For Quick Alerts
  ALLOW NOTIFICATIONS  
  For Daily Alerts

  ಹಿಂದಿ 'ಬಿಗ್ ಬಾಸ್'ನಲ್ಲಿ 'ವಯಸ್ಕರ' ಚಿತ್ರದ ನಟ.! ಒಂದು ಕಂಡಿಷನ್

  By Bharath Kumar
  |

  ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗಿದೆ. ಸೆಪ್ಟಂಬರ್ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಆರಂಭವಾಗುವ ಸಾಧ್ಯತೆ ಇದೆ. ಈ ನಡುವೆ ಹಿಂದಿ ಬಿಗ್ ಬಾಸ್ ಕೂಡ ತನ್ನ ಕೆಲಸ ಚುರುಕು ಮಾಡಿದೆ.

  12ನೇ ಆವೃತ್ತಿಯ ಬಿಗ್ ಬಾಸ್ ಶೋಗೆ ಕೌಂಡೌನ್ ಶುರುವಾಗಿದ್ದು, ಯಾರೆಲ್ಲಾ ಸ್ಪರ್ಧಿಗಳಾಗಿ ಒಳಗೆ ಹೋಗಲಿದ್ದಾರೆ ಎಂಬ ಚರ್ಚೆ ಬಾಲಿವುಡ್ ನಲ್ಲಿ ಜೋರಾಗಿದೆ.

  ಹೀಗಿರುವಾಗ, ಬಿಗ್ ಬಾಸ್ ಕುರಿತು ಬ್ರೇಕಿಂಗ್ ನ್ಯೂಸ್ ವೊಂದು ಹೊರಬಂದಿದೆ. ಅದೇನಪ್ಪಾ ಅಂದ್ರೆ, ಈ ಬಾರಿಯ ಹಿಂದಿ ಬಿಗ್ ಬಾಸ್ ನಲ್ಲಿ ವಯಸ್ಕರ ಚಿತ್ರದ ನಟರೊಬ್ಬರು ಭಾಗಿಯಾಗಲಿದ್ದಾರಂತೆ. ಈ ನಟನಿಗೆ ಈಗಾಗಲೇ ಆಫರ್ ಮಾಡಲಾಗಿದ್ದು, ಆ ನಟ ಒಂದು ಕಂಡಿಷನ್ ಕೂಡ ಹಾಕಿದ್ದಾರಂತೆ.? ಅಷ್ಟಕ್ಕೂ, ಆ ವಯಸ್ಕರ ಚಿತ್ರದ ನಟ ಯಾರು.? ಆತ ಹಾಕಿರುವ ಕಂಡಿಷನ್ ಏನು.?

  ಬಿಗ್ ಬಾಸ್ ಗೆ ಬರ್ತಾರ ಡ್ಯಾನಿ ಡಿ.!

  ಬಿಗ್ ಬಾಸ್ ಗೆ ಬರ್ತಾರ ಡ್ಯಾನಿ ಡಿ.!

  ಬ್ರಿಟಿಷ್ ಮೂಲದ ವಯಸ್ಕರ ಚಿತ್ರ ನಟ ಡ್ಯಾನಿ ಡಿ ಅವರನ್ನ ಹಿಂದಿ ಬಿಗ್ ಬಾಸ್ ಸೀಸನ್ 12ಕ್ಕೆ ಆಹ್ವಾನ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ರೆ, ಈ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಇಂಗ್ಲೀಷ್ ನ ಕೆಲವು ಸಿನಿಮಾ ಸೇರಿದಂತೆ ವಯಸ್ಕರ ಚಿತ್ರದಲ್ಲಿ ಡ್ಯಾನಿ ಡಿ ಖ್ಯಾತಿ ಹೊಂದಿದ್ದಾರೆ.

  'ಬಿಗ್ ಬಾಸ್'ಗೆ ಹೋಗಿ ಬಂದವರದ್ದೆಲ್ಲಾ ಒಂದೊಂದು ಕಾಂಟ್ರವರ್ಸಿ.!'ಬಿಗ್ ಬಾಸ್'ಗೆ ಹೋಗಿ ಬಂದವರದ್ದೆಲ್ಲಾ ಒಂದೊಂದು ಕಾಂಟ್ರವರ್ಸಿ.!

  ಕಂಡಿಷನ್ ಗೆ ಒಪ್ಪಿದ್ರೆ ಪಕ್ಕಾ ಬರ್ತಾರೆ

  ಕಂಡಿಷನ್ ಗೆ ಒಪ್ಪಿದ್ರೆ ಪಕ್ಕಾ ಬರ್ತಾರೆ

  ಒಂದು ವೇಳೆ ಡ್ಯಾನಿ ಡಿ ಅವರನ್ನ ಬಿಗ್ ಬಾಸ್ ಹಿಂದಿಗೆ ಕರೆತರುವ ಪ್ಲಾನ್ ಮಾಡಿದ್ದೇ ಆದ್ರೆ, ಆ ನಟನ ಒಂದು ಕಂಡಿಷನ್ ಗೆ ಒಪ್ಪಿಕೊಳ್ಳಬೇಕು. ಹೌದು, ಡ್ಯಾನಿ ಡಿ ಅವರ ಗೆಳತಿ ಮಹಿಕಾ ಶರ್ಮಾ ಅವರನ್ನ ಕೂಡ ಬಿಗ್ ಬಾಸ್ ಗೆ ಅವಕಾಶ ಕೊಟ್ಟರೇ ಮಾತ್ರ ಡ್ಯಾನಿ ಡಿ ಬರ್ತಾರಂತೆ.

  ಯಾರು ಈ ಮಹಿಕಾ ಶರ್ಮಾ.?

  ಯಾರು ಈ ಮಹಿಕಾ ಶರ್ಮಾ.?

  ಬಾಲಿವುಡ್ ಕಿರುತೆರೆ ನಟಿ ಕಮ್ ಮಾಡೆಲ್ ಆಗಿದ್ದ ಮಹಿಕಾ ಶರ್ಮಾ ಬೇಡದ ವಿಚಾರಗಳಿಗೆ ಹೆಚ್ಚು ಸುದ್ದಿಯಾಗಿದ್ದಾರೆ. ಈ ಹಿಂದೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮೇಲಿನ ಕ್ರಶ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡು ಟೀಕೆಗೆ ಗುರಿಯಾಗಿದ್ದರು. ನಂತರ ನೀಲಿ ಚಿತ್ರಗಳ ರಾಜ ಡ್ಯಾನಿ ಡಿ ಸಿನಿಮಾದಲ್ಲಿ ಅಭಿನಯ ಮಾಡುವೆ ಅಂತ ಹೇಳಿ ಟ್ರೋಲ್ ಆಗಿದ್ದರು. ಹೇಳಿದಂತೆ ಈಗ ಡ್ಯಾನಿ ಡಿ ಜೊತೆ 'ಮಾಡ್ರನ್ ಕಲ್ಚರ್' ಎಂಬ ಸಿನಿಮಾ ಕೂಡ ಮಾಡ್ತಿದ್ದಾರೆ.

  ಪವಿತ್ರ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಿರುತೆರೆ ನಟಿಗೆ ಕಿರುಕುಳಪವಿತ್ರ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಿರುತೆರೆ ನಟಿಗೆ ಕಿರುಕುಳ

  ಬಿಗ್ ಬಾಸ್ ಅಥವಾ ಬಿಗ್ ಬ್ರದರ್.?

  ಬಿಗ್ ಬಾಸ್ ಅಥವಾ ಬಿಗ್ ಬ್ರದರ್.?

  ಅಂದ್ಹಾಗೆ, ಡ್ಯಾನಿ ಡಿಗೆ ರಿಯಾಲಿಟಿ ಶೋ ಒಂದರಿಂದ ಅಫರ್ ಬಂದಿರುವುದಾಗಿ ಅವರ ಮ್ಯಾನೇಜರ್ ಹೇಳಿದ್ದಾರಂತೆ. ಆದ್ರೆ, ಅದು 'ಬಿಗ್ ಬಾಸ್' ಅಥವಾ 'ಬಿಗ್ ಬ್ರದರ್' ಎಂಬುದರ ಬಗ್ಗೆ ಗೊಂದಲವಿದೆ ಎಂದಿರುವ ಡ್ಯಾನಿ ಡಿ, ''ಬಿಗ್ ಬಾಸ್ ಶೋಗೆ ಬರಲು ನಾನು ಸಿದ್ದ ಆದ್ರೆ ನನ್ನ ಜೊತೆ ಮಹಿಕಾ ಶರ್ಮಾ ಬರಬೇಕು'' ಎಂದಿದ್ದಾರೆ.

  'ಬಿಗ್ ಬಾಸ್'ಗಾಗಿ ದಾಖಲೆಯ ಸಂಭಾವನೆ ಪಡೆದ ಮೋಹನ್ ಲಾಲ್.!'ಬಿಗ್ ಬಾಸ್'ಗಾಗಿ ದಾಖಲೆಯ ಸಂಭಾವನೆ ಪಡೆದ ಮೋಹನ್ ಲಾಲ್.!

  ಸೆಪ್ಟಂಬರ್ ನಲ್ಲಿ ಬಿಗ್ ಬಾಸ್

  ಸೆಪ್ಟಂಬರ್ ನಲ್ಲಿ ಬಿಗ್ ಬಾಸ್

  ನಿರೀಕ್ಷೆಯಂತೆ ಅಕ್ಟೋಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಹಿಂದಿ ಕಾರ್ಯಕ್ರಮ ಆರಂಭವಾಗುತ್ತೆ. ಆದ್ರೆ, ಈ ವರ್ಷ ಸೆಪ್ಟಂಬರ್ ಕೊನೆಯಲ್ಲಿ ಶುರುವಾಗಲಿದೆ ಎನ್ನಲಾಗುತ್ತಿದೆ. ಎಂದಿನಂತೆ ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದು, ಈಗಾಗಲೇ ಸ್ಪರ್ಧಿಗಳ ಪಟ್ಟಿ ಚರ್ಚೆಯಾಗುತ್ತಿದೆ.

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ಇವರೆಲ್ಲ' ಸ್ಪರ್ಧಿಗಳಂತೆ.! ಹೌದೇನು.?'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ಇವರೆಲ್ಲ' ಸ್ಪರ್ಧಿಗಳಂತೆ.! ಹೌದೇನು.?

  English summary
  The buzz around the next season of the reality show Bigg Boss has started to gain momentum, and British adult film actor Danny D’s name is among the probable contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X