For Quick Alerts
  ALLOW NOTIFICATIONS  
  For Daily Alerts

  ದರ್ಶನ್ ವಿರಾಟ್ ಚಿತ್ರದ ನಾಯಕಿಗೆ ಬ್ರೈನ್ ಸರ್ಜರಿ

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ವಿರಾಟ್' ಚಿತ್ರದಲ್ಲಿ ಅಭಿನಯಿಸುತ್ತಿರುವ ಇಷಾ ಚಾವ್ಲಾ ಅವರು ಅಪರೂಪದ ಬ್ರೈನ್ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅವರಿಗೆ ಶೀಘ್ರದಲ್ಲೇ ಬ್ರೈನ್ ಸರ್ಜರಿ ಮಾಡಲಿದ್ದಾರೆ ಎಂಬ ಅಚ್ಚರಿ ಸಂಗತಿಯೊಂದು ಬಯಲಾಗಿದೆ.

  ಈ ಕಾಯಿಲೆಗಾಗಿ ಆಕೆ ವಿದೇಶದಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಈ ಬಗ್ಗೆ ಇನ್ನಷ್ಟೇ ಸತ್ಯಾಸತ್ಯತೆಗಳು ಹೊರಬೀಳಬೇಕಾಗಿದೆ. ಅಲ್ಲಿಯವರೆಗೂ ಈ ಸುದ್ದಿಯನ್ನು ಗಾಸಿಪ್ ಎಂದು ನಂಬಬಹುದು.

  ಇತ್ತೀಚೆಗೆ ಈಕೆಗೆ ಬರುತ್ತಿರುವ ಆಫರ್ ಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಅನಾರೋಗ್ಯವೇ ಕಾರಣ ಎನ್ನುತ್ತಿವೆ ಮೂಲಗಳು. ಇದಿಷ್ಟೇ ಅಲ್ಲದೆ ತಮ್ಮ ಟ್ವಿಟ್ಟರ್ ಖಾತೆಯನ್ನೂ ಆಕೆ ಮುಚ್ಚುತ್ತಿರುವುದಾಗಿ ಪ್ರಕಟಿಸಿದ್ದರು.

  ಬ್ರೈನ್ ಸರ್ಜರಿಗೆ ಒಳಗಾಗುತ್ತಿರುವ ಕಾರಣ ಟ್ವಿಟ್ಟರ್ ಖಾತೆಯನ್ನೂ ಮುಚ್ಚುತ್ತಿದ್ದಾರೆ ಎಂಬ ಅನುಮಾನ ಚಿತ್ರೋದ್ಯಮದಲ್ಲಿ ವ್ಯಕ್ತವಾಗಿದೆ. ಈಕೆ ಇತ್ತೀಚೆಗೆ ತೆಲುಗಿನ 'ಶ್ರೀಮನ್ನಾರಯಣ' ಎಂಬ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಜೊತೆ ಅಭಿನಯಿಸಿದ್ದರು.

  ಆ ಚಿತ್ರದಲ್ಲಿ ಚುಂಬನ ಸನ್ನಿವೇಶಗಳು ಅಧಿಕವಾಗಿದ್ದ ಕಾರಣ ಆಕೆಯ ಟ್ವಿಟ್ಟರ್ ಖಾತೆಗೆ ಅಭಿಮಾನಿಗಳು ಮುಗಿಬಿದ್ದು ಚುಂಬನದ ಬಗ್ಗೆಯೇ ಹೆಚ್ಚಾಗಿ ಚುಚ್ಚುಚುಚ್ಚಿ ಪ್ರಶ್ನೆಗಳನ್ನು ಕೇಳಿ ತಲ್ಲಣಗೊಳಿಸಿದ್ದರು. ಈ ಕಾರಣಕ್ಕೂ ಟ್ವಿಟ್ಟರ್ ಖಾತೆ ಮುಚ್ಚುತ್ತಿರಬಹುದು ಎಂಬ ಮಾತುಗಳು ಇವೆ. (ಏಜೆನ್ಸೀಸ್)

  English summary
  Actress Isha Chawla is all set to undergo a Brain Surgery when doctors are reported to have found a clot in scalpel. As this kind of a surgery is not available in India, she might be flown to some foreign country.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X