»   » ಧನುಷ್ ಜೊತೆ ಲೇಟ್ ನೈಟ್ ಪಾರ್ಟಿಯಲ್ಲಿ ತ್ರಿಷಾ

ಧನುಷ್ ಜೊತೆ ಲೇಟ್ ನೈಟ್ ಪಾರ್ಟಿಯಲ್ಲಿ ತ್ರಿಷಾ

By: ಶಂಕರ್, ಚೆನ್ನೈ
Subscribe to Filmibeat Kannada

ಲೇಟ್ ನೈಟ್ ಪಾರ್ಟಿಗಳು, ಪಬ್ಬು, ಡಿಸ್ಕೋಗಳಲ್ಲೇ ಹೆಚ್ಚಿನ ಸಮಯ ಕಳೆಯುವ ತಾರೆಗಳಲ್ಲಿ ತ್ರಿಷಾ ಕೃಷ್ಣ ಉಳಿದೆಲ್ಲಾ ತಾರೆಗಳಿಗೆ ಮಾದರಿ ಎಂಬ ಆಪಾದನೆ ಇದೆ. ಇದಕ್ಕೆ ತಕ್ಕಂತಹ ಸುದ್ದಿಗಳು ಆಗಾಗ ಬಿತ್ತರವಾಗುತ್ತಲೇ ಇರುತ್ತವೆ. ಅಂತಹದ್ದೇ ಒಂದು ತಾಜಾ ಸುದ್ದಿ ಇದೀಗ ಬಂದಿದೆ.

ತಮಿಳು ನಟ, ರಜನಿಕಾಂತ್ ಅಳಿಯ ಧನುಷ್ ಜೊತೆ ಲೇಟ್ ನೈಟ್ ಪಾರ್ಟಿಯೊಂದಕ್ಕೆ ತ್ರಿಷಾ ಹೋಗಿದ್ದರು ಎಂಬ ಸಮಾಚಾರ ಕೋಲಿವುಡ್ ನಲ್ಲಿ ಸಖತ್ ಸುದ್ದಿಯಾಗಿದೆ. ಪಾರ್ಟಿಯಲ್ಲಿ ಇವರಿಬ್ಬರನ್ನೂ ನೋಡಿದವರು ತಮ್ಮ ಭಕ್ತಿ ಭಾವಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ.

Actress Trisha Krishnan late night party with Dhanush

ಲೇಟ್ ನೈಟ್ ಪಾರ್ಟಿಯಲ್ಲಿ ಇಬ್ಬರೂ ಬಹಳ ಕ್ಲೋಸ್ ಆಗಿ ಮೂವ್ ಆಗುತ್ತಿದ್ದರೆಂದೂ, ಮೇಲ್ಮೋಟಕ್ಕೆ ಸ್ನೇಹಿತರಂತೆ ಕಾಣುತ್ತಿದ್ದರೂ ಇವರಿಬ್ಬರ ನಡುವೆ ಇದಕ್ಕೂ ಮೀರಿದ ಸಲಿಗೆ ಇದೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಇವರಿಬ್ಬರೂ ಕೋಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿ ಬದಲಾಗಿದ್ದಾರೆ.

ವಿಶೇಷ ಎಂದರೆ ಕೋಲಿವುಡ್ ನಲ್ಲಿ ತ್ರಿಷಾ ಎಲ್ಲಾ ಸ್ಟಾರ್ ಗಳ ಜೊತೆಗೂ ಅಭಿನಯಿಸಿದ್ದಾರೆ. ಕೇವಲ ರಜನಿಕಾಂತ್ ಹಾಗೂ ಧನುಷ್ ಜೊತೆ ಮಾತ್ರ ತೆರೆ ಹಂಚಿಕೊಂಡಿಲ್ಲ. ಇವರಿಬ್ಬರ ನಡುವಿನ ಆತ್ಮೀಯ ಸಂಬಂಧ ನೋಡುತ್ತಿದ್ದರೆ ಶೀಘ್ರದಲ್ಲೇ ಜೊತೆಯಾಗಿ ಅಭಿನಯಿಸುವ ಸಾಧ್ಯತೆಗಳಿವೆ ಎಂದೇ ಭಾವಿಸಲಾಗಿದೆ.

English summary
Despite not sharing screen space till date, Dhanush and Trisha share a friendship bond off the screen. Recently, The duo were spotted partying late night with dance and music.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada