For Quick Alerts
  ALLOW NOTIFICATIONS  
  For Daily Alerts

  ಹಸಿಬಿಸಿ ಚುಂಬನ ದೃಶ್ಯದಲ್ಲಿ ಸಿಕ್ಕಿಬಿದ್ದ ಅನಿರುದ್ಧ್

  |

  ಸ್ವಲ್ಪ ಕಾಲದ ಹಿಂದೆ ದೇಶಾದ್ಯಂತ ಮನೆಮಾತಾಗಿದ್ದ 'ಕೊಲವೆರಿ ಡಿ...' ಹಾಡಿನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಹುಶಃ ಅದಕ್ಕಿಂತ ಚೆನ್ನಾಗಿರುವ ಇನ್ನೊಂದು ಹಾಡು ಮಾಡಿರಬೇಕು ಎಂದು ನೀವಂದುಕೊಂಡಿದ್ದರೆ ನಿಮ್ಮ ಎಣಿಕೆ ತಪ್ಪು. ಅವರೀಗ ಸುದ್ದಿಯಾಗಿದ್ದು 'ಹಾಟ್ ಕಿಸ್ ಫೋಟೋ ಲೀಕ್' ಆಗಿದ್ದರಿಂದ. ಆಂಡ್ರಿಯಾ ಹಾಗೂ ಅನಿರುದ್ಧ್ ಖಾಸಗಿ ಕ್ಷಣದ ಚುಂಬನದ ಫೋಟೋವೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

  ನಟಿ ಹಾಗೂ ಗಾಯಕಿ ಆಂಡ್ರಿಯಾ ಜೆರೆಮಿಯಾ ಹಾಗೂ ಅನಿರುದ್ಧ ರವಿಚಂದರ್ ಮಧ್ಯೆ ಲವ್ ಶುರುವಾಗಿದೆ. ಆದರೆ ಅದನ್ನು ಇಬ್ಬರೂ ಒಪ್ಪಿಕೊಳ್ಳಲು ತಯಾರಿಲ್ಲ. ಬದಲಿಗೆ ತಮ್ಮ ನಡುವಿನ ಸಂಬಂಧವನ್ನು ಮಾಧ್ಯಮದೆದುರು ಈ ಇಬ್ಬರೂ ಅಲ್ಲಗಳೆದಿದ್ದರು. ಆದರೀಗ ಅವರಿಬ್ಬರೂ ಖಾಸಗಿ ಕ್ಷಣದಲಲ್ಲಿದ್ದ 'ಲಿಪ್ ಲಾಕ್' ಫೋಟೋ ಅಂತರ್ಜಾಲದ ತುಂಬಾ ಹರಿದಾಡಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಖಾಸಗಿ ಕ್ಷಣದಲ್ಲಿ ಮೈಮರೆತಿದ್ದು ಸಾರ್ವಜನಿಕ ಸುದ್ದಿಯಾಗಿದೆ.

  ಯಾರೋ ಕಿಡಿಗೇಡಿಗಳು ಕ್ಲಿಕ್ಕಿಸಿದ ಲಿಪ್ ಲಾಕ್ ಫೋಟೋ ಅವರಿಬ್ಬರ ರಹಸ್ಯ ಸಂಬಂಧಕ್ಕೆ ಸಾಕ್ಷಿಯಾಗಿ ಹರಿದಾಡುತ್ತಿದೆ. ಈ ಫೋಟೋಗಳೀಗ ಇಂಟರ್ನೆಟ್ ನಲ್ಲಿ ಯಾವ ಪರಿ ಓಡಾಡುತ್ತಿದೆ ಎಂದರೆ ಅನಿರುದ್ಧರ ಕೊಲವೆರಿ ಹಾಡಿಗಿಂತ ಈ ಫೋಟೋಗಳೇ ಹೆಚ್ಚು ಕ್ಲಿಕ್ಕಾಗುವ ವಾತಾವರಣ ನಿರ್ಮಾಣವಾಗಿದೆ. 'ಏನಿಲ್ಲ ಏನಿಲ್ಲ... ನಮ್ಮ ನಡುವೆ ಏನಿಲ್ಲ..." ಎಂದು ಈ ಮೊದಲು ಹೇಳುತ್ತಿದ್ದ ಈ ಇಬ್ಬರೂ ಈಗ ಅದೇನು ಹೇಳುತ್ತಾರೋ?

  ಅದೇನೇ ಇರಲಿ, ಸಂಗೀತ ನಿರ್ದೇಶಕ ಅನಿರುದ್ಧ ಮತ್ತು ಆಂಡ್ರಿಯಾ ಜೊತೆಯಾಗಿ ಕೆಲಸ ಮಾಡಿರುವ ಕಮಲಹಾಸನ್ ನಾಯಕತ್ವದ 'ವಿಶ್ವರೂಪಂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೇ ವೇಳೆ ಈ ಜೋಡಿಯ ಖಾಸಗಿ ಕ್ಷಣ ಅಂತರ್ಜಾಲದಲ್ಲಿ ಕಿಡಿಗೇಡಿಗಳ ಕೈಗೆ ಸಿಕ್ಕು ಪ್ರಪಂಚ ಪರ್ಯಟನೆ ಕೈಗೊಂಡಿದೆ. ಈ ಮೊದಲು ನಯನತಾರಾ ಹಾಗೂ ಸಿಂಬು ನಡುವಿನ 'ಗುಪ್ತ್ ಸಂಬಂಧ' ಇದೇ ರೀತಿ ಸಾಮಾಜಿಕ ತಾಣಗಳಲ್ಲಿ ಹರಾಜಾಗಿತ್ತು. ಈಗ ಅನಿರುದ್ಧ್ ಹಾಗೂ ಆಂಡ್ರಿಯಾ ಸರದಿ. (ಏಜೆನ್ಸೀಸ್)

  English summary
  The pictures of Anirudh Ravichander and Andrea Jeremiah kissing have been leaked. The couple sharing lip-lock is doing rounds on internet.
 
  Thursday, August 23, 2012, 14:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X