»   » ಪ್ರೇಮ ವಿವಾಹಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಪ್ರಿಯಾಮಣಿ

ಪ್ರೇಮ ವಿವಾಹಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಪ್ರಿಯಾಮಣಿ

Posted By:
Subscribe to Filmibeat Kannada

ನಟಿ ಪ್ರಿಯಾಮಣಿಗೆ ಕಂಕಣಬಲ ಕೂಡಿಬಂದಿದೆ. ಈ ಹಿಂದೆ ಅವರು 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಗೆಸ್ಟ್ ಆಗಿ ಪುನೀತ್ ಜೊತೆ ಹಾಟ್ ಸೀಟ್ ಲ್ಲಿ ಕೂತಿದ್ದರು. ಆಗ ತಾನು ಮದುವೆಯಾಗುವ ಗಂಡಿನ ಡೀಟೇಲ್ಸ್ ಕೊಟ್ಟಿದ್ದರು. ಇದೀಗ ಅವರಿಗೆ ಸೂಕ್ತ ವರ ಸಿಕ್ಕಿದ್ದಾನೆ ಅನ್ನಿಸುತ್ತದೆ.

ತಾನು ಮದುವೆಯಾಗುವ ಹುಡುಗ ಅಭಿಷೇಕ್ ಬಚ್ಚನ್ ಹಾಗೆ ಉದ್ದವಿರಬೇಕು. ತಮಿಳು ನಟ ಸೂರ್ಯನ ಹಾಗೆ ಮೈಕಟ್ಟು ಹೊಂದಿರಬೇಕು, ತೆಲುಗು ನಟ ನಾಗಾರ್ಜುನ ಹಾಗೆ ವಾಕಿಂಗ್ ಸ್ಟೈಲ್ ಇರಬೇಕು ಮತ್ತು ನಮ್ಮ ಪುನೀತ್ ರಾಜಕುಮಾರ್ ಹಾಗೆ ಒಳ್ಳೆ ಮನಸ್ಸು ಹೊಂದಿರಬೇಕು ಎಂದಿದ್ದರು.


ಇತ್ತೀಚೆಗೆ ಮಾಧ್ಯಮಗಳು ಪ್ರಿಯಾಮಣಿ ಅವರನ್ನು ಮದುವೆ ಯಾವಾಗ ಎಂದು ಕೇಳಿದಾಗ ಅವರು ಹೇಳಿದ್ದು, "ಸದ್ಯಕ್ಕೆ ಮದುವೆ ಆಲೋಚನೆ ಇಲ್ಲ. ಇನ್ನೆರಡು ವರ್ಷಗಳಲ್ಲಿ ಆ ಬಗ್ಗೆ ಗಂಭೀರವಾಗಿ ಆಲೋಚಿಸುತ್ತೇನೆ. ಆದರೆ ಮನೆಮಂದಿಯನ್ನು ಒಪ್ಪಿಸಿ ಪ್ರೇಮವಿವಾಹವನ್ನೇ ಮಾಡಿಕೊಳ್ಳುತ್ತೇನೆ" ಎಂದಿದ್ದಾರೆ.

ಮುಂದುವರಿದ ಪ್ರಿಯಾಮಣಿ, "ಮದುವೆ ಎಂಬುದು ಜೀವನದಲ್ಲಿ ಮಹತ್ವದ ಘಟ್ಟ. ಅಷ್ಟು ಸುಲಭವಾಗಿ ತೆಗೆದುಕೊಳ್ಳುವ ನಿರ್ಧಾರ ಅದಲ್ಲ. ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಜೀವನ ಪರ್ಯಂತ ಬಾಧೆ ಪಡಬೇಕಾಗುತ್ತದೆ" ಎಂದು ಪ್ರಿಯಾಮಣಿ ಪ್ರಿಯವಾಗಿ ಹೇಳಿದ್ದಾರೆ.

ಸದ್ಯಕ್ಕೆ 'ಅಂಬರೀಶ' ಚಿತ್ರಕ್ಕೆ ಅಂಕಿತ ಹಾಕಿರುವ ಪ್ರಿಯಾಮಣಿ ಹೃದಯದಲ್ಲಿ ಈಗಾಗಲೆ ತನ್ನ ಕೈಹಿಡಿಯುವ ಹುಡುಗನಿಗೆ ಜಾಗ ಕೊಟ್ಟಿದ್ದಾರಾ ಅಥವಾ ಅದು ಇನ್ನೂ ಖಾಲಿಯಾಗಿದೆಯೇ ಎಂಬುದನ್ನು ಮಾತ್ರ ಅವರು ಹೇಳಿಲ್ಲ. ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು. (ಏಜೆನ್ಸೀಸ್)

English summary
"About my marriage I should say that it will take place after two years. This will be definitely love marriage approved by my parents. It is not good to marry a person whom we don’t know and suffer later" actress Priyamani said.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada