»   » 'ಹಾಫ್ ಮೆಂಟ್ಲು' ರಾತ್ರಿ ಶೂಟಿಂಗ್ ನಲ್ಲಿ ಏನಾಯ್ತು?

'ಹಾಫ್ ಮೆಂಟ್ಲು' ರಾತ್ರಿ ಶೂಟಿಂಗ್ ನಲ್ಲಿ ಏನಾಯ್ತು?

Posted By:
Subscribe to Filmibeat Kannada

ಲಕ್ಷ್ಮಿ ದಿನೇಶ್ ಆಕ್ಷನ್ ಕಟ್ ಹೇಳುತ್ತಿರುವ 'ಹಾಫ್ ಮೆಂಟ್ಲು' ಶೂಟಿಂಗ್ ನಲ್ಲಿ ಇತ್ತೀಚೆಗೆ ನಟಿ ಸೋನುಗೌಡ ಆಸ್ಪತ್ರೆ ಸೇರೋ ಹಾಗಾಯ್ತು. ಇದರಿಂದ ಶೂಟಿಂಗೂ ಸ್ಟಾವೂ ಆಯ್ತು. ರಾತ್ರಿ ಹನ್ನೊಂದು ಗಂಟೆಯಲ್ಲಿ ರೈನ್ ಇಫೆಕ್ಟ್ ಶಾಟ್ ಗಳನ್ನ ಹಾಫ್ ಮೆಂಟ್ಲು ಚಿತ್ರತಂಡ ತೆಗೀತಾ ಇತ್ತು.

ಆ ಸಮಯದಲ್ಲಿ ಸತತವಾಗಿ ಎರಡು ಗಂಟೆ ಸುರೀತಾ ಇರೋ ನೀರಿನ ಮಧ್ಯೆ ಕುಳಿತುಕೊಂಡಿದ್ದ ಸೋನು ಗೌಡ ಸ್ಟನ್ನಾಗಿದ್ರು. ಇದು ಚಳಿಗಾಲ ಬೇರೆ ಒಂದು ಕಡೆ ಕೊರೆಯೋ ಚಳಿ ಮತ್ತೊಂದು ಕಡೆ ನೀರು. ಎರಡರ ಹೊಡೆತ ತಡೆಯೋಕಾಗದೆ ಸೋನುಗೌಡ ಕುಳಿತಲ್ಲೇ ಸ್ಟಾಚ್ಯೂ ತರಹ ಆಗಿಬಿಟ್ಟಿದ್ರು.

ಎಕ್ಸ್ ಪ್ರೆಶನ್ ಕೊಡಿ ಅಂದ್ರೆ ಕೈ ಕಾಲು ಎಲ್ಲವೂ ಗಟ್ಟಿಯಾಗಿ ಟ್ವಿಸ್ಟ್ ಆದಂತಾಗಿದ್ದವಂತೆ. ಆಮೇಲೆ ಚಿತ್ರತಂಡವೇ ಸೋನುರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕತ್ಸೆ ಕೊಡಿಸಿದೆ. ಆಮೇಲೆ ಶೂಟಿಂಗೂ ಸ್ಟಾಪ್ ಮಾಡಲಾಯ್ತು.

ಹೀರೋ, ಹೀರೋಯಿನ್ ಗಳು ಅಂದ್ರೆ ಶೋ ಕೊಡ್ತಾರೆ. ಕಷ್ಟಪಡಲ್ಲ ಅಂತ ಅಂದುಕೊಳ್ಳೋರಿಗೆ ಇಂತಹಾ ಘಟನೆ ನೋಡಿದ್ರೆ ಗೊತ್ತಾಗುತ್ತೆ. ಕಲಾವಿದರೂ ತಮ್ಮ ಪಾತ್ರಕ್ಕಾಗಿ ಹೇಗೆಲ್ಲಾ ಕಷ್ಟಪಡ್ತಾರೆ ಅಂತ. ಸೋನು ಗೌಡ ಇದಕ್ಕೆ ಜಸ್ಟ್ ಒಂದು ಉದಾಹರಣೆ ಅಷ್ಟೇ.

ಅಂದಹಾಗೆ ಹಾಫ್ ಮೆಂಟ್ಲು ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಜಿ ಶಿವಕುಮಾರ್, ಸಂಗೀತ ಬಿಜೆ ಭರತ್. ಪಕ್ಕಾ ಲವ್ ಸ್ಟೋರಿಯಾಗಿರುವ ಈ ಚಿತ್ರದಲ್ಲಿ ಮೈಕೋ ನಾಗರಾಜ್, ಹರಿ, ತಬಲಾ ನಾಣಿ, ಶ್ರೀನಿವಾಸ ಗೌಡ ಮುಂತಾದವರಿದ್ದಾರೆ.

ಈಗಾಗಲೆ ಈ ಚಿತ್ರದ ಮಂಗಳಮುಖಿಯರೊಂದಿಗಿನ ಹಾಡು ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಇನ್ನು ಸೋನು ಗೌಡ ಅಭಿನಯದ ದ್ಯಾವ್ರೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ 'ಗೋವಾ' ಚಿತ್ರದಲ್ಲಿ ಸೋನು ಬಿಜಿ.

English summary
Recently Kannada actress Sonu Gowda health upset in the sets of Half Mentlu. She soaks in the rain scene for nearly 2 hours. It severely affects her health status. The film, which is said to be a love story, has Mico Nagaraj, Hari, Tabla Nani, Srinivas Gowda and Mohan Juneja in significant roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada