For Quick Alerts
  ALLOW NOTIFICATIONS  
  For Daily Alerts

  ಆ ಒಂದು ಕೋಟಿ ರೂಪಾಯಿ ಎಲ್ಲಿ ಹೋಯ್ತು.?

  By ಹರಾ
  |

  ವಿವಾದಗಳಿಂದಲೇ ಗಾಂಧಿನಗರದಲ್ಲಿ ಜನಪ್ರಿಯತೆ ಪಡೆದಿರುವ ನಟಿ ಪೂಜಾ ಗಾಂಧಿ. ಹಾಗ್ನೋಡಿದ್ರೆ, 'ಮುಂಗಾರು ಮಳೆ' ಚಿತ್ರದ ನಂತ್ರ ಪೂಜಾ ಮೇಡಂ ಬೇರೆ ಕಾರಣಗಳಿಗೆ ಸುದ್ದಿ ಆಗಿದ್ದು ಹೆಚ್ಚು.

  ಈಗ ಪೂಜಾ ಗಾಂಧಿ ವಿರುದ್ಧ ಒಂದು ಕೋಟಿ ರೂಪಾಯಿ ವಾಪಸ್ ನೀಡದ ಆರೋಪ ಕೇಳಿ ಬಂದಿದೆ. 'ಅಭಿನೇತ್ರಿ' ಚಿತ್ರದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಿದ ಪೂಜಾ ಗಾಂಧಿ, ಡಾ.ಸುರೇಶ್ ಶರ್ಮಾ ಎಂಬುವವರಿಂದ ಒಂದು ಕೋಟಿ ರೂಪಾಯಿ ಸಾಲ ಪಡೆದಿದ್ದರು.

  ಸಾಲ ಪಡೆದು ಒಂದು ವರ್ಷವಾದರೂ, ಈವರೆಗೂ ಅದನ್ನ ಹಿಂದಿರುಗಿಸಿಲ್ಲ ಅಂತ ಡಾ.ಸುರೇಶ್ ಶರ್ಮಾ, ಪೂಜಾ ಗಾಂಧಿ ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ. [ಕೋಟಿ ರೂಪಾಯಿ ಪಂಗನಾಮ ಹಾಕಿದ ಪೂಜಾಗಾಂಧಿ!?]

  ಆದ್ರೆ, ಪೂಜಾ ಗಾಂಧಿ ಹೇಳುವ ಕಥೆಯೇ ಬೇರೆ. ಹಣದ ವಿಷಯ ಬಿಟ್ಟು, ಈಗ ಎಲ್ಲರ ಗಮನವನ್ನ ಬೇರೆ ಕಡೆ ಶಿಫ್ಟ್ ಮಾಡಿರುವ ಪೂಜಾ ಗಾಂಧಿ ನಿಜ ಹೇಳುತ್ತಿದ್ದಾರಾ? ಆ ಒಂದು ಕೋಟಿ ರೂಪಾಯಿ ಕಥೆ ಏನಾಯ್ತು? ಮುಂದೆ ಓದಿ....

  ಒಂದು ಕೋಟಿ ರೂಪಾಯಿ ಅಂದ್ರೆ ಸುಮ್ನೆನಾ?

  ಒಂದು ಕೋಟಿ ರೂಪಾಯಿ ಅಂದ್ರೆ ಸುಮ್ನೆನಾ?

  ಸಿನಿಮಾದವರಿಗೆ 'ಕೋಟಿ' ಲೆಕ್ಕಕ್ಕೆ ಇಲ್ಲದಿರಬಹುದು. ಆದ್ರೆ, ಸಾಮಾನ್ಯ ಜನರು ಒಂದು ಕೋಟಿ ಅಂದ ತಕ್ಷಣ ಕಣ್ಣು ಬಾಯಿ ಬಿಡುತ್ತಾರೆ. ಒಂದು ಕೋಟಿ ಸಂಪಾದಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ ನೀವೇ ಹೇಳಿ, ಒಂದು ಕೋಟಿ ಸಾಲ ಕೊಡೋದು ಅಥವಾ ಪಡೆಯೋದು ಸುಲಭನಾ?

  ಸಾಲ ತೆಗೆದುಕೊಂಡಿದ್ದು ನಿಜಾನಾ?

  ಸಾಲ ತೆಗೆದುಕೊಂಡಿದ್ದು ನಿಜಾನಾ?

  ಮೂಲಗಳ ಪ್ರಕಾರ, ನಟಿ ಪೂಜಾ ಗಾಂಧಿ ಸಾಲ ಪಡೆದಿರುವುದು ನಿಜ. 'ಅಭಿನೇತ್ರಿ' ಚಿತ್ರದ ಸಂದರ್ಭದಲ್ಲಿ ಪೂಜಾ ಗಾಂಧಿ ಆರ್ಥಿಕ ಸಂಕಷ್ಟದಲ್ಲಿದ್ದರು. ಹಲವು ವಿವಾದಗಳಿಂದ ಕೋರ್ಟ್ ಗೆ ಅಲೆದಾಡುತ್ತಿದ್ದರು. ಇದರಿಂದಾಗಿ ಸಾಲದ ಅನಿವಾರ್ಯತೆ ಇತ್ತು ಅಂತಾರೆ ಪೂಜಾ ಗಾಂಧಿ ಬಲ್ಲವರು. ಅದೆಲ್ಲಾ ಸುಳ್ಳು ಅಂತ ಪೂಜಾ ಗಾಂಧಿ ಹೇಳ್ತಾರೆ. ಆದ್ರೆ, 'ಒಂದು ಕೋಟಿ' ಅಂತ ಅಷ್ಟು ಸುಲಭವಾಗಿ ಸುಳ್ಳು ಹೇಳಿ ಆರೋಪ ಮಾಡಬಹುದಾ? ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಬೆಲೆ ಇಲ್ವಾ?

  ಯಾವ ನಂಬಿಕೆ ಮೇಲೆ ಸಾಲ ಕೊಟ್ಟರು?

  ಯಾವ ನಂಬಿಕೆ ಮೇಲೆ ಸಾಲ ಕೊಟ್ಟರು?

  'ತಿಪ್ಪಜ್ಜಿ ಸರ್ಕಲ್' ಚಿತ್ರದ ಮೂಲಕ ಡಾ.ಸುರೇಶ್ ಶರ್ಮಾಗೆ ಪೂಜಾ ಗಾಂಧಿ ಪರಿಚಯವಾಗಿದ್ದು. ಒಂದೇ ಸಿನಿಮಾದಲ್ಲಿ ಒಂದು ಕೋಟಿ ಸಾಲ ಕೊಡುವಷ್ಟು ಅನ್ಯೋನ್ಯತೆ ಇಬ್ಬರ ನಡುವೆ ಬೆಳೆದಿತ್ತಾ ಅನ್ನೋದು ಬೇರೆ ಮಾತು. ಆದ್ರೆ, ಯಾವುದೇ ದಾಖಲೆಗಳಿಲ್ಲದೇ ಕೇವಲ 100 ರೂಪಾಯಿ ಬಾಂಡ್ ಇಟ್ಟುಕೊಂಡು ಸುರೇಶ್ ಶರ್ಮಾ ಒಂದು ಕೋಟಿ ಸಾಲ ಕೊಟ್ಟೆ ಅಂತ ಹೇಳ್ತಾರೆ.

  ಪೂಜಾ ಗಾಂಧಿ ತಿರುಗುಬಾಣ

  ಪೂಜಾ ಗಾಂಧಿ ತಿರುಗುಬಾಣ

  ಸುರೇಶ್ ಶರ್ಮಾ ಅವರ ಬಳಿ ಯಾವುದೇ ದಾಖಲೆಗಳಿಲ್ಲ ಅಂತ ಒಂದು ಕೋಟಿ ರೂಪಾಯಿ ಪಂಗನಾಮ ಹಾಕೋಕೆ ಪೂಜಾ ಗಾಂಧಿ ಪ್ಲಾನ್ ಮಾಡಿದ್ದಾರೆ ಅನ್ನೋದು ಈಗ ಗಾಂಧಿನಗರದ ಖಾಸ್ ಬಾತ್. [ನಟಿ ಪೂಜಾ ಗಾಂಧಿ ನಸೀಬು ನೆಟ್ಟಗಿಲ್ಲ ಕಣ್ರೀ..]

  ದಾಖಲೆಗಳಿಲ್ಲದೇ ವ್ಯವಹಾರ?

  ದಾಖಲೆಗಳಿಲ್ಲದೇ ವ್ಯವಹಾರ?

  ಗಾಂಧಿನಗರದ ಎಷ್ಟೋ ವ್ಯವಹಾರಗಳು ನಡೆಯುವುದೇ ಹಾಗೆ. ಇಲ್ಲಿನ ಬಹುತೇಕ ಎಲ್ಲಾ ವ್ಯವಹಾರವೂ ಬಾಯಿ ಮಾತಿನ ಮೇಲೆ ನಿಂತಿರುತ್ತೆ. ನಿರ್ದೇಶಕರು, ನಟರು ಮತ್ತು ನಿರ್ಮಾಪಕರ ಮಧ್ಯೆ ನಂಬಿಕೆಯೇ ಮೂಲ ಆಧಾರ. ಎಷ್ಟೋ ಕಲಾವಿದರು ಮಾತು ಕೊಟ್ಟಿರುವ ಕಾರಣ, ನಿರ್ಮಾಪಕರಿಗೆ ಕಾಲ್ ಶೀಟ್ ನೀಡುತ್ತಾರೆ. ಇನ್ನೂ ಕೆಲವರು ಅದಕ್ಕೆ ಸಂಭಾವನೆ ಕೂಡ ಪಡೆಯೋಲ್ಲ.

  ಇದನ್ನೇ ಅಸ್ತ್ರವಾಗಿ ಬಳಸಿಕೊಂಡ್ರಾ ಪೂಜಾ?

  ಇದನ್ನೇ ಅಸ್ತ್ರವಾಗಿ ಬಳಸಿಕೊಂಡ್ರಾ ಪೂಜಾ?

  ಗಾಂಧಿನಗರದ ಕೆಲ ಹಿರಿಯರು ಹೇಳುವ ಪ್ರಕಾರ, ಪೂಜಾ ಗಾಂಧಿ ಅಡ್ವಾಂಟೇಜ್ ತೆಗೆದುಕೊಂಡಿದ್ದಾರಂತೆ. ಸನ್ನಿವೇಶವನ್ನ ಉಪಯೋಗಿಸಿಕೊಳ್ಳುತ್ತಿದ್ದಾರಂತೆ.

  ಇಬ್ಬರ ಮಧ್ಯೆ ಇತ್ತಂತೆ 'ಕಮಿಟ್ಮೆಂಟ್'.!

  ಇಬ್ಬರ ಮಧ್ಯೆ ಇತ್ತಂತೆ 'ಕಮಿಟ್ಮೆಂಟ್'.!

  ಪೂಜಾ ಗಾಂಧಿ ಮತ್ತು ಸುರೇಶ್ ಶರ್ಮಾ ನಡುವೆ ಒಂದು ಕಮಿಟ್ಮೆಂಟ್ ಇದ್ದ ಕಾರಣ ಹಣದ ವ್ಯವಹಾರ ನಡೆದಿದೆ ಅನ್ನೋದು ಮತ್ತೊಂದು ಮೂಲದ ಮಾಹಿತಿ. ಆ 'ಕಮಿಟ್ಮೆಂಟ್'ಗೂ, ಪೂಜಾ ಗಾಂಧಿ ಕ್ಯಾಮರಾ ಮುಂದೆ ಬಹಿರಂಗ ಪಡಿಸದ ವಿಷಯಕ್ಕೂ ಸಂಬಂಧ ಇದ್ಯಾ? [ಪೂಜಾ ಗಾಂಧಿ ಮುಚ್ಚಿಡುತ್ತಿರುವ 'ಆ' ವಿಷಯವೇನು?]

  ಹೇಳೋರು ಕೇಳೋರು ಯಾರೂ ಇಲ್ವಾ?

  ಹೇಳೋರು ಕೇಳೋರು ಯಾರೂ ಇಲ್ವಾ?

  ಗಾಂಧಿನಗರದಲ್ಲಿ ಸದ್ಯಕ್ಕೆ ಹೇಳೋರು-ಕೇಳೋರು ಅಂತ ಯಾರೂ ಇಲ್ಲ. ಏನೇ ಸಮಸ್ಯೆ ಆದರೂ, ಬಗೆಹರಿಸುವುದಕ್ಕೆ ಅಂತ ಫಿಲ್ಮ್ ಚೇಂಬರ್ ಇದ್ದರೂ, ಅದು 'ಉಳ್ಳವರ ಶಿವಾಲಯ' ಆಗಿದೆ. ಒಂದು ಕೋಟಿ ರೂಪಾಯಿ ಸಾಲ ವಾಪಸ್ ಕೊಡಿಸಿ ಅಂತ ಫೆಬ್ರವರಿಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ದೂರು ಕೊಟ್ಟಿದ್ದರೂ, ಈ ತನಕ ಪ್ರಯೋಜನ ಆಗಿಲ್ಲ.

  ಸ್ಟೇಷನ್ ಗೆ ಹೋಗಲ್ಲ.! ಕೋರ್ಟ್ ಗೆ ಬರಲ್ಲ.!

  ಸ್ಟೇಷನ್ ಗೆ ಹೋಗಲ್ಲ.! ಕೋರ್ಟ್ ಗೆ ಬರಲ್ಲ.!

  ಫಿಲ್ಮ್ ಚೇಂಬರ್ ಗೆ ಮಾತ್ರ ದೂರು ನೀಡಿರುವ ಸುರೇಶ್ ಶರ್ಮಾ, 'ಇಬ್ಬರಿಗೂ ತೊಂದರೆಯಾಗದಂತೆ ವಿವಾದವನ್ನ ಬಗೆಹರಿಸಿ' ಅಂತ ಪತ್ರ ಬರೆದಿದ್ದಾರೆ. ಅಲ್ಲದೇ, ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿಲ್ಲ. ಇನ್ನೂ ಕೋರ್ಟ್ ಗೆ ಹೋದರೆ, ಪೂಜಾ ಗಾಂಧಿಗೆ ಪ್ರಾಬ್ಲಂ ಅಂತಾರೆ. ಇದರ ಅರ್ಥ ಏನು? [ನಟಿ ಪೂಜಾ ವಿರುದ್ಧ ಸುರೇಶ್ ಶರ್ಮಾ ನೀಡಿರುವ ದೂರಿನಲ್ಲೇನಿದೆ?]

   ಒಂದು ಕೋಟಿ ರೂಪಾಯಿ ಎಲ್ಲಿ?

  ಒಂದು ಕೋಟಿ ರೂಪಾಯಿ ಎಲ್ಲಿ?

  ಸುರೇಶ್ ಶರ್ಮಾ ಹಣಕಾಸಿನ ವಿಷಯ ಮಾತನಾಡಿದರೆ, ಪೂಜಾ ಗಾಂಧಿ 'ಡರ್ಟಿ ಅಂಡ್ ಚೀಪ್' ವಿಷಯ ಪ್ರಸ್ತಾಪ ಮಾಡಿ ಹೊಸ ದಿಕ್ಕಿಗೆ ವಿವಾದವನ್ನ ಕೊಂಡೊಯ್ದಿದ್ದಾರೆ. ಹಾಗಾದ್ರೆ, ಒಂದು ಕೋಟಿ ರೂಪಾಯಿ ಮಾತೆಲ್ಲಿ? ಯಾರ ವಾದ ಸತ್ಯ? 'ಕೊಟ್ಟೋನು ಕೋಡಂಗಿ ಈಸ್ಕೊಂಡೋನು ಈರಭದ್ರ' ಅನ್ನೋ ಗಾದೆ ಮಾತು ಈ ವಿವಾದಕ್ಕೆ ಹೇಳಿಮಾಡಿಸಿದಂತಿದೆಯಾ? ಅಳೆದು ತೂಗಿ ನೀವೇ ನಿರ್ಧರಿಸಿ.

  English summary
  Kannada Actress Pooja Gandhi is in news for not paying back Rs.1 Crore loan to Producer, Actor cum Financier Suresh Sharma. Whose version is true? Is it Pooja Gandhi's? Or Suresh Sharma? Read the article to know more.
  Monday, June 29, 2015, 16:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X