twitter
    For Quick Alerts
    ALLOW NOTIFICATIONS  
    For Daily Alerts

    'ಲಾಲ್‌ ಸಿಂಗ್ ಚಡ್ಡ'ಗೆ 180 ಕೋಟಿ ಹಾಕಿದ ಸಂಸ್ಥೆಗೆ ಕ್ಯಾರೆ ಅನ್ನಲಿಲ್ವಾ ಆಮಿರ್? ಈ ಕಿತ್ತಾಟ ಯಾಕೆ?

    |

    ಆಮಿರ್ ಖಾನ್ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿರೋದು ಗೊತ್ತೇ ಇದೆ. ಹಿಟ್ ಜೋಡಿ ಆಮಿರ್ ಖಾನ್ ಹಾಗೂ ಕರೀನಾ ಕಫೂರ್ ಕಾಂಬಿನೇಷನ್‌ ಸಿನಿಮಾ ಆಗಿದ್ದರೂ, ಜನರು ಮಾತ್ರ ಥಿಯೇಟರ್‌ಗೆ ಬಂದು ಸಿನಿಮಾ ನೋಡುವ ಮನಸ್ಸು ಮಾಡಲೇ ಇಲ್ಲ. ಅಂದ್ಹಾಗೆ ಇದು ಬಾಕ್ಸಾಫೀಸ್‌ನಲ್ಲಿ ದುರಂತ ಕಂಡ ಆಮಿರ್ ಖಾನ್‌ ಅಭಿನಯದ ಎರಡನೇ ಸಿನಿಮಾ.

    'ಲಾಲ್ ಸಿಂಗ್ ಚಡ್ಡ' ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ದೋಚುತ್ತೆ ಎಂದೇ ನಂಬಲಾಗಿತ್ತು. ಆದರೆ, ಟ್ರೇಡ್ ಅನಲಿಸ್ಟ್‌ಗಳು ಹಾಕಿಕೊಂಡ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿತ್ತು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಹಾಕಿದ ಬಂಡವಾಳವನ್ನು ಕಲೆ ಹಾಕಿಲ್ಲ ಅನ್ನೋ ಮಾತು ಬಾಲಿವುಡ್‌ನಲ್ಲಿಯೇ ಕೇಳಿ ಬರುತ್ತಿದೆ. ಹೀಗಾಗಿ ಸಿನಿಮಾ ಹೀನಾಯವಾಗಿ ಸೋಲು ಕಂಡ ಬಳಿಕ ವಯಾಕಾಮ್ 18 ಸ್ಟುಡಿಯೋ ಹಾಗೂ ಆಮಿರ್ ಖಾನ್ ಪ್ರೊಡಕ್ಷನ್ ನಡುವೆ ಕಿತ್ತಾಟ ಶುರುವಾಗಿದೆ ಎನ್ನಲಾಗಿತ್ತು.

    'ಹುಚ್ಚಾ ವೆಂಕಟ್' ಎದುರು ವಿಚಿತ್ರ ದಾಖಲೆ ಬರೆದ 'ಲೈಗರ್' ? ಐಎಂಡಿಬಿ ರೇಟಿಂಗ್ 'ಸಾಲಾ ಫ್ಲಾಪ್ ಬ್ರೀಡ್'!'ಹುಚ್ಚಾ ವೆಂಕಟ್' ಎದುರು ವಿಚಿತ್ರ ದಾಖಲೆ ಬರೆದ 'ಲೈಗರ್' ? ಐಎಂಡಿಬಿ ರೇಟಿಂಗ್ 'ಸಾಲಾ ಫ್ಲಾಪ್ ಬ್ರೀಡ್'!

    ಕಿತ್ತಾಟದ ಸುದ್ದಿ ಹರಿದಾಡುತ್ತಿದ್ದಂತೆ ಇದೆಲ್ಲಾ ಸುಳ್ಳು. ವಯಾಕಾಮ್ 18 ಸ್ಟುಡಿಯೋಗೆ ನಷ್ಟ ಆಗಿಲ್ಲ ಎನ್ನುವ ಸುದ್ದಿನೂ ಬಂದಿತ್ತು. ಆದ್ರೀಗ ಈ ಎರಡೂ ನಿರ್ಮಾಣ ಸಂಸ್ಥೆಗಳ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತು ಮತ್ತೆ ಕೇಳಿ ಬರುತ್ತಿದೆ. ಅಷ್ಟಕ್ಕೂ ಎರಡು ಸಂಸ್ಥೆಗಳ ನಡುವೆ ಆಗಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

    180 ಕೋಟಿ ರೂ. ಹಣ ಹೂಡಿದ್ದ ಸಂಸ್ಥೆ

    180 ಕೋಟಿ ರೂ. ಹಣ ಹೂಡಿದ್ದ ಸಂಸ್ಥೆ

    ಆಮಿರ್ ಖಾನ್ ನಿರ್ಮಾಣ ಸಂಸ್ಥೆ ಹಾಗೂ ವಯಾಕಾಮ್ 18 ಈ ಎರಡೂ ಸಂಸ್ಥೆಗಳು 'ಲಾಲ್ ಸಿಂಗ್ ಚಡ್ಡ'ಗೆ ಹಣ ಹೂಡಿದ್ದವು. ವಯಾಕಾಮ್ 18 ಸಂಸ್ಥೆ ಟಾಮ್ ಹ್ಯಾಂಕ್ಸ್ ಅಭಿನಯದ 'ಫಾರೆಸ್ಟ್ ಗಂಪ್' ಸಿನಿಮಾದ ರಿಮೇಕ್ ಹಕ್ಕುಗಳನ್ನು ಪಡೆಯುವಲ್ಲಿ ಮಹತ್ವದ ಪಾತ್ರವಹಿಸಿದೆ ಎನ್ನಲಾಗಿದೆ. ಇದೇ ಸಂಸ್ಥೆಯೀಗ ಸಿನಿಮಾ ಸೋಲು ಹಾಗೂ ಮಾರ್ಕೆಂಟ್ ವಿಚಾರವಾಗಿ ಆಮಿರ್ ಖಾನ್ ವಿರುದ್ಧ ತಿರುಗಿಬಿದ್ದಿದೆ ಎಂದು ಸಿನಿಮಾ ವೆಬ್‌ ಸೈಟ್ ಬಾಲಿವುಡ್‌ ಹಂಗಾಮ ವರದಿ ಮಾಡಿದೆ.

    'ಲಾಲ್ ಸಿಂಗ್ ಚಡ್ಡ' ಸೋಲಿನ ಬಳಿಕ ಆಮಿರ್ ಮುಂದಿನ ನಡೆಗೆ ಮಾಜಿ ಪತ್ನಿ ಸಾಥ್!'ಲಾಲ್ ಸಿಂಗ್ ಚಡ್ಡ' ಸೋಲಿನ ಬಳಿಕ ಆಮಿರ್ ಮುಂದಿನ ನಡೆಗೆ ಮಾಜಿ ಪತ್ನಿ ಸಾಥ್!

    ಯಾಕೀ ವಿವಾದ?

    ಯಾಕೀ ವಿವಾದ?

    ಅಷ್ಟಕ್ಕೂ ಆಮಿರ್ ಖಾನ್ ವಿರುದ್ಧ ವಯಾಕಾಮ್ 18 ಸ್ಟುಡಿಯೋ ತಿರುಗಿಬಿದ್ದಿದ್ದು ಏಕೆ? ಅನ್ನೋದನ್ನು ವೆಬ್‌ಸೈಟ್ ವರದಿ ಮಾಡಿದೆ. 'ಲಾಲ್ ಸಿಂಗ್ ಚಡ್ಡ' ಸಿನಿಮಾ ಮಾರ್ಕೆಟಿಂಗ್ ಹಾಗೂ ಪ್ರಮೋಷನ್ ಅನ್ನು ಆಮಿರ್ ಖಾನ್ ಅವರೇ ನೋಡಿಕೊಳ್ಳಲು ಮುಂದಾಗಿದ್ದರು. ವಯಾಕಾಮ್ 18 ಸ್ಟುಡಿಯೋ ಹಾಗೂ ಆಮಿರ್ ಖಾನ್ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ಸಿನಿಮಾ ನಿರ್ಮಿಸಿದ್ದರು. ಆದರೂ, ವಯಾಕಾಮ್ 18 ಬಗ್ಗೆ ಎಲ್ಲೂ ಆಮಿರ್ ಪ್ರಸ್ತಾಪವನ್ನೇ ಮಾಡಿಲ್ಲ. ಇದು ವಯಾಕಾಮ್ 18 ನಿದ್ದೆ ಕೆಡಿಸಿತ್ತು. ಹಣ ಹಾಕಿದ್ದರೂ, ಸಿನಿಮಾದ ಪ್ರಚಾರದಲ್ಲಿ ಸಂಸ್ಥೆಯ ಹೆಸರನ್ನು ಪ್ರಸ್ತಾಪ ಮಾಡದೆ ಇರೋದು ಜಗಳಕ್ಕೆ ಕಾರಣ ಎಂದು ವರದಿಯಾಗಿದೆ.

    ಪ್ರಮೋಷನ್‌ನಲ್ಲಿ ಆಮಿರ್ ನಿರ್ಲಕ್ಷ್ಯ?

    ಪ್ರಮೋಷನ್‌ನಲ್ಲಿ ಆಮಿರ್ ನಿರ್ಲಕ್ಷ್ಯ?

    ವಯಾಕಾಮ್ 18 ಸ್ಟುಡಿಯೋ 180 ಕೋಟಿ ರೂ. ಹಣ ಹೂಡಿದ್ದರೂ, ಸಿನಿಮಾ ನಿರ್ಮಾಣ ಹಾಗೂ ಕ್ರಿಯೇಟಿವಿಟಿ ವಿಚಾರದಲ್ಲಿ ಆಮಿರ್ ಖಾನ್ ತಲೆ ಹಾಕಲು ಬಿಟ್ಟಿಲ್ಲ. ಅಲ್ಲದೆ ಆಮಿರ್ ಖಾನ್ ಪ್ರಚಾರಕ್ಕೆ ಅಂತ ಇಳಿದಾಗ, ಕೌನ್ ಬನೇಗಾ ಕರೋಡ್ಪತಿ ಹಾಗೂ ಕಾಫಿ ವಿತ್ ಕರಣ್ ಸೀಸನ್ 7ರಲ್ಲಿ ಭಾಗವಹಿಸಿದ್ದರು. ಈ ವೇಳೆನೂ ವಯಾಕಾಮ್ 18 ಬಗ್ಗೆ ಎಲ್ಲೂ ಪ್ರಸ್ತಾಪವನ್ನು ಮಾಡಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ ಎನ್ನಲಾಗಿದೆ.

    ಆಮಿರ್ ಕಥೆಯೇನು?

    ಆಮಿರ್ ಕಥೆಯೇನು?

    ಇನ್ನೊಂದು ಕಡೆ ಆಮಿರ್ ಖಾನ್ ಹಾಗೂ ಅವರ ತಂಡದ ವರ್ಷನ್ ಬೇರೆನೇ ಇದೆ. ವಯಾಕಾಮ್ 18 ಸ್ಟುಡಿಯೋ 'ಲಾಲ್ ಸಿಂಗ್ ಚಡ್ಡ' ಸಿನಿಮಾಗೆ ಸರಿಯಾಗಿ ಸಪೋರ್ಟ್ ಮಾಡುತ್ತಿಲ್ಲ ಎಂಬ ಆಮಿರ್ ಅಂದುಕೊಂಡಿದ್ದರು. ಈ ಕಾರಣಕ್ಕೆ ಅವರೇ ಸಿನಿಮಾ ಪ್ರಚಾರ ಹಾಗೂ ಮಾರ್ಕೆಟಿಂಗ್‌ಗೆ ಇಳಿದಿದ್ದರು ಎಂದು ಬಾಲಿವುಡ್‌ ಹಂಗಾಮಕ್ಕೆ ಮೂಲಗಳು ತಿಳಿಸಿವೆ.

    English summary
    After Lal Singh Chaddha Not Well Between Viacom 18 Studios and Aamir Khan Productions, Know More
    Tuesday, August 30, 2022, 17:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X