»   » ದರ್ಶನ್ ಮನೆ ಮುಂದೆ ಆ ರಾತ್ರಿ ನಡೆದಿದ್ದಾದರೂ ಏನು?

ದರ್ಶನ್ ಮನೆ ಮುಂದೆ ಆ ರಾತ್ರಿ ನಡೆದಿದ್ದಾದರೂ ಏನು?

Posted By: ಜೀವನರಸಿಕ
Subscribe to Filmibeat Kannada

ಪ್ರತೀ ವರ್ಷವೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇಗೇ ಅಂತ ಮಾಧ್ಯಮದ ಮಂದಿ ಕ್ಯಾಮೆರಾ ಮತ್ತು ವಾಹನದ ಜೊತೆಗೆ ದರ್ಶನ್ ಮನೆಯಿಂದ ನೇರವಾಗಿ ಟಿವಿ ಚಾನೆಲ್ ಗಳಿಗೆ ಲೈವ್ ಕೊಡೋಕೆ ಅಂತೊಂದು ಓಬಿ ವ್ಯಾನ್ ತಂದಿರ್ತಾರೆ.

ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ಹುಟ್ಟುಬ್ಬದ ಸಂಭ್ರಮ ಅಂತ ರಾತ್ರಿಯಿಡೀ ಮನೆಮುಂದೆ ಕಾದು, ಊಟ ತಿಂಡಿ ಬಿಟ್ಟು ಮಾಹಿತಿಯನ್ನೂ ರಾಜ್ಯಾದ್ಯಂತ ಜನ್ರಿಗೆ ಕ್ಷಣ ಕ್ಷಣವೂ ತಲುಪಿಸ್ತಾರೆ.

ಆದ್ರೆ ಪ್ರತೀ ಸಾರಿಯೂ ಮಾಧ್ಯಮದವ್ರಿಗೆ ಅಲ್ಲೊಂದು ನಿರಾಶೆ ಹತಾಶೆ ಬೇಸರ ಕಾದಿರುತ್ತೆ. ಯಾಕಂದ್ರೆ ದರ್ಶನ್ ಅಭಿಮಾನಿಗಳು ಮಾಧ್ಯಮದವ್ರ ಮೇಲೆ ಹಸಿದ ಹುಲಿಗಳ ತರಹ ಎಗರಿಬಿಡ್ತಾರೆ. ಇದು ಹಲವು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದೆ ಕೂಡ. ಈ ವರ್ಷ ಕೂಡ ಅದಕ್ಕೆ ಹೊರತಾಗಿಲ್ಲ. [ಹುಟ್ಟುಹಬ್ಬದ ದಿನ ಏನಿದು ರಾದ್ಧಾಂತ ಚಾಲೆಂಜಿಂಗ್ ಸ್ಟಾರ್?]

ಈ ವರ್ಷ ಕೂಡ ಅದೇ ಘಟನೆ ಪುನರಾವರ್ತನೆಯಾಗಿದೆ

ಈ ವರ್ಷ ಕೂಡ ಅದೇ ಘಟನೆ ಪುನರಾವರ್ತನೆಯಾಗಿದೆ. ಪುನೀತ್ ಹುಟ್ಟುಹಬ್ಬಕ್ಕೆ ಕೂಡ ಇಷ್ಟೇ ಅಭಿಮಾನಿಗಳು ಬರ್ತಾರೆ. ಸುದೀಪ್ ಹುಟ್ಟುಹಬ್ಬಕ್ಕೆ ಕೂಡ ಸಾವಿರಾರು ಅಭಿಮಾನಿಗಳಿರ್ತಾರೆ. ಅಲ್ಲಿ ಯಾಕೆ ಹೀಗಾಗೋದಿಲ್ಲ ಅನ್ನೋ ಒಂದು ತರ್ಕಕ್ಕೆ ಉತ್ತರ ಸಿಕ್ಕೋದಿಲ್ಲ.

ಹಳೆಯ ದ್ವೇಷವನ್ನ ಅಭಿಮಾನಿಗಳು ಮರೆತಂತಿಲ್ಲ

2011ರಲ್ಲಿ ಟಿವಿ ಮಾಧ್ಯಮಗಳು ದರ್ಶನ್ ಕುಟುಂಬದ ಕುರಿತಾಗಿ ಬಿತ್ತರಿಸಿದ ವರದಿಗಳ ಪರಿಣಾಮವೋ ಏನೋ ಪಾಪ ಆವತ್ತಿನಿಂದ ಅದೆಷ್ಟು ರಿಪೋರ್ಟರ್ ಗಳು ಬದಲಾದ್ರೂ ಹಳೆಯ ದ್ವೇಷವನ್ನ ಅಭಿಮಾನಿಗಳು ಮರೆತಂತಿಲ್ಲ ಅನ್ನೋದು ಪ್ರತೀವರ್ಷವೂ ಕಾಣಿಸುತ್ತೆ.

ಕಾಲ್ಕಿತ್ತ ಟಿವಿ ಚಾನಲ್ ಪತ್ರಕರ್ತರು

ಇದಕ್ಕೆ ಸಾಕ್ಷಿ ಅನ್ನೋ ಹಾಗೆ ಈ ವರ್ಷವೂ ದರ್ಶನ್ ಅಭಿಮಾನಿಗಳ ದಾಂಧಲೆ ಮಾಧ್ಯಮಗಳ ಮೇಲೆ ನಡೆದಿದೆ. ಕಳೆದ ವರ್ಷ ಪಬ್ಲಿಕ್ ಟಿವಿಯವ ಕ್ಯಾಮೆರಾಮನ್ ಮಂಜಪ್ಪ ಅನ್ನೋರ ಮೇಲೆ ಹಲ್ಲೆ ಮಾಡೋಕೆ ಹೊರಟಿದ್ದನ್ನ ಕಣ್ಣಾರೆ ಕಂಡ ಉಳಿದ ಚಾನೆಲ್ ಪತ್ರಕರ್ತರು ಅಲ್ಲಿಂದ ಕಾಲ್ಕಿತ್ತಿದ್ರು.

ದರ್ಶನ್ ರೈಟ್ ಲೆಫ್ಟ್ ಹ್ಯಾಂಡ್ ಗಳ ಕೆಲಸಾನಾ?

ಇದಾದ ನಂತರ ದರ್ಶನ್ ಅಭಿಮಾನಿಗಳು ಪಬ್ಲಿಕ್ ಟಿವಿ ಸೇರಿದಂತೆ ಬೇರೆ ಚಾನೆಲ್ ಗಳ ವಾಹನವನ್ನೂ ಜಖಂ ಮಾಡೋ ಪ್ರಯತ್ನ ಮಾಡಿದ್ರು. ಇದೂ ಪ್ರತೀವರ್ಷವೂ ನಡೆಯುತ್ತಿದೆ. ಚಾಲೆಂಜಿಂಗ್ ಸ್ಟಾರ್ ಎಡಬಲದಲ್ಲಿ ನಿಲ್ಲೋ ರೈಟ್ ಲೆಫ್ಟ್ ಹ್ಯಾಂಡ್ ಗಳೇ ಹೀಗೆ ಹಲ್ಲೆ ಮಾಡೋಕೆ ಬರ್ತಾರೆ ಅಂತಾರೆ ಮಾಧ್ಯಮದ ಮಂದಿ.

ಮತ್ತಿನ ಗಮ್ಮತ್ತಿನಲ್ಲಿರೋ ರೈಟ್ ಲೆಫ್ಟ್ ಗಳು?

ಇನ್ನು ಅವರೆಲ್ಲರೂ ಬೆಳಗ್ಗೆಯೇ ಮತ್ತಿನ ಗಮ್ಮತ್ತಲ್ಲಿ ತೇಲ್ತಿರ್ತಾರೆ ಅನ್ನೋದು ಅವರನ್ನ ಸಹಿಸಿಕೊಂಡವರ ಮಾತುಗಳು. ದರ್ಶನ್ ಕೂಡ ಮಾಧ್ಯಮಗಳ ಜೊತೆ ಅದ್ರಲ್ಲೂ ಟಿವಿ ಮಾಧ್ಯಮಗಳ ಜೊತೆ ಸರಿಯಾದ ಸಂಬಂಧ ಇಟ್ಟುಕೊಂಡಿಲ್ಲ ಅನ್ನೋದು ಆಗಾಗ ಚಾಲ್ತಿಯಲ್ಲಿರೋ ಮಾತು.

ಯಾಕೆ ದರ್ಶನ್ ಬರ್ತಡೇಯಲ್ಲೇ ಹೀಗಾಗುತ್ತೆ

ಇಷ್ಟಕ್ಕೂ ಯಾಕೆ ದರ್ಶನ್ ಬರ್ತಡೇಯಲ್ಲೇ ಹೀಗಾಗುತ್ತೆ. ನಿಜಕ್ಕೂ ಹೀಗೆ ಆಗದಿದ್ರೆ ಸುಮ್ನೆ ಹೇಳೋಕಾಗುತ್ತಾ. ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದರು. ಆದರೀಗ ಅವರು ಕಂಪ್ಲೀಟ್ ಮಾಧ್ಯಮ ಸ್ನೇಹಿಯಾಗಿ ಬದಲಾಗಿದ್ದಾರೆ.

English summary
Actually, what took place on Challenging Star Darshan's 38th birthday party. Some strange people have been attacked on media and damaged TV channel's property. Why this berserk held on his birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada