TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ವಿಐಪಿ' ಮನೋರಂಜನ್ ಜೊತೆ 'ಈ' ಚೆಲುವೆ ಡ್ಯುಯೆಟ್ ಹಾಡ್ತಾರಾ.?
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರ 'ಸಾಹೇಬ' ಚಿತ್ರ ತೆರೆ ಕಾಣೋ ಮುನ್ನವೇ, ಅವರಿಗೆ ಮೂರು ಸಿನಿಮಾಗಳಲ್ಲಿ ನಟಿಸಲು ಆಫರ್ ಬಂದಿದೆ. ಈಗಾಗಲೇ ಶಾನ್ವಿ ಶ್ರೀವಾಸ್ತವ ಮತ್ತು ಮನೋರಂಜನ್ ಕಾಂಬಿನೇಷನ್ ನ 'ಸಾಹೇಬ' ರಿಲೀಸ್ ಗೆ ತಯಾರಾಗಿದ್ದು, ಅಕ್ಟೋಬರ್ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಇದೀಗ ಕಾಲಿವುಡ್ ನಟ ಧನುಷ್ ಕಾಣಿಸಿಕೊಂಡಿದ್ದ 'ವೇಲೈಯಿಲಾ ಪಟ್ಟದಾರಿ' ತಮಿಳು ಚಿತ್ರವನ್ನು ಕನ್ನಡಕ್ಕೆ ರಾಕ್ ಲೈನ್ ಅವರು ರೀಮೇಕ್ ಮಾಡುತ್ತಿದ್ದು, ಇದಕ್ಕೆ ಮನೋರಂಜನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಅಂತ ನಾವು ನಿಮಗೆ ಮಾಹಿತಿ ನೀಡಿದ್ವಿ.[ರಾಕ್ ಲೈನ್ ಜೊತೆ 'ವಿಐಪಿ'ಗೆ ಕೈ ಜೋಡಿಸುತ್ತಾರಾ ಮನೋರಂಜನ್?]
ಮಾತ್ರವಲ್ಲದೇ ಮನೋರಂಜನ್ ಅವರಿಗೆ 'ಚೆಂಗುಮಣಿ' ಎಂಬ ಚಿತ್ರದಲ್ಲೂ ಪ್ರಮುಖ ಪಾತ್ರ ಲಭಿಸಿದೆ. ಒಟ್ನಲ್ಲಿ ಚೊಚ್ಚಲ ಸಿನಿಮಾ ತೆರೆ ಕಾಣುವ ಮುನ್ನವೇ ಕೈ ತುಂಬಾ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿದ್ದಾರೆ, 'ಕನಸುಗಾರ' ರವಿಚಂದ್ರನ್ ಅವರ ಪುತ್ರ ಮನೋರಂಜನ್.[ಡಾ.ರಾಜ್ ನಂತರ, ಮುಂದಿನ 'ಚೆಂಗುಮಣಿ' ಆಗ್ತಾರಾ ಮನೋರಂಜನ್.?]
ಅಂದಹಾಗೆ 'ವೇಲೈಯಿಲಾ ಪಟ್ಟದಾರಿ' ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿ ತೊಡಗಿದ್ದ ಚಿತ್ರತಂಡ, ಇದೀಗ 'ಆ' ನಾಯಕಿಯನ್ನು ಆಯ್ಕೆ ಮಾಡಿದರೆ ಹೇಗೆ ಅಂತ ಯೋಚನೆ ಮಾಡಿದ್ದಾರೆ. ಅಷ್ಟಕ್ಕೂ 'ಆ' ನಾಯಕಿ ಯಾರು ಎಂಬುದನ್ನು ನೋಡಿ ಮುಂದಿನ ಸ್ಲೈಡ್ಸ್ ಗಳಲ್ಲಿ...
ನಾಯಕಿಯ ಶೋಧದಲ್ಲಿ ಚಿತ್ರತಂಡ
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ನಂದಕಿಶೋರ್ ಅವರು ಆಕ್ಷನ್-ಕಟ್ ಹೇಳಲಿದ್ದಾರೆ. ಇನ್ನು ಮನೋರಂಜನ್ ಅವರ ಜೊತೆ ಡ್ಯುಯೆಟ್ ಹಾಡಲು ನಾಯಕಿಯ ಶೋಧದಲ್ಲಿರುವ ನಿರ್ದೇಶಕ ಮತ್ತು ನಿರ್ಮಾಪಕರು ಪಕ್ಕದ ರಾಜ್ಯಕ್ಕೆ ಕಣ್ಣು ಹಾಯಿಸಿದ್ದಾರೆ. 'ಅದೇ' ನಟಿಯನ್ನು ಕನ್ನಡದಲ್ಲೂ ನಟಿಸಲು ಕೇಳಿದರೆ ಹೇಗೆ ಅಂತ ಯೋಚನೆ ಕೂಡ ಮಾಡಿದ್ದಾರೆ. ಯಾರ 'ಆ' ನಟಿ ನೋಡಿ ಮುಂದಿನ ಸ್ಲೈಡಿನಲ್ಲಿ...[ಮತ್ತೆರಡು ತಮಿಳು ಚಿತ್ರಗಳು ಕನ್ನಡಕ್ಕೆ ರೀಮೆಕ್]
ನಟಿ ಅಮಲಾ ಪೌಲ್
ತಮಿಳಿನಲ್ಲಿ ಧನುಷ್ ಅವರಿಗೆ ಜೋಡಿಯಾಗಿ ನಟಿ ಅಮಲಾ ಪೌಲ್ ಅವರು ಕಾಣಿಸಿಕೊಂಡಿದ್ದರು. ಆದ್ದರಿಂದ ಅವರನ್ನೇ ಕನ್ನಡದಲ್ಲಿ ಕೂಡ ನಟಿಸುವಂತೆ ಕೇಳಿಕೊಂಡರೆ ಹೇಗೆ ಅಂತ ರಾಕ್ ಲೈನ್ ಕುಳಿತು ಯೋಚಿಸಿದ್ದಾರೆ. ಹೇಗೂ ಅಲ್ಲೂ ಅವರೇ ನಟಿಸಿದ್ದಾರೆ, ಇಲ್ಲೂ ಅವರೇ ನಟಿಸಿದರೆ ತುಂಬಾ ಚೆನ್ನಾಗಿರುತ್ತೆ ಎಂಬುದು ರಾಕ್ ಲೈನ್ ಅವರ ಅಭಿಪ್ರಾಯ.
ಇನ್ನೂ ಕೇಳಿಲ್ಲ
ಅಂದಹಾಗೆ ನಿರ್ಮಾಪಕರು ಅಮಲಾ ಪೌಲ್ ಅವರ ಅಭಿಪ್ರಾಯ-ಒಪ್ಪಿಗೆಯನ್ನು ಇನ್ನೂ ಕೇಳಿಲ್ಲ. ಅವರಿಗೆ ಸಮಯವಿದ್ದರೆ ಹಾಗೂ ಒಪ್ಪಿಕೊಂಡರೆ ರೀಮೇಕ್ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಅಮಲಾ ಪೌಲ್ ಮಿಂಚೋದು ಖಂಡಿತ.
'ಹೆಬ್ಬುಲಿ'ಯಲ್ಲಿ ಅಮಲಾ
ಈಗಾಗಲೇ ಕಿಚ್ಚ ಸುದೀಪ್ ಅಭಿನಯದ, 'ಗಜಕೇಸರಿ' ಕೃಷ್ಣ ನಿರ್ದೇಶನದ, 'ಹೆಬ್ಬುಲಿ' ಚಿತ್ರದಲ್ಲಿ ನಟಿ ಅಮಲಾ ಪೌಲ್ ನಟಿಸುತ್ತಿದ್ದಾರೆ. ಬಹುತೇಕ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದ್ದು, ಅಮಲಾ ಪೌಲ್ ಅವರು ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ತಂದೆಯಾಗಿ ಕ್ರೇಜಿಸ್ಟಾರ್
ಇನ್ನು ಮನೋರಂಜನ್ ಅವರ ತಂದೆ-ತಾಯಿಯ ಪಾತ್ರಕ್ಕಾಗಿ ಖ್ಯಾತ ನಟ-ನಟಿಯರ ಹುಡುಕಾಟದಲ್ಲಿ ಚಿತ್ರತಂಡ ಬಿಜಿಯಾಗಿದೆ. ತಂದೆಯ ಪಾತ್ರ ವಹಿಸಲು ರವಿಚಂದ್ರನ್ ಅವರು ಕೂಡ ನಿರ್ಮಾಪಕರ ಪಟ್ಟಿಯಲ್ಲಿದ್ದು, ಯಾರು ಆಯ್ಕೆ ಆಗುತ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಯಾವಾಗ ಆರಂಭ
ಮುಂದಿನ ತಿಂಗಳು ಸೆಪ್ಟೆಂಬರ್ ನಿಂದ ಈ ಚಿತ್ರ ಮುಹೂರ್ತ ನೆರವೇರಿಸಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.