»   » ಕನ್ನಡ ಸಿನಿ ತಾರೆಯ ನೋವು ನಿವಾರಿಸಿದ ನಿತ್ಯಾನಂದ

ಕನ್ನಡ ಸಿನಿ ತಾರೆಯ ನೋವು ನಿವಾರಿಸಿದ ನಿತ್ಯಾನಂದ

Posted By: ಶಂಕರ್, ಚೆನ್ನೈ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  Actress Kausalya
  ಹಲವಾರು ಸಿನೆಮಾ ತಾರೆಗಳು ಆಗಾಗ ತಮ್ಮ ನೋವಿನ ಸಮಸ್ಯೆಗಳ ಪರಿಹಾರಕ್ಕಾಗಿ ಸ್ವಾಮಿ ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಿದ್ದಾಗಿ ಹೇಳಿಕೊಂಡಿದ್ದರು. ಅವರ ಹೆಸರೆಲ್ಲಾ ಈಗ ಇಲ್ಲಿ ಯಾಕೆ ಬಿಡಿ. ಆದರೆ ಮತ್ತೊಬ್ಬ ಅಚ್ಚ ಕನ್ನಡ ತಾರೆ ಕೂಡ ನಿತ್ಯಾನಂದ ಸೂತ್ರದಿಂದ ಪರಿಹಾರ ಕಂಡುಕೊಂಡಿದ್ದಾಗಿ ತಿಳಿಸಿದ್ದಾರೆ.

  ಈಕೆ ಬೇರಾರು ಅಲ್ಲ, ರೀ ಸ್ವಲ್ಪ ಬರ್ತೀರಾ, ಗಾಂಧಿ ನಗರ, ಬದ್ರಿ ಮತ್ತು ಇತ್ತೀಚೆಗೆ ಗೌತಮ್ ಕನ್ನಡ ಚಿತ್ರದಲ್ಲಿ ನಟಿಸಿರುವ ಹಾಗೂ 30ಕ್ಕೂ ಅಧಿಕ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಕೌಸಲ್ಯ. ಈಕೆಗೆ ಅಸಾಧ್ಯ ಬೆನ್ನು ನೋವು ಕಾಡುತ್ತಿತ್ತಂತೆ. ಹಲವಾರು ವೈದ್ಯರನ್ನು ಭೇಟಿ ಮಾಡಿದರೂ ಪ್ರಯೋಜನವಾಗಲಿಲ್ಲವಂತೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದದ್ದೇ ಬಂತು. ಆದರೆ ನೋವು ಮಾತ್ರ ಹಾಗೆಯೇ ಉಳಿಕೊಂಡಿತ್ತು.

  ಕಡೆಗೆ ಈಕೆ ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡಿದರಂತೆ. ಅದೇನಾಶ್ಚರ್ಯವೊ ಏನೋ ಆಕೆಯ ನೋವು ಉಶ್ ಪಟಾಕ್ ಆಗಿದೆ. ನಿತ್ಯಾನಂದ ಸೂತ್ರವೇ ಇದಕ್ಕೆ ಕಾರಣ ಎನ್ನುತ್ತಾರೆ ಅರಳು ಹುರಿದಂತೆ ಕನ್ನಡದಲ್ಲಿ ಮಾತನಾಡುವ ಅಭಿನೇತ್ರಿ ಕೌಸಲ್ಯ. ಒಟ್ಟು ಹತ್ತು ದಿನಗಳ ಕಾಲ ಚಿಕಿತ್ಸೆ ಪಡೆದೆ. ಬಳಿಕ ತಮ್ಮ ಬೆನ್ನುನೋವು ಮಾಯವಾಯಿತು ಎಂದಿದ್ದಾರೆ.

  ಇದೀಗ ಈಕೆ ಇಡೀ ತಮ್ಮ ಜೀವನವನ್ನೇ ಸ್ವಾಮಿ ನಿತ್ಯಾನಂದ ಅವರಿಗೆ ಮುಡಿಪಾಗಿಡಲು ನಿರ್ಧರಿಸಿದ್ದಾರಂತೆ. ಒಟ್ಟಿನಲ್ಲಿ ತಾರೆ ರಂಜಿತಾ ಹಾದಿಯಲ್ಲಿ ಕೌಸಲ್ಯಾ ಕೂಡ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ. ಅಂದಹಾಗೆ ರಂಜಿತಾ ಅವರು ನಿತ್ಯಾನಂದ ಮೇಲೆ ಸಾಕ್ಷ್ಯಚಿತ್ರ ತೆಗೆಯಲು ಮುಂದಾಗಿದ್ದರು.

  ಈ ಸಾಕ್ಷ್ಯಚಿತ್ರದಲ್ಲಿ ಸ್ವಾಮಿ ನಿತ್ಯಾನಂದರ ಹಾಗೂ ಅವರ ಭಕ್ತ ಸಮೂಹದ ಹಲವಾರು ಉತ್ತಮ ಕೆಲಸ ಕಾರ್ಯಗಳನ್ನು ತೋರಿಸಲಾಗುತ್ತದೆ. ಹಿಂದೂ ಧರ್ಮವನ್ನು ಮುನ್ನಡೆಸಲು ಸ್ವಾಮಿ ನಿತ್ಯಾನಂದ ಅವರೇ ಸೂಕ್ತ ವ್ಯಕ್ತಿ. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಕೋಟ್ಯಂತರ ಅನುಯಾಯಿಗಳನ್ನು ಸಂಪಾದಿಸಿದರು ಎಂದು ರಂಜಿತಾ ವರ್ಣರಂಜಿತವಾಗಿ ಬಣ್ಣಿಸಿದ್ದನ್ನು ಇಲ್ಲಿ ನೆನೆಯಬಹುದು. (ಏಜೆನ್ಸೀಸ್)

  English summary
  Kannada Actress Kowsalya, who has done more than 30 movies in Kannada, Tamil, Telugu and Malayalam is now a busy actress in TV serials. She was suffering from sever back ache, which could not be treated by any orthopedic surgeon. It was Nithiyanandha's SUTRA that lasted for about 10 days helped her to come out of the pain.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more