»   » ಬಾಲಿವುಡ್ ತಾರೆ ರಾಣಿ ಮುಖರ್ಜಿ ಗರ್ಭಿಣಿಯಂತೆ

ಬಾಲಿವುಡ್ ತಾರೆ ರಾಣಿ ಮುಖರ್ಜಿ ಗರ್ಭಿಣಿಯಂತೆ

By: ರವಿಕಿಶೋರ್
Subscribe to Filmibeat Kannada

ಇಟಲಿಯಲ್ಲಿ ಗುಟ್ಟಾಗಿ ಮದುವೆಯಾದ ಬಾಲಿವುಡ್ ತಾರೆ ರಾಣಿ ಮುಖರ್ಜಿ ಈಗ ಗರ್ಭಿಣಿಯಂತೆ. ಏಪ್ರಿಲ್ ನಲ್ಲಿ ಸಪ್ತಪದಿ ತುಳಿದ ರಾಣಿ ಆಗಲೇ ಗರ್ಭಿಣಿಯಾದರೇ ಎಂದು ಅವರ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ ಎಂದು ಬಾಲಿವುಡ್ ಮಂದಿ ಹಾಡುವಂತಾಗಿದೆ. ಇವರಿಬ್ಬರೂ ಬಹಳ ತಿಂಗಳಿಂದ ಕದ್ದುಮುಚ್ಚಿ ಪ್ರೇಮಿಸಿಕೊಳ್ಳುತ್ತಿದ್ದರು. ಕಣ್ಣಾಮುಚ್ಚಾಲೆ, ಜೂಟಾಟದಲ್ಲಿ ಎಲ್ಲೋ ಎಡವಿದ್ದಾರೆ ಅಷ್ಟೇ ಬಿಡಿ ಕೆಲವರು ತಲೆಬಿಸಿ ಮಾಡಿಕೊಂಡಿಲ್ಲ. [ಇಟಲಿಯಲ್ಲಿ ಗುಟ್ಟಾಗಿ ಸಪ್ತಪದಿ ತುಳಿದ ರಾಣಿ ಮುಖರ್ಜಿ]


ಮದುವೆಯಾದ ಮೇಲೆ ರಾಣಿ ಮುಖರ್ಜಿ ಎಲ್ಲೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇತ್ತೀಚೆಗೆ ಅವರು ಒಂದು ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ತಮ್ಮ ಹೊಟ್ಟೆಯನ್ನು ಶಾಲುನಿಂದ ಮುಚ್ಚಿಕೊಂಡಿದ್ದರು. ಕೈಗಳು ಅವರ ಹೊಟ್ಟೆಯ ಮೇಲೆ ಇರುತ್ತಿದ್ದವು.

ಇದನ್ನು ನೋಡಿದ ಬಾಲಿವುಡ್ ಮಂದಿ ರಾಣಿ ಗರ್ಭಿಣಿ ಎಂದು ತಮ್ಮಷ್ಟಕ್ಕೆ ತಾವು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಾಣಿ ಮಾತ್ರ ಇನ್ನೂ ಏನನ್ನೂ ಹೇಳಿಲ್ಲ. ಅವರು ತುಟಿಪಿಟಕ್ ಎನ್ನದೇ ಇರುವುದು ಅನುಮಾನವನ್ನು ಇನ್ನಷ್ಟ ಬಲಪಡಿಸಿದೆ.

ತನ್ನ ಅನುಗಾಲದ ಗೆಳೆಯ ಆದಿತ್ಯ ಚೋಪ್ರಾ ಜೊತೆಗೆ ರಾಣಿ ಮುಖರ್ಜಿ ಅವರದು ಸುದೀರ್ಘ ಕಾಲದ 'ಚೈತ್ರದ ಪ್ರೇಮಾಂಜಲಿ'. ತಮ್ಮ ಮದುವೆ ಬಗ್ಗೆ ಇಬ್ಬರೂ ಬಹಳ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದರು. ಏಪ್ರಿಲ್ ತಿಂಗಳಲ್ಲಿ ಮದುವೆಯಾಗಿದ್ದಾಗಿ ಅಧಿಕೃತವಾಗಿ ರಾಣಿ ಮುಖರ್ಜಿ ಘೋಷಿಸಿದ್ದಾರೆ.

English summary
According to the report bollywood actress Rani Mukerji was pregnant after she sported what some interpreted to be a ‘baby bump’. a source close to the couple confirmed they were expecting a child. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada