»   » ಆಸ್ಪತ್ರೆಯಲ್ಲಿ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ

ಆಸ್ಪತ್ರೆಯಲ್ಲಿ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ

Posted By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ನಲ್ಲಿ ಈ ಜೋಡಿಯ ಬಗ್ಗೆ ಈಗಾಗಲೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇಬ್ಬರೂ ಈಗಾಗಲೆ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದಾರೆ ಎಂಬ ಸುದ್ದಿಯೂ ಚಾಲ್ತಿಯಲ್ಲಿದೆ. ತಮ್ಮ ಮದುವೆ ಬಗ್ಗೆ ಪ್ರಸ್ತಾಪಿಸಲು ಪೋಷಕರನ್ನು ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ ಎಂಬುದು ಇನ್ನೊಂದು ಕಥೆ.

ಈ ರೀತಿಯ ಸುದ್ದಿಗಳ ನಡುವೆಯೇ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಇನ್ನೊಂದಿಷ್ಟು ಸುದ್ದಿಗೆ ಆಹಾರವಾಗಿದ್ದಾರೆ. ಮುಂಬೈನ ಅಂಧೇರಿಯ ಕೋಕಿಲಾ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಇಬ್ಬರೂ ಜೊತೆಜೊತೆಯಾಗಿ ಪ್ರತ್ಯಕ್ಷವಾಗಿದ್ದಾರೆ. [ಅನುಷ್ಕಾ-ಕೊಹ್ಲಿ ಲವ್ ಸ್ಟೋರಿಯಲ್ಲಿ ಹೊಸ ಟ್ವಿಸ್ಟ್]

Anushka Sharma

ಈ ಆಸ್ಪತ್ರೆ ಅನುಷ್ಕಾ ಅವರ ಮನೆಗೆ ಕೂಗಳತೆ ದೂರದಲ್ಲೇ ಇದೆಯಂತೆ. ಆಸ್ಪತ್ರೆ ಮನೆಗೆ ಹತ್ತಿರವಾಗಿದೆ ಎಂಬ ಕಾರಣಕ್ಕೆ ಯಾರದರೂ ಭೇಟಿ ಕೊಡಲು ಸಾಧ್ಯವೇ? ಈ ಜೋಡಿಯನ್ನು ನೋಡಿದ ಅಭಿಮಾನಿಗಳು ತಮ್ಮ ಮೊಬೈಲ್, ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸಿಕೊಂಡಿದ್ದಾರೆ.

ಇಷ್ಟಕ್ಕೂ ಇಬ್ಬರೂ ಯಾಕೆ ಆಸ್ಪತ್ರೆಗೆ ಹೋಗಿದ್ದರು ಎಂಬುದು ಮಾತ್ರ ಗುಟ್ಟಾಗಿ ಉಳಿದಿದೆ. ಅಯ್ಯೋ ಬಿಡ್ರಿ ಇವರಿಬ್ಬರೂ ಒಟ್ಟಿಗೆ ಮನೆಯಲ್ಲೇ ಈ ಹಿಂದೆ ಪ್ರತ್ಯಕ್ಷವಾಗಿದ್ದರು. ಈಗ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವುದರಲ್ಲಿ ವಿಶೇಷ ಏನು ಎನ್ನುತ್ತಿದ್ದಾರೆ.

English summary
Anushka Sharma and Virat Kohli are rumoured to be engaged, at least that's the news that has been circling round and about in the Bollywood film industry. The couple were spotted at the Kokilaben Dhirubhai Ambani hospital in Andheri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada