For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ' ಚಿತ್ರದ ಬಜೆಟ್, VFX ಖರ್ಚು ಕೇಳಿ ದಂಗಾದ ಭಾರತ ಚಿತ್ರರಂಗ

  |

  ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಹೊಸ ಸಿನಿಮಾ ಆದಿಪುರುಷ. ರಾಮಾಯಣ ಆಧಾರಿತ ಈ ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಪ್ರಭಾಸ್ ಹೊರತುಪಡಿಸಿ ಉಳಿದ ಯಾವ ಪಾತ್ರಗಳು ಅಂತಿಮವಾಗಿಲ್ಲ. ಆದ್ರೀಗ, ಬಜೆಟ್ ವಿಚಾರದಲ್ಲಿ ಆದಿ ಪುರುಷ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡ್ತಿದೆ. ಅತಿ ಹೆಚ್ಚು ಬಜೆಟ್‌ನಲ್ಲಿ ತಯಾರಾಗಿದ್ದ ಈ ಹಿಂದಿನ ಚಿತ್ರಗಳನ್ನು ಸಹ ಆದಿ ಪುರುಷ ಹಿಂದಿಕ್ಕುತ್ತಿದೆ ಎಂಬ ವಿಚಾರ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

  'ಆದಿಪುರುಷ'ನಾದ ಪ್ರಭಾಸ್ ಗೆ ವಿಲನ್ ಆಗ್ತಾರಾ ಬಾಲಿವುಡ್ ನ ಈ ಖ್ಯಾತ ನಟ?'ಆದಿಪುರುಷ'ನಾದ ಪ್ರಭಾಸ್ ಗೆ ವಿಲನ್ ಆಗ್ತಾರಾ ಬಾಲಿವುಡ್ ನ ಈ ಖ್ಯಾತ ನಟ?

  ಜೊತೆಗೆ ಆದಿ ಪುರುಷ ಚಿತ್ರದ ವಿಎಫ್‌ಎಕ್ಸ್ ಕೆಲಸಕ್ಕಾಗಿ ಮಾತ್ರ ಚಿತ್ರದ ಒಟ್ಟು ಬಜೆಟ್‌ನಲ್ಲಿ ಅರ್ಧದಷ್ಟು ಖರ್ಚು ಮಾಡಲಾಗುತ್ತಿದೆ ಎಂಬ ವರದಿ ಗಮನ ಸೆಳೆಯುತ್ತಿದೆ. ಆದಿ ಪುರುಷ ಚಿತ್ರದ ಬಜೆಟ್ ಎಷ್ಟು? ಮುಂದೆ ಓದಿ...

  500 ಕೋಟಿ ಬಜೆಟ್‌ನಲ್ಲಿ ಚಿತ್ರ!

  500 ಕೋಟಿ ಬಜೆಟ್‌ನಲ್ಲಿ ಚಿತ್ರ!

  ಪ್ರಭಾಸ್ ನಟಿಸಲಿರುವ ಆದಿ ಪುರುಷ ಚಿತ್ರದ ಒಟ್ಟು ಬಜೆಟ್ 500 ಕೋಟಿ ಎಂದು ಹೇಳಲಾಗಿದೆ. ಈ ಚಿತ್ರಕ್ಕೆ ತಾನಾಜಿ ನಿರ್ದೇಶನ ಮಾಡಿದ್ದ ಓಂ ರಾವತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಭಾಸ್ ನಟಿಸಿರುವ ಸಾಹೋ ಚಿತ್ರದಲ್ಲಿ ಸಹ ನಿರ್ಮಾಪಕ ಹಾಗೂ ರಾಧೇ ಶ್ಯಾಮ್ ಚಿತ್ರಕ್ಕೆ ನಿರ್ಮಾಪಕರಾಗಿರುವ ಭೂಷಣ್ ಕುಮಾರ್ ಈಗ ಆದಿ ಪುರುಷ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

  VFX ಖರ್ಚು 250 ಕೋಟಿ!

  VFX ಖರ್ಚು 250 ಕೋಟಿ!

  ಆದಿ ಪುರುಷ ಸಿನಿಮಾ ಭಾರತೀಯ ಪ್ರೇಕ್ಷಕರಿಗೆ ದೃಶ್ಯ ವೈಭವವಾಗಲಿದೆ. ಚಿತ್ರಕ್ಕೆ ಬಹುತೇಕ ವಿಎಫ್‌ಎಕ್ಸ್ ಬಳಸಲಾಗುತ್ತದೆ. ಇದಕ್ಕಾಗಿ ಸುಮಾರು 250 ಕೋಟಿ ಅಂದಾಜು ಹಾಕಲಾಗಿದೆ. ಆದ್ರೆ, ಇದನ್ನು ನಿರ್ಮಾಪಕರು ಅಧಿಕೃತವಾಗಿ ಹೇಳಿಲ್ಲ.

  ಭಾರತದ ಅತಿ ದೊಡ್ಡ ಬಜೆಟ್ ಚಿತ್ರ ಯಾವುದು?

  ಭಾರತದ ಅತಿ ದೊಡ್ಡ ಬಜೆಟ್ ಚಿತ್ರ ಯಾವುದು?

  ಇದುವರೆಗೂ ಭಾರತದಲ್ಲಿ ಅತಿ ದೊಡ್ಡ ಬಜೆಟ್‌ನಲ್ಲಿ ಸಿದ್ಧವಾಗಿರುವ ಚಿತ್ರ ರಜನಿಯ 2.0 ಲೈಕಾ ಪ್ರೊಡಕ್ಷನ್ ಈ ಚಿತ್ರ ನಿರ್ಮಿಸಿದ್ದು ಇದರ ಬಜೆಟ್ 570 ಕೋಟಿ. ಸಾಹೋ ಸಿನಿಮಾ 350 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು. ಬಾಹುಬಲಿ ಚಿತ್ರಕ್ಕೆ 250 ಕೋಟಿ ಆಗಿತ್ತು. ಮಣಿರತ್ನಂ ನಿರ್ದೇಶನ ಮಾಡಲಿರುವ ಪೊನ್ನಿಯನ್ ಸೆಲ್ವನ್ ಚಿತ್ರ 500 ಕೋಟಿ ಬಜೆಟ್ ಆಗಲಿದೆ ಎಂದು ಹೇಳಲಾಗಿದೆ.

  ಸೀತೆಯಾಗಿ ಕೀರ್ತಿ ಸುರೇಶ್!

  ಸೀತೆಯಾಗಿ ಕೀರ್ತಿ ಸುರೇಶ್!

  ಆದಿ ಪುರುಷ ಸಿನಿಮಾದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದರೆ, ಸೀತೆ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Prabhas starrer Adi Purush Movie makers investing almost 250 crores for only VFX work. the project will made with around 500 crore says report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X