»   » ಯಾರಾಗುವರು ನಯನತಾರಾ ಕನಸಿನ ರಾಜಕುಮಾರ?

ಯಾರಾಗುವರು ನಯನತಾರಾ ಕನಸಿನ ರಾಜಕುಮಾರ?

Posted By:
Subscribe to Filmibeat Kannada

ಕಾಲಿವುಡ್ ಸೆನ್ಸೇಷನ್ ತ್ರಿಷಾ ಕೃಷ್ಣನ್ ನಿಶ್ಚಿತಾರ್ಥ ಮಾಡಿಕೊಂಡು, ಭಾವಿಪತಿ ಪ್ರೊಡಕ್ಷನ್ ನಲ್ಲಿ ಹೊಸ ಸಿನಿಮಾ ಮಾಡುತ್ತಿರುವ ಬ್ರೇಕಿಂಗ್ ನ್ಯೂಸ್ ಬಂದ ಬೆನ್ನಲ್ಲೇ, ಇನ್ನೋರ್ವ ಕಾಲಿವುಡ್ ಕನ್ಯಾಮಣಿ ಮದುವೆ ಆಗುವ ಕನಸು ಕಾಣುತ್ತಿದ್ದಾಳೆ.

ನಯನತಾರ ಕಂಡ ಕನಸು ನನಸಾಗಿದ್ದಿದ್ದರೆ, ಇಷ್ಟೊತ್ತಿಗೆ ನಯನತಾರಾ ಸಂಸಾರ ನೌಕೆಯಲ್ಲಿ ಬಾಳ ಪಯಣ ಸಾಗಿಸಬೇಕಿತ್ತು. ಪ್ರೀತಿ ಪ್ರೇಮ ಅಂತ ಮೊದಲು ಹೀರೋ ಸಿಂಬು ಜೊತೆ ಕೈಕೈ ಹಿಡಿದುಕೊಂಡು ಓಡಾಡಿದ್ದ ನಯನತಾರಾ ಮೊದಲ ಪ್ರೇಮದಲ್ಲೇ ಮುಗ್ಗರಿಸಿ ಬಿದ್ದರು.

Actress Nayantara is all set to enter Wedlock

ಸಿಂಬು ಕೈಕೊಟ್ಟ ಮೇಲೆ ನೃತ್ಯ ಸಂಯೋಜಕ ಕಮ್ ಪ್ರಭುದೇವಾ ಹಿಂದೆ ಬಿದ್ದ ನಯನತಾರಾ, ಮದುವೆ ಹಂತಕ್ಕೂ ಬಂದು ತಲುಪಿದ್ದರು. ಪ್ರಭುದೇವಾಗಾಗಿ ಹಿಂದು ಧರ್ಮಕ್ಕೆ ಮತಾಂತರವಾಗಿ, ಚಿತ್ರಜೀವನಕ್ಕೆ ಗುಡ್ ಬೈ ಹೇಳುವುದಕ್ಕೂ ನಯನತಾರಾ ನಿರ್ಧರಿಸಿದ್ದರು. [ನಟಿ ನಯನತಾರಾರನ್ನು ಇನ್ನೂ ಕಾಡುತ್ತಿರುವ ಹಚ್ಚೆ]

ಆದ್ರೆ, ದುರಾದೃಷ್ಟವಶಾತ್ ನಯನತಾರ ಕನಸು ಈಡೇರಲಿಲ್ಲ. ಮಾನಸಿಕವಾಗಿ ನೊಂದಿದ್ದ ನಯನ್, ಮತ್ತೆ ಬಣ್ಣ ಹಚ್ಚಿ ಹಳೇ ಫಾರ್ಮ್ ಗೆ ಮರಳಿದರು. ಆದರೀಗ, ಚಿತ್ರಜೀವನದಲ್ಲಿ ಬಿಜಿಯಿದ್ದರೂ, ನಿಜಜೀವನದಲ್ಲಿ ಸೆಟ್ಲ್ ಆಗುವ ಬಯಕೆ ನಯನತಾರಾಗಿದೆ.

Actress Nayantara is all set to enter Wedlock

ಎರಡೆರಡು ಬಾರಿ ಹಾರ್ಟ್ ಪಂಚರ್ ಮಾಡಿಕೊಂಡಿರುವ ನಯನತಾರಾ ಈಗ ಮದುವೆ ಆಗುವ ಮನಸ್ಸು ಮಾಡಿದ್ದಾರೆ. ಚಿತ್ರರಂಗದವರ ಸಹವಾಸವೇ ಬೇಡ ಅಂತ ನಯನತಾರಾ, ತಮ್ಮ ಅಪ್ಪ-ಅಮ್ಮನಿಗೆ ಸೂಕ್ತ ವರ ಹುಡುಕುವುದಕ್ಕೆ ಹೇಳಿದ್ದಾರಂತೆ. [ಸದ್ದಿಲ್ಲದಂತೆ ನಡದೇಹೋಯ್ತು ನಯನತಾರಾ ಮದುವೆ!]

ಈಗಾಗಲೇ ವರಾನ್ವೇಷಣೆಯಲ್ಲಿ ನಯನತಾರಾ ಕುಟುಂಬ ತೊಡಗಿದೆ ಅನ್ನುವ ಗುಸುಗುಸು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ನಿಜವೇ ಆಗಿದ್ದರೆ, ನಯನತಾರಾಗೆ ಕನಸಿನ ರಾಜಕುಮಾರ ಸಿಕ್ಕಿದ ತಕ್ಷಣ ಕಾಲಿವುಡ್ ನಲ್ಲಿ ವಾಲಗ ನಿನಾದ ಗ್ಯಾರೆಂಟಿ.

Read in English: Nayantara To Enter Wedlock!
English summary
Actress Nayantara has given her consent to enter the wedlock. According to the latest report, Nayantara has requested her parents to search for a suitable bridegroom.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada