For Quick Alerts
  ALLOW NOTIFICATIONS  
  For Daily Alerts

  ವಿರಾಟ್ ಕೊಹ್ಲಿ ಜತೆ ಅನುಷಾ ಶರ್ಮ ಡೇಟಿಂಗ್

  By ಜೇಮ್ಸ್ ಮಾರ್ಟಿನ್
  |

  ಇತ್ತೀಚೆಗಷ್ಟೇ 25ನೇ ಹುಟ್ಟುಹಬ್ಬದ ಆಚರಿಸಿಕೊಂಡ ಟೀಂ ಇಂಡಿಯಾದ ಪ್ರತಿಭಾವಂತ ಆಟಗಾರ ವಿರಾಟ್ ಕೊಹ್ಲಿ ಜತೆ ಬೆಂಗಳೂರು ಬೆಡಗಿ ಅನುಷ್ಕಾ ಶರ್ಮ ಡೇಟಿಂಗ್ ಮಾಡುತ್ತಿದ್ದಾಳೆ ಎಂದು ಸುದ್ದಿ ಹಬ್ಬಿದೆ. ಕೊಹ್ಲಿ ಜತೆ ಹುಡುಗಿಯರ ಹೆಸರು ತಗುಲಿಕೊಳ್ಳುವುದು ಹೊಸದೇನಲ್ಲ ಈ ಹಿಂದೆ ಕೂಡಾ ಮೂರ್ನಾಲ್ಕು ನಟಿಯರು ಗೆಳತಿಯರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.

  ಆದರೆ, ಬಾಲಿವುಡ್ ನಟಿ ಸಾರಾ ಜೇನ್ ಡಯಾಸ್ ನಂತರ ಅನುಷಾ ಹೆಸರು ಬಲವಾಗಿ ಕೇಳಿ ಬಂದಿದೆ. ಈ ಹಿಂದೆ ಸುರೇಶ್ ರೈನಾ ಜತೆ ಕೂಡಾ ಅನುಷಾ ಹೆಸರು ಸಿಕ್ಕಿಕೊಂಡಿತ್ತು. ಕೊಹ್ಲಿ ಹಾಗೂ ಅನುಷಾ ಇಬ್ಬರು ಒಟ್ಟಿಗೆ ಶಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಂಡ ಮೇಲೆ ಈ ರೀತಿ ಗಾಳಿ ಸುದ್ದಿ ಹಬ್ಬಿದೆ.

  ಗಾಳಿಸುದ್ದಿ ಬಲೂನಿನಂತೆ ಇನ್ನಷ್ಟು ಊದುವಂತೆ ಈ ಜೋಡಿ ಕೂಡಾ ನಡೆದುಕೊಂಡಿದೆ. ಮುಂಬೈನ ವರ್ಸೊವಾದಲ್ಲಿ ಕೊಹ್ಲಿ ಹಾಗೂ ಅನುಷಾ ಒಂದೆ ಕಾರಿನಲ್ಲಿ ನಲಿನಲಿದು ಸಾಗುತ್ತಿರುವುದು ಪತ್ತೆಯಾಗಿದೆ. ಇಬ್ಬರ ನಡುವೆ ಎಷ್ಟೋ ಕಾಲದ ಗೆಳೆತನ ಇರುವಂತೆ ಕಂಡು ಬಂದಿತು ಎಂದು ನೋಡುಗರು ಹೇಳುವ ಮಾತು.

  ಯಾರಾದರೂ ನೋಡುತ್ತಾರೆ ಎಂಬ ಪರಿವಿಲ್ಲದ್ದಂತೆ ಇಬ್ಬರು ಮಾತಿನಲ್ಲಿ ತೊಡಗಿದ್ದರು. ಕೊಹ್ಲಿ ಜತೆ ಅನುಷಾ ಆಪ್ತವಾಗಿ ನಡೆದುಕೊಂಡಿದ್ದು ನೋಡುಗರು ಹುಬ್ಬೇರಿಸುವಂತೆ ಮಾಡಿದೆ ಎನ್ನಲಾಗಿದೆ. ಬಾಲಿವುಡ್ ನಟಿಯರು ಹಾಗೂ ಕ್ರಿಕೆಟರ್ಸ್ ನಡುವೆ ಇರುವ ಅನ್ಯೋನ್ಯ ಸಂಬಂಧಕ್ಕೆ ಹಲವು ದಶಕಗಳ ಇತಿಹಾಸವೇ ಇದೆ. ಕೊಹ್ಲಿ ಹಾಗೂ ಅನುಷಾ ಹೊಸ ಸೇರ್ಪಡೆ ಅಷ್ಟೆ. ಬಾಲಿವುಡ್ -ಕ್ರಿಕೆಟ್ ಪ್ಲೇ ಬಾಯ್ ಕೊಹ್ಲಿ ಜತೆ ಕಾಣಿಸಿಕೊಂಡ ನಟಿಮಣಿಯರು ಸಣ್ಣ ಝಲಕ್ ಮುಂದಿದೆ ಓದಿ

  ಸಾರಾ ಜೇನ್ ಡಯಾಸ್

  ಸಾರಾ ಜೇನ್ ಡಯಾಸ್

  ಗೇಮ್, ಸೂಪರ್ ಕೂಲ್ ಹೇ ಹಮ್ ಚಿತ್ರಗಳಲ್ಲಿ ನಟಿಸಿದ್ದ ಭಾರತೀಯ ಸುಂದರಿ ಸಾರಾ ಜೇನ್ ಡಯಾಸ್ ಜತೆ ಮೊದಲಿಗೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದ. ಅದರೆ, ಇಬ್ಬರ ನಡುವೆ ಹೆಚ್ಚು ಕಾಲ ಬಾಂಧವ್ಯ ಉಳಿಯಲಿಲ್ಲ ಎನ್ನಲಾಗಿದೆ. ಆದರೆ, ಇಬ್ಬರು ಎಂದೂ ಕೂಡಾ ಸಂಬಂಧದ ಬಗ್ಗೆ ಮಾತನಾಡಿರಲಿಲ್ಲ

  ಇಝಾಬೆಲ್ ಜತೆ

  ಇಝಾಬೆಲ್ ಜತೆ

  ಸಿಂಗಾಪುರದಲ್ಲಿ ಇಝಾಬೆಲ್ ಮತ್ತು ವಿರಾಟ್ ಮೊದಲ ಬಾರಿ ಭೇಟಿಯಾಗಿದ್ದರು. ಇಝಾಬೆಲ್ ಗೂ ಕ್ರಿಕೆಟ್ ಹುಚ್ಚಿದ್ದ ಕಾರಣ ಕೊಹ್ಲಿ ಜತೆ ಚೆನ್ನಾಗಿ ಕಲೆತು ಬೆರೆತು ನಲಿದಾಡಿದ್ದರು.

  ತಮನ್ನಾ ಜತೆ

  ತಮನ್ನಾ ಜತೆ

  ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ನಟಿ ತಮನ್ನಾ ಜತೆ ಕೆಲ ಕಾಲ ವಿರಾಟ್ ಕೊಹ್ಲಿ ಸುತ್ತಾಟ ನಡೆಸಿದ್ದರು.

  ಬೆಡಗಿ ಸಂಜನಾ

  ಬೆಡಗಿ ಸಂಜನಾ

  ಬೆಂಗಳೂರಿನ ಬೆಡಗಿ ಸಂಜನಾ ಅವರು ಮಲ್ಯ ಒಡೆತನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡದ ಪ್ರಚಾರದ ಸಂದರ್ಭ ತಂಡದ ಪ್ರಮುಖ ಆಟಗಾರ ಕೊಹ್ಲಿ ಜತೆ ಸಂಜನಾ ಕಾಣಿಸಿಕೊಂಡಿದ್ದಳು

  English summary
  Virat Kohli, the new Prince of Team India, has innumerable female fan following across the globe. Adding up to this, we now hear that Kohli has also managed to charm quite a few Bollywood hotties as well. After Sarah Jane Dias, it is said that Virat has got quite close to actress Anushka Sharma, with whom he had recently done a shampoo ad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X