»   » ವೇದಿಕೆಗೆ ಕುಡಿದು ಬಂದ ಹಿರಿಯ ನಟಿ ಊರ್ವಶಿ

ವೇದಿಕೆಗೆ ಕುಡಿದು ಬಂದ ಹಿರಿಯ ನಟಿ ಊರ್ವಶಿ

By: ರವಿಕಿಶೋರ್
Subscribe to Filmibeat Kannada

ಪ್ರತಿಭಾವಂತ ನಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಾರೆ ಊರ್ವಶಿ ಅವರು ಇತ್ತೀಚಿನ ದಿನಗಳಲ್ಲಿ ಒಲ್ಲದ ಕಾರಣಗಳಿಗಾಗಿ ಸುದ್ದಿಗೆ ಆಹಾರವಾಗುತ್ತಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ಬಿಜಿಯಾಗಿರುವ ಊರ್ವಶಿ ಇದೀಗ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಸಾರ್ವಜನಿಕ ಸಭಯೊಂದಕ್ಕೆ ಅವರು ಕಂಠಪೂರ್ತಿ ಕುಡಿದು ಬಂದು ವೇದಿಕೆ ಮೇಲೆಯೇ ರಾದ್ಧಾಂತ ಮಾಡಿ ಎಲ್ಲರ ಅಸಹನೆಗೆ ಗುರಿಯಾಗಿದ್ದಾರೆ. ಕೇರಳದಲ್ಲಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ ಡಿಎಫ್) ಆಯೋಜಿಸಿದ್ದ ಫೀಮೇಲ್ ಲೆಜಿಸ್ಲೇಟಿವ್ ಸ್ಟಾಫ್ ಮೀಟಿಂಗ್ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಬೇಕಾಗಿತ್ತು. [ಎರಡನೇ ಪತಿಯಿಂದ ಗಂಡುಮಗು ಹಡೆದ ಊರ್ವಶಿ]

Actress Urvashi spotted drunk in Assembly Hall

ಈ ಕಾರ್ಯಕ್ರಮಕ್ಕೆ ತಡವಾಗಿ ಬಂದದ್ದಷ್ಟೇ ಅಲ್ಲದೆ, ವೇದಿಕೆಗೆ ತೂರಾಡುತ್ತಾ ಬಂದರು. ಅಲ್ಲಿಯೂ ಬಾಯಿಗೆ ಬಂದಂತೆ ಮಾತನಾಡಿ ಕಾರ್ಯಕ್ರಮ ನಿರ್ವಾಹಕರ ಮಾನ ಹರಾಜಾಕಿದ್ದಾರೆ. ಇದರಿಂದ ಕಾರ್ಯಕ್ರಮಕ್ಕೂ ತೊಂದರೆಯಾಗಿದೆ.

ಸಾರ್ವಜನಿಕವಾಗಿ ಊರ್ವಶಿ ಕುಡಿದು ಬಂದಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ ತನ್ನ ವಿಚ್ಛೇದನ ಕೇಸಿನ ವಿಚಾರಣೆಗಾಗಿ ಕೌಟುಂಬಿಕ ನ್ಯಾಯಾಲಕ್ಕೆ ಕಂಠಪೂರ್ತಿ ಕುಡಿದೇ ಬಂದು ಸುದ್ದಿ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿಯ ಎಡವಟ್ಟು ಮಾಡಿಕೊಂಡಿದ್ದಾರೆ. [ಒಗ್ಗರಣೆ ಚಿತ್ರ ವಿಮರ್ಶೆ]

ಊರ್ವಶಿ ಅವರು ತಮ್ಮ ಡಬ್ಬಿಂಗ್ ತಾವೇ ಹೇಳಿಕೊಂಡು ಪಾತ್ರಗಳಿಗೆ ಜೀವ ತುಂಬುವ ವಿಶಿಷ್ಟ ಶೈಲಿಯ ಕಲಾವಿದೆ. ಅಂತಹ ಕಲಾವಿದೆ ಈ ರೀತಿ ಮಾಡಿ ಅವರ ಅಭಿಮಾನಿಗಳು ಇರುಸುಮುರುಸಾಗುವಂತೆ ಮಾಡಿದ್ದಾರೆ. ಕನ್ನಡದ 'ಶ್ರಾವಣ ಬಂತು', 'ರಾಮಾ ಶಾಮಾ ಭಾಮ', 'ನಾನು ನನ್ನ ಹೆಂಡ್ತಿ', 'ಒಗ್ಗರಣೆ' ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ತಮಿಳು ಹಾಗೂ ಮಲೆಯಾಳಂನಲ್ಲೂ ಜನಪ್ರಿಯತೆ ಗಳಿಸಿರುವ ಊರ್ವಶಿ ಇದೀಗ ಮತ್ತೆ ತಾಯಿಯಾಗಿದ್ದಾರೆ.

English summary
Urvashi, has allegedly created disturbance on the dais of an assembly event.However, this is not the first time that Urvashi has been seen drunk in public. She had also came drunk to the family court in Ernakulam when she was getting her divorce.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada