For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ಐಶಾರಾಮಿ ಮನೆ ಖರೀದಿಸಲಿರುವ ಸಮಂತಾ: ಬೆಲೆ ಎಷ್ಟು?

  |

  ವಿಚ್ಛೇದನದ ಬಳಿಕ ಸಮಂತಾರ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಸಾಕಷ್ಟು ಬದಲಾಗಿದೆ. ಒಂದರ ಹಿಂದೊಂದು ಟ್ರಿಪ್‌ಗಳನ್ನು ಹೋಗುತ್ತಾ, ಒಳ್ಳೆಯ ಪುಸ್ತಕಗಳನ್ನು ಓದುತ್ತಾ ಗೆಳೆಯರೊಟ್ಟಿಗೆ ಕಾಲ ಕಳೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ ಸಮಂತಾ.

  ಇನ್ನು ವೃತ್ತಿ ಜೀವನದಲ್ಲಂತೂ ಸಖತ್ ಎತ್ತರಕ್ಕೆ ಏರುತ್ತಿದ್ದಾರೆ ಈ ನಟಿ. ವಿಚ್ಛೇದನದ ಬಳಿಕವಂತೂ ಒಂದರ ಹಿಂದೊಂದು ಉತ್ತಮ ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

  ನಾಗಚೈತನ್ಯ ಜೊತೆಗಿದ್ದ ಮನೆಯನ್ನು ₹100 ಕೋಟಿ ಕೊಟ್ಟು ಕಾಡಿಬೇಡಿ ಖರೀದಿಸಿದ ಸಮಂತಾ!ನಾಗಚೈತನ್ಯ ಜೊತೆಗಿದ್ದ ಮನೆಯನ್ನು ₹100 ಕೋಟಿ ಕೊಟ್ಟು ಕಾಡಿಬೇಡಿ ಖರೀದಿಸಿದ ಸಮಂತಾ!

  ವಿಚ್ಛೇದನದ ಬಳಿಕ ಸಾಲು-ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ತೆಲುಗು ತಮಿಳಿನಲ್ಲಿ ಮಾತ್ರವೇ ಅಲ್ಲದೆ, ಹಿಂದಿ, ಇಂಗ್ಲೀಷ್‌ ಸಿನಿಮಾಗಳ ಅವಕಾಶಗಳೂ ಸಮಂತಾರನ್ನು ಅರಸಿ ಬರುತ್ತಿವೆ. ಇದೇ ಕಾರಣಕ್ಕೆ ಸಮಂತಾ ತಮ್ಮ ನಿವಾಸನ್ನೂ ಸಹ ಬದಲಾಯಿಸಿಕೊಳ್ಳುತ್ತಿದ್ದಾರೆ.

  ಸಮಂತಾ ಪ್ರಸ್ತುತ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲೇ ಹೊಸ ನಿವಾಸವನ್ನೂ ಸಹ ಖರೀದಿಸಿದ್ದಾರೆ ಅದೂ ದುಬಾರಿ ಬೆಲೆ ತೆತ್ತು. ಇದೀಗ ಮುಂಬೈಗೆ ತಮ್ಮ ವಾಸ್ತವ್ಯ ಬದಲಾಯಿಸಲಿದ್ದಾರೆ ನಟಿ ಸಮಂತಾ.

  ಮುಂಬೈನಲ್ಲಿ ಮನೆ ಖರೀದಿಸಲಿರುವ ಸಮಂತಾ

  ಮುಂಬೈನಲ್ಲಿ ಮನೆ ಖರೀದಿಸಲಿರುವ ಸಮಂತಾ

  ಬಾಲಿವುಡ್ ಸಿನಿಮಾ ಅವಕಾಶಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿರುವ ಕಾರಣ ನಟಿ ಸಮಂತಾ ಮುಂಬೈನಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಬಹಳ ದೊಡ್ಡ ಐಶಾರಾಮಿ ಮನೆ ಅಲ್ಲದಿದ್ದರೂ ವಿಮಾನ ನಿಲ್ದಾಣಕ್ಕೆ ಹಾಗೂ ಕೆಲವು ಸ್ಟುಡಿಯೋಗಳಿಗೆ ಹತ್ತಿರವಿರುವ ಏರಿಯಾದಲ್ಲಿ ಮನೆ ಖರೀದಿಸಲು ಮುಂದಾಗಿದ್ದಾರಂತೆ ಸಮಂತಾ.

  ಇತರೆ ಕೆಲವು ನಟ-ನಟಿಯರಂತೆ ಸೀ ಫೇಸ್ ಇನ್ನಿತರೆಗಳು ತೀರ ಐಶಾರಾಮಿ ಸೌಕರ್ಯಗಳು ಇಲ್ಲವಾದರೂ, ಜಿಮ್, ಪಾರ್ಕಿಂಗ್, ಕಚೇರಿ ಇನ್ನೂ ಕೆಲವು ಸರಳ ಆದರೆ ಅವಶ್ಯಕವಾದ ಸೌಕರ್ಯಗಳು ಇವೆ.

  ಮುರಳಿ ಮೋಹನ್ ಬಳಿ ಮನೆ ಖರೀದಿ

  ಮುರಳಿ ಮೋಹನ್ ಬಳಿ ಮನೆ ಖರೀದಿ

  ಇತ್ತೀಚೆಗೆ ಸಮಂತಾ ಒಂದು ಮನೆಯನ್ನು ಬಾರಿ ಮೊತ್ತ ಕೊಟ್ಟು ಖರೀದಿ ಮಾಡಿದ್ದಾರೆ. ಇದು ಸಮಂತಾ ಬದುಕಿಗೆ ತೀರಾ ಹತ್ತಿರವೆನಿಸಿದ ಮನೆ. ನಾಗಚೈತನ್ಯರನ್ನು ವಿವಾಹವಾದ ಬಳಿಕ ಸಮಂತಾ ಅದೇ ಮನೆಯಲ್ಲಿ ವಾಸವಿದ್ದರು. ಅದೇ ಮನೆಯನ್ನು ಈ ಬಾರೀ ಮೊತ್ತ ಕೊಟ್ಟು ಖರೀದಿಸಿದ್ದಾರೆ. ತೆಲುಗು ಚಿತ್ರರಂಗದ ಹಿರಿಯ ನಟ ಮುರಳಿ ಮೋಹನ್ ಈ ಬಗ್ಗೆ ಮಾಹಿತಿ ನೀಡಿದ್ದು, ಅದೇ ವಿಡಿಯೋ ಈಗ ವೈರಲ್ ಆಗಿದೆ.

  ನಾಗಚೈತನ್ಯ ನೆನಪಿಗಾಗಿ ಮನೆ ಖರೀದಿ?

  ನಾಗಚೈತನ್ಯ ನೆನಪಿಗಾಗಿ ಮನೆ ಖರೀದಿ?

  ನಾಗಚೈತನ್ಯ ಜೊತೆಗಿದ್ದ ಮನೆಯನ್ನು ಸಮಂತಾ ಒಬ್ಬರೇ 100 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಅಲ್ಲದೆ ಎಕ್ಸ್‌ಟ್ರಾ ಫ್ರಾಫಿಟ್ ಕೊಟ್ಟು ಖರೀದಿಸಿದ್ದಾರೆ ಎಂದು ಹಿರಿಯ ನಟ ಮುರಳಿ ಮೋಹನ್ ರಿವೀಲ್ ಮಾಡಿದ್ದಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದೆ. ಸಮಂತಾ ಅಷ್ಟೊಂದು ಹಣವನ್ನು ಕೊಟ್ಟು ಅದೇ ಮನೆಯನ್ನು ಖರೀದಿ ಮಾಡಿದ್ದು ಯಾಕೆ? ಇದು ನಾಗಚೈತನ್ಯ ನೆನಪಿಗಾಗಿನಾ? ಅಥವಾ ದ್ವೇಷಕ್ಕಾಗಿನಾ? ಗೊತ್ತಿಲ್ಲ.

  ಹಿಂದಿ-ಇಂಗ್ಲೀಷ್ ಸಿನಿಮಾದಲ್ಲಿ ನಟಿಸಲಿದ್ದಾರೆ

  ಹಿಂದಿ-ಇಂಗ್ಲೀಷ್ ಸಿನಿಮಾದಲ್ಲಿ ನಟಿಸಲಿದ್ದಾರೆ

  ನಟಿ ಸಮಂತಾ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತೆಲುಗಿನಲ್ಲಿ 'ಶಾಕುಂತಲಂ' ಸಿನಿಮಾ ತೆರೆಗೆ ಬರಲಿದೆ. ಅದರ ಬಳಿಕ ವಿಜಯ್ ದೇವರಕೊಂಡ ಜೊತೆ ನಟಿಸಿರುವ 'ಖುಷಿ' ಸಿನಿಮಾ ತೆರೆಗೆ ಬರಲಿದೆ. ಈ ನಡುವೆ ಬಾಲಿವುಡ್‌ನ ಹೊಸ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಆ ಬಳಿಕ ತಾಪ್ಸಿ ಪನ್ನು ನಿರ್ಮಾಣದ ಮತ್ತೊಂದು ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ. ಜೊತೆಗೆ 'ದಿ ಅರೇಂಜ್‌ಮೆಂಟ್ಸ್ ಆಫ್ ಲವ್' ಹೆಸರಿನ ಇಂಗ್ಲೀಷ್‌ ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Actress Samantha Purchasing new house in Mumbai. She already has one luxurious house in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X