For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿತೆರೆಗೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸಜ್ಜು

  By Rajendra
  |

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ತಮ್ಮ ಪುತ್ರಿ ಐಶ್ವರ್ಯಾರನ್ನು ಸಿನೆಮಾ ರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ. ಈ ಬಗ್ಗೆ ಅವರು ಪಕ್ಕಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ತಮಿಳುನಾಡಿನಿಂದ ತೇಲಿಬಂದಿದೆ.

  ಅಪ್ಪನ ಜೊತೆ ಆಗಾಗ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಐಶ್ವರ್ಯಾ ಈಗಾಗಲೆ ಚಿತ್ರೋದ್ಯಮದ ಗಮನವನ್ನೂ ಸೆಳೆದಿದ್ದಾರೆ. ನೋಡಲು ಮುದ್ದಾಗಿರುವ ಐಶ್ವರ್ಯಾ ಅವರದು ಫೋಟೋಜನಿಕ್ ಫೇಸ್. ಚಿತ್ರರಂಗಕ್ಕೆ ಹೇಳಿ ಮಾಡಿಸಿದ ಮುಖ ಎಂಬ ಮಾತುಗಳು ಕೇಳಿಬರುತ್ತಿವೆ.

  ತಮಿಳು ಚಿತ್ರದ ಮೂಲಕ ಐಶ್ವರ್ಯಾ ಬೆಳ್ಳಿಪರದೆ ಬೆಳಗಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅರ್ಜುನ್ ಸರ್ಜಾ ಕುಟುಂಬಿಕರು ಇನ್ನೂ ಖಚಿತಪಡಿಸಿಲ್ಲ. ಬಹುಶಃ ಈಕೆಯ ಚೊಚ್ಚಲ ಚಿತ್ರಕ್ಕೆ ತಮಿಳು ನಟ ವಿಶಾಲ್ ನಾಯಕ ನಟನಾಗುವ ಸಾಧ್ಯತೆಗಳಿವೆ.

  ಅರ್ಜುನ್ ಸರ್ಜಾ ಹಾಗೂ ಅವರ ಪತ್ನಿ ನಿವೇದಿತಾ (ಆಶಾರಾಣಿ) ಅವರಿಗೂ ತಮ್ಮ ಮಗಳು ಐಶ್ವರ್ಯಾ ಬಣ್ಣದಲೋಕಕ್ಕೆ ಪರಿಚಯಿಸುವ ಬಗ್ಗೆ ಆಸಕ್ತಿ ಇದೆಯಂತೆ. ಅರ್ಜುನ್ ಸರ್ಜಾ ಅವರ ಪತ್ನಿ ನಿವೇದಿತಾ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ರಥಸಪ್ತಮಿ' ಚಿತ್ರದಲ್ಲಿ ಅಭಿನಯಿಸಿದ್ದರು.

  ಅರ್ಜುನ್ ಸರ್ಜಾ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿಯೇ ಐಶ್ವರ್ಯಾ. ಕಿರಿಯ ಪುತ್ರಿಯ ಹೆಸರು ಅಂಜನಾ. ಅರ್ಜುನ್ ಸರ್ಜಾ ಅವರ ಕೈಹಿಡಿದ ಬಳಿಕ ನಿವೇದಿತಾ ಅವರು ಚಿತ್ರರಂಗದಿಂದ ದೂರ ಉಳಿದರು.

  ಒಟ್ಟಿನಲ್ಲಿ ಸರ್ಜಾ ಕುಟುಂಬದ ಮತ್ತೊಂದು ಕುಡಿ ಬೆಳ್ಳಿತೆರೆ ಬೆಳಗಲು ಸಜ್ಜಾಗಿರುವುದು ಚಿತ್ರೋದ್ಯಮದ ಗಮನಸೆಳೆದಿದೆ. ಸರ್ಜಾ ಕುಟುಂಬದ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಈಗಾಗಲೆ ಕನ್ನಡದಲ್ಲಿ ಗುರುತಿಸಿಕೊಂಡಿರುವುದು ಗೊತ್ತೇ ಇದೆ. (ಏಜೆನ್ಸೀಸ್)

  English summary
  Action King Arjun Sarja daughter Aishwarya all set to enter films. If it is believed that Aishwarya will be entering the film industry through a Tamil film in which Vishaal is the hero.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X