»   » ಬಿಟೌನ್ ನಿಂದ ಟಾಲಿವುಡ್ ಗೆ ಜಿಗಿತಾರಾ ದೀಪಿಕಾ ಪಡುಕೋಣೆ?

ಬಿಟೌನ್ ನಿಂದ ಟಾಲಿವುಡ್ ಗೆ ಜಿಗಿತಾರಾ ದೀಪಿಕಾ ಪಡುಕೋಣೆ?

By: Sonu
Subscribe to Filmibeat Kannada

ಬಾಲಿವುಡ್ ನ ಲಕ್ಕಿ ಗರ್ಲ್ ದೀಪಿಕಾ ಪಡುಕೋಣೆ ಅವರು ಹಾಲಿವುಡ್ ನಲ್ಲೂ ಕಮಾಲ್ ಮಾಡಿದ ನಂತರ ಇದೀಗ ಟಾಲಿವುಡ್ ಚಿತ್ರರಂಗದತ್ತ ಮುಖ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಅಲ್ಲಲ್ಲಿ ಸುದ್ದಿಯಾಗಿದೆ.

ಹೌದು ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರು ಟಾಲಿವುಡ್ ಕ್ಷೇತ್ರಕ್ಕೂ ಕಾಲಿಡಲಿದ್ದು, ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ 150ನೇ ಚಿತ್ರಕ್ಕೆ ಡಿಪ್ಪಿ ಆಯ್ಕೆಯಾಗುವ ಸಾಧ್ಯತೆ ಇದೆಯಂತೆ.[ಕಣ್ಣಲ್ಲೇ ಕೊಲ್ಲುತ್ತಿರುವ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ]

ಬರೋಬ್ಬರಿ 15 ವರ್ಷಗಳ ನಂತರ ಮೆಗಾಸ್ಟಾರ್ ಚಿರಂಜೀವಿ ಅವರು ಪೂರ್ಣ ಪ್ರಮಾಣದ ನಾಯಕ ನಟನಾಗಿ ಮತ್ತೆ ಕಮ್ ಬ್ಯಾಕ್ ಆಗಿದ್ದು, 'ಕತ್ತಿಲಾಂಟೊಡು' ಎಂಬ ಸಿನಿಮಾದಲ್ಲಿ ದ್ವಿಪಾತ್ರ ವಹಿಸುತ್ತಿದ್ದಾರೆ.[ಎಕ್ಸ್ ಕ್ಲೂಸಿವ್ ; ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ' ಮಹೋತ್ಸವ]

Actress Deepika Padukone roped in Megastar Chiranjeevi's next

ಈ ಚಿತ್ರಕ್ಕೆ ನಾಯಕಿ ನಟಿಯ ತಲಾಷ್ ನಲ್ಲಿ ತೊಡಗಿದ್ದ ಚಿತ್ರತಂಡ ಕೊನೆಗೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರನ್ನು ಭೇಟಿ ಮಾಡಿದ್ದರಂತೆ. ಮೊದಲು ಒಪ್ಪಿಕೊಂಡಿದ್ದ ನಟಿ ಇದೀಗ 'ರಬ್ತಾ' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಏನೂ ಮಾಡುತ್ತಾರೆ ಅನ್ನೋದು ಸದ್ಯದ ಕುತೂಹಲ.

ತಮಿಳು ನಟ ಇಳೆಯದಳಪತಿ ವಿಜಯ್ ಅವರು ನಟಿಸಿದ್ದ 'ಕತ್ತಿ' ಚಿತ್ರದ ರೀಮೆಕ್ ಆಗಿರುವ 'ಕತ್ತಿಲಾಂಟೊಡು' ಚಿತ್ರಕ್ಕೆ ದೀಪಿಕಾ ಬಂದು ಕತ್ತಿಗೆ ಸಾಣೆ ಕೊಡುತ್ತಾರೋ ಅಥವಾ ಡ್ರಾಪ್ ಆಗುತ್ತಾರೋ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.['ಮೆಗಾ' ಮದುವೆ; ಅದ್ಧೂರಿಯಾಗಿ ನಡೆದ ಶ್ರೀಜಾ 'ಎರಡನೇ' ಕಲ್ಯಾಣ]

ಈ ಮೊದಲು ಚಿತ್ರಕ್ಕೆ ನಟಿ ಅನುಷ್ಕಾ ಶೆಟ್ಟಿ ಅವರು ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಅವರು 'ಬಾಹುಬಲಿ 2' ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಅವರು ಡ್ರಾಪ್ ಆಗಿದ್ದಾರೆ.

ಚಿತ್ರಕ್ಕೆ ಚಿರಂಜೀವಿ ಅವರ ಪುತ್ರ ನಟ ರಾಮ್ ಚರಣ್ ತೇಜಾ ಅವರು ಬಂಡವಾಳ ಹೂಡಿದ್ದು, ಕಳೆದ ತಿಂಗಳು ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಮುಹೂರ್ತದಲ್ಲಿ ಇಡೀ ಮೆಗಾ ಫ್ಯಾಮಿಲಿ ಹಾಜರಿದ್ದರು.

ವಿ.ವಿ ವಿನಾಯಕ್ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. (ಮುಹೂರ್ತ ಸಮಾರಂಭದ ಫೋಟೋ ಗ್ಯಾಲರಿ ಕೆಳಗಿನ ಸ್ಲೈಡುಗಳಲ್ಲಿ...)

-ಮೆಗಾಸ್ಟಾರ್ ಚಿರಂಜೀವಿ

-ಮೆಗಾಸ್ಟಾರ್ ಚಿರಂಜೀವಿ

-ಮೆಗಾಸ್ಟಾರ್ ಚಿರಂಜೀವಿ ಇಡೀ ಕುಟುಂಬ

-ಮೆಗಾಸ್ಟಾರ್ ಚಿರಂಜೀವಿ ಇಡೀ ಕುಟುಂಬ

-ಮೆಗಾಸ್ಟಾರ್ ಚಿರಂಜೀವಿ ಇಡೀ ಕುಟುಂಬ

-ಮೆಗಾಸ್ಟಾರ್ ಚಿರಂಜೀವಿ ಇಡೀ ಕುಟುಂಬ

-ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜಾ

-ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜಾ

-ಮೆಗಾಸ್ಟಾರ್ ಚಿರಂಜೀವಿ ಬಿಗ್ ಫ್ಯಾಮಿಲಿ

-ಮೆಗಾಸ್ಟಾರ್ ಚಿರಂಜೀವಿ ಬಿಗ್ ಫ್ಯಾಮಿಲಿ

-ಮೆಗಾಸ್ಟಾರ್ ಚಿರಂಜೀವಿ, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್

-ಮೆಗಾಸ್ಟಾರ್ ಚಿರಂಜೀವಿ, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್

-'ಕತ್ತಿಲಾಂಟೊಡು' ಚಿತ್ರದ ಪೋಸ್ಟರ್

-'ಕತ್ತಿಲಾಂಟೊಡು' ಚಿತ್ರದ ಪೋಸ್ಟರ್

-'ಕತ್ತಿಲಾಂಟೊಡು' ಚಿತ್ರದ ಪೋಸ್ಟರ್

-'ಕತ್ತಿಲಾಂಟೊಡು' ಚಿತ್ರದ ಪೋಸ್ಟರ್

English summary
Telugu Movie 'Kattilantodu' which brings the megastar back onto the silver screen after a long hiatus of 15 years, is a remake of the Tamil hit 'Katthi'. The film makers approached Bollywood Actress Deepika Padukone for the female lead in the movie Kathikantodu. The movie is directed by V.V Vinayak and Produced by Actor Ram Charan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada