For Quick Alerts
  ALLOW NOTIFICATIONS  
  For Daily Alerts

  ಮದುವೆಗೆ ಮತ್ತೆ ರೆಡಿಯಾಗ್ತಿದ್ದಾರಾ ಪೂಜಾಗಾಂಧಿ?

  By ಉದಯರವಿ
  |

  ನಟಿ ಪೂಜಾಗಾಂಧಿ ಅವರು ಮತ್ತೆ ಮದುವೆಯಾಗಲು ರೆಡಿಯಾಗುತ್ತಿದ್ದಾರಾ? ಈ ಹಿಂದೆ ಅವರು ಬಿಜಿನೆಸ್ ಮ್ಯಾನ್, ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಅವರ ಕೈಹಿಡಿಯಲು ಹೊರಟಿದ್ದು ಬಳಿಕ ಅವರಿಬ್ಬರ ಮದುವೆ ಮುರಿದುಬಿದ್ದದ್ದು ಗೊತ್ತೇ ಇದೆ.

  ಇದೀಗ ಪೂಜಾಗಾಂಧಿ ಅವರು ಮದುವೆಯಾಗಲು ಹೊರಟಿರುವುದು ನಿರ್ದೇಶಕ ಸತೀಶ್ ಪ್ರಧಾನ್ ಅವರನ್ನು ಎನ್ನುತ್ತವೆ ಮೂಲಗಳು. 'ಅಭಿನೇತ್ರಿ' ಚಿತ್ರದ ನಿರ್ದೇಶಕರ ಕೈಹಿಡಿಯಲಿದ್ದಾರೆ ಪೂಜಾಗಾಂಧಿ ಎಂಬ ಸುದ್ದಿ ಇದೆ. 'ಅಭಿನೇತ್ರಿ' ಚಿತ್ರ ಬಿಡುಗಡೆಗೆಯಾದ ಮೇಲೆ ಇಬ್ಬರ ಮದುವೆ ಎಂಬ ಸುದ್ದಿ ಹರಿದಾಡುತ್ತಿದೆ. [ನಿಶ್ಚಿತಾರ್ಥಕ್ಕೆ ನಿಂತುಹೋದ ಪೂಜಾಗಾಂಧಿ ಮದುವೆ]

  Actress Pooja Gandhi

  ಇಬ್ಬರೂ ಜೊತೆಯಲ್ಲಿ ಓಡಾಡುತ್ತಿರುವುದೇ ಈ ಅನುಮಾನಕ್ಕೆ ಕಾರಣವಾಗಿರುವುದು. ಈ ಬಗ್ಗೆ ಮಾತನಾಡಿರುವ ಪೂಜಾಗಾಂಧಿ, ನಾನು ಬೆಂಗಳೂರಿನಿಂದ ಹೊರಗಡೆ ಹೋಗಬೇಕಾದರೆ ನನ್ನ ಜೊತೆಗೊಬ್ಬರನ್ನು ಕರೆದೊಯ್ಯುತ್ತಿದ್ದೆ. ಅವರು ನನ್ನ ಚಿತ್ರದ ನಿರ್ದೇಶಕರಾದ ಕಾರಣ ಸತೀಶ್ ನನ್ನೊಂದಿಗಿರುತ್ತಿದ್ದರು. ಇದರಿಂದ ಚಿತ್ರದ ಬಗ್ಗೆ ಚರ್ಚಿಸಲು, ಪ್ರಚಾರಕ್ಕೂ ಅನುಕೂಲವಾಗುತ್ತಿತ್ತು..."

  "ನಾನು ಚಿತ್ರದ ನಿರ್ಮಾಪಕಿ ಎಂಬುದಕ್ಕಿಂತ ಮುಖ್ಯವಾಗಿ 'ಅಭಿನೇತ್ರಿ' ಚಿತ್ರ ಕೋರ್ಟ್ ಮೆಟ್ಟಿಲೇರಿದಾಗ ನಿರ್ದೇಶಕರು ನನ್ನ ಜೊತೆಗಿರಬೇಕಾಗುತ್ತಿತ್ತು. ಇದನ್ನೇ ಕೆಲವರು ಡೇಟಿಂಗ್ ಎಂದು ತಪ್ಪಾಗಿ ಅರ್ಥೈಸಿದ್ದಾರೆ. ನಮ್ಮಿಬ್ಬರ ನಡುವೆ ಉತ್ತಮ ಸ್ನೇಹಸಂಬಂಧವಿದೆ. ಮದುವೆ ಬಗ್ಗೆ ನಾವು ಯಾ ಹೊತ್ತೂ ಚರ್ಚಿಸಿಲ್ಲ" ಎಂದಿದ್ದಾರೆ ಪೂಜಾಗಾಂಧಿ.

  "ಇದಿಷ್ಟೇ ಅಲ್ಲ ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವಿದೆ. ಸತೀಶ್ ಪ್ರಧಾನ್ (27) ಒಳ್ಳೆಯ ಮನುಷ್ಯ. ನಮ್ಮಿಬ್ಬರ ನಡುವೆ ಲವ್, ಮದುವೆ ವಿಚಾರ ಬರುವ ಸಾಧ್ಯತೆಯೂ ಇಲ್ಲ. ಈ ರೀತಿಯ ವದಂತಿಗಳಿಂದ ನಮ್ಮ ಸ್ನೇಹ ಸಂಬಂಧಕ್ಕೇನು ಧಕ್ಕೆಯಾಗಿಲ್ಲ ಬಿಡಿ" ಎನ್ನುತ್ತಾರೆ ಇತ್ತೀಚೆಗಷ್ಟೇ 31ಕ್ಕೆ ಅಡಿಯಿಟ್ಟ ಪೂಜಾಗಾಂಧಿ.

  ಇನ್ನು ಅಭಿನೇತ್ರಿ ಚಿತ್ರದ ನಿರ್ದೇಶಕರಾದ ಸತೀಶ್ ಪ್ರಧಾನ್ ಸಹ ಇದೇ ಮಾತುಗಳನ್ನು ಹೇಳುತ್ತಾರೆ. ಚಿತ್ರವನ್ನು ಗೆಲ್ಲಿಸುವುದು ಹೇಗೆ ಎಂಬುದು ನನಗೆ ಮುಖ್ಯವೇ ಹೊರತು ಪೂಜಾಗಾಂಧಿ ಅವರ ಹೃದಯವನ್ನು ಗೆಲ್ಲುವುದು ಹೇಗೆ ಎಂಬುದಲ್ಲ ಎನ್ನುತ್ತಾರೆ ಸತೀಶ್.

  English summary
  Kannada actress Pooja Gandhi turned 31 recently. She had a hard time on her birthday trying denying the rumors about her alleged relationship with Satish Pradhan, who directed her movie Abhinetri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X