»   » ಕನ್ನಡ ನಿರ್ಮಾಪಕನ ವರಿಸಲಿರುವ ಮಲ್ಲು ಭಾವನಾ

ಕನ್ನಡ ನಿರ್ಮಾಪಕನ ವರಿಸಲಿರುವ ಮಲ್ಲು ಭಾವನಾ

By: ರವಿಕಿಶೋರ್
Subscribe to Filmibeat Kannada

ಮಲಯಾಳಂ ಬೆಡಗಿ ಭಾವನಾಗೆ ಕಂಕಣಭಾಗ್ಯ ಕೂಡಿಬಂದಿದೆ. ಈ ಹಿಂದೆಯೂ ಭಾವನಾ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆಗೆಲ್ಲಾ ಸ್ವತಃ ಅವರೇ ವಿವರಣೆ ಕೊಡುತ್ತಾ, ಸದ್ಯಕ್ಕೆ ತಮ್ಮ ಮದುವೆ ಇಲ್ಲ ಎಂದಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಭಾವನಾ ಇದೇ ವರ್ಷ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಆದರೆ ಮದುವೆ ಯಾವಾಗ ಎಂಬ ಬಗ್ಗೆ ಪಕ್ಕಾ ಮಾಹಿತಿ ಇಲ್ಲ. ಕನ್ನಡದ ನಿರ್ಮಾಪಕರೊಬ್ಬರನ್ನು ವರಿಸಲಿದ್ದಾರೆ ಎಂಬ ಸುದ್ದಿ ಇದೆ. [ಈ ತಾರೆಗಳು ನಾಪತ್ತೆ; ದೂರು ಕೊಡೋರೇ ಇಲ್ಲ!]


ಈಗಾಗಲೆ ಮದುವೆ ಮಾತುಕತೆ ಎಲ್ಲವೂ ಮುಗಿದಿದ್ದು ಇನ್ನೇನು ಮುಹೂರ್ತ ಒಂದು ಬಾಕಿ ಇದೆ ಎನ್ನುತ್ತವೆ ಮೂಲಗಳು. ಆದರೆ ಆ ನಿರ್ಮಾಪಕ ಯಾರು ಎಂಬುದು ಮಾತ್ರ ಬಹಿರಂಗಪಡಿಸಿಲ್ಲ. ಇನ್ನಷ್ಟೇ ಸಂಪೂರ್ಣ ವಿವರಗಳು ಗೊತ್ತಾಗಬೇಕಾಗಿದೆ.

ಸದ್ಯಕ್ಕೆ ಭಾವನಾ ಅವರು ಕನ್ನಡದ 'ಮೈತ್ರಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸುದೀಪ್ ಜೊತೆಗಿನ 'ಬಚ್ಚನ್' ಚಿತ್ರದ ಬಳಿಕ ಭಾವನಾ ಅಭಿನಯಿಸುತ್ತಿರುವ ಚಿತ್ರ ಇದು. ಟೋಪಿವಾಲ, ಯಾರೇ ಕೂಗಾಡಲಿ, ರೋಮಿಯೋ, ವಿಷ್ಣುವರ್ಧನ ಹಾಗೂ ಜಾಕಿ ಚಿತ್ರಗಳಲ್ಲಿ ಭಾವನಾ ಅಭಿನಯಿಸಿದ್ದಾರೆ.

ಭಾವನಾ ಅವರ ಮೂಲ ಹೆಸರು ಕಾರ್ತಿಕಾ ಮೆನನ್. ಕೇರಳದ ತ್ರಿಶೂರ್ ನಲ್ಲಿ ಹುಟ್ಟಿದ ಭಾವನಾ ಪ್ರತಿಭಾನ್ವಿತ ತಾರೆ. ತನ್ನ ಒಂದು ದಶಕದ ವೃತ್ತಿಬದುಕಿನಲ್ಲಿ ಅರುವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಎರಡು ಭಾರಿ ಕೇರಳ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.

English summary
There were rumours about actress Bhavana, have been reporting that she would tie the knot with Kannada producer. The gossip mills have stories about both the families having a meeting at Bangalore and that they are proceeding with marriage plans.
Please Wait while comments are loading...