇದೀಗ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.[ಫೋಟೋ ಆಲ್ಬಂ: ರಾಜ-ರಾಣಿಯ ನಿಶ್ಚಿತಾರ್ಥದ ಅದ್ಭುತ ಕ್ಷಣಗಳು]

ಯಾವಾಗ ಈ ಮುದ್ದಾದ ಜೋಡಿ ಸಪ್ತಪದಿ ತುಳಿಯಲಿದ್ದಾರೆ?, ಮದುವೆ ಎಲ್ಲಿ ನಡೆಯುತ್ತೆ?, ಏನ್ಕತೆ ನೋಡೋಣ, ಮುಂದೆ ಓದಿ...

ಯಾವಾಗ ಮದುವೆ?

ಸತತ ನಾಲ್ಕನೇ ಬಾರಿಗೆ ತೆರೆಯ ಮೇಲೆ ರೋಮ್ಯಾನ್ಸ್ ಮಾಡಿರುವ ಈ ಜೋಡಿ ಇನ್ನುಮುಂದೆ ನಿಜ ಜೀವನದಲ್ಲೂ ದಂಪತಿಗಳಾಗಿ ರೋಮ್ಯಾನ್ಸ್ ಮಾಡಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಸ್ಟಾರ್ ಜೋಡಿ ಡಿಸೆಂಬರ್ ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು ಆದರೆ ಡೇಟ್ ಮಾತ್ರ ಫಿಕ್ಸ್ ಆಗಿರಲಿಲ್ಲ.[ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ]

ಮದುವೆಗೆ ಮೂಹೂರ್ತ ಇಟ್ಟಾಯ್ತು

ಇದೀಗ ಈ ತಾರಾ ಜೋಡಿಯ ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಡಿಸೆಂಬರ್ 10 ಮತ್ತು 11ಕ್ಕೆ ಅದ್ಧೂರಿ ಮದುವೆ ನಡೆಯಲಿದೆ.['ಸಂತು' ಟ್ರೈಲರ್: ರೋಮ್ಯಾನ್ಸ್, ಡ್ಯುಯೆಟ್, ಫೈಟ್ ಎಲ್ಲವೂ ಭರ್ಜರಿಯಾಗಿದೆ]

ಅದ್ಧೂರಿ ಮದುವೆ ಎಲ್ಲಿ?

ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮದುವೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಯಶ್ ಅವರ ತಾಯಿ ಹೇಳಿದಂತೆ ಇಡೀ ಕರ್ನಾಟಕದಲ್ಲಿರುವ ಯಶ್ ಅವರ ಅಭಿಮಾನಿಗಳ ಸಮ್ಮುಖದಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆ ಆಗಲಿದೆ.

ಎರಡು ದಿನ ಮದುವೆ

ಯಶ್ ಕುಟುಂಬದವರು ಮಾತು ಕೊಟ್ಟಂತೆ, ಒಂದು ದಿನ ಮದುವೆ ಶಾಸ್ತ್ರ ನಡೆಯಲಿದ್ದು, ಎರಡನೇ ದಿನ ಬರೀ ಯಶ್ ಮತ್ತು ರಾಧಿಕಾ ಅವರ ಅಭಿಮಾನಿಗಳಿಗಾಗಿಯೇ ಮೀಸಲು. ಎಲ್ಲಾ ಅಭಿಮಾನಿಗಳ ಸಮ್ಮುಖದಲ್ಲಿ ಯಶ್-ರಾಧಿಕಾ ಅವರ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ ಎನ್ನುತ್ತಿವೆ ಮೂಲಗಳು.

ಇನ್ನು ಕಾಯೋದಷ್ಟೇ ಬಾಕಿ

ಇಷ್ಟು ದಿನ ಕ್ಯೂಟ್ ಕಪಲ್ ಗಳ ಮದುವೆ ಯಾವಾಗ ಅಂತ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳ ಕುತೂಹಲಕ್ಕೆ ಸ್ವಲ್ಪ ಮಟ್ಟಿಗೆ ಬ್ರೇಕ್ ಬಿದ್ದಿದೆ. ಇನ್ನೇನು ಮದುವೆಗೆ ಕಾಯೋ ಕೆಲಸ ಅಷ್ಟೇ ಬಾಕಿ ಇರೋದು.

ಕುಟುಂಬಸ್ಥರಿಂದ ಅಧೀಕೃತ ಮಾಹಿತಿ ಬಂದಿಲ್ಲ

ಸದ್ಯಕ್ಕೆ ಮೂಲಗಳಿಂದ ಮಾಹಿತಿ ಒದಗಿದ್ದು ಬಿಟ್ಟರೆ, ಯಶ್ ಅಥವಾ ರಾಧಿಕಾ ಪಂಡಿತ್ ಕುಟುಂಬಸ್ಥರು ಆಗಲಿ ಅಥವಾ ನಟ-ನಟಿ ಕಡೆಯಿಂದ ಈ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ಹೊರಬಂದಿಲ್ಲ.

'ಸಂತು' ತೆರೆಗೆ ಬರಲು ಸಜ್ಜಾಗಿದೆ

ಯಶ್ ಮತ್ತು ರಾಧಿಕಾ ಪಂಡಿತ್ ಮಗದೊಮ್ಮೆ ಒಂದಾಗಿ ಕಾಣಿಸಿಕೊಂಡಿರುವ 'ಸಂತು Straight Forward' ತೆರೆಗೆ ಬರಲು ಸಜ್ಜಾಗಿದ್ದು, ಅಕ್ಟೋಬರ್ 28, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.

English summary
Kannada Actor Yash and Kannada Actress Radhika Pandit's Marriage date fixed. Actor Yash and Actress Radhika Pandit is going to marry soon that too in the month of December 10 and 11th says sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada