Don't Miss!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Technology
ಈ ಅತ್ಯುತ್ತಮ ಸ್ಮಾರ್ಟ್ಫೋನ್ಗಳು 15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- News
Budget 2023; ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್: ಸಿದ್ದರಾಮಯ್ಯ
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸವರ್ಷಕ್ಕೆ ಕೃತಿಗೆ ಪ್ರಭಾಸ್ ಪ್ರಪೋಸ್? ರೊಮ್ಯಾಂಟಿಕ್ ಪ್ಲೇಸ್‌ನಲ್ಲಿ ಜೋಡಿ ನ್ಯೂ ಇಯರ್ ಸೆಲೆಬ್ರೇಷನ್!
ಬಾಹುಬಲಿ ಪ್ರಭಾಸ್ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಇನ್ನು ಕೃತಿ ಸನೂನ್ ಜೊತೆ ಡಾರ್ಲಿಂಗ್ ಡೇಟಿಂಗ್ ನಡೆಸ್ತಿದ್ದಾರೆ ಎನ್ನುವ ಗಾಸಿಪ್ ಹಬ್ಬಿತ್ತು. ಅದೆಲ್ಲ ಸುಳ್ಳು ಎಂದು ಬಾಲಿವುಡ್ ಬ್ಯೂಟಿ ಸ್ಪಷ್ಟಪಡಿಸಿದ್ದರು.
'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಹಾಗೂ ಕೃತಿ ಸನೂನ್ ಶ್ರೀರಾಮ ಹಾಗೂ ಸೀತಾಮಾತೆ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ಪ್ರಭಾಸ್ ನಟಿ ಕೃತಿಗೆ ಪ್ರಪೋಸ್ ಮಾಡ್ತಾರೆ ಎನ್ನುವ ನ್ಯೂಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲ ಹೊಸ ವರ್ಷವನ್ನು ಸ್ವಾಗತಿಸಲು ಜೋಡಿ ರೊಮ್ಯಾಂಟಿಕ್ ಪ್ಲೇಸ್ ಆಯ್ಕೆ ಮಾಡಿಕೊಂಡಿಕೊಂಡಿದೆ ಅಂತಲೂ ಹೇಳಲಾಗ್ತಿದೆ. ಈ ಸುದ್ದಿ ಕೇಳಿ ಯಂಗ್ ರೆಬಲ್ ಸ್ಟಾರ್ ಅಭಿಮಾನಿಗಳಂತೂ ಶಾಕ್ ಆಗಿದ್ದಾರೆ. ಇದೆಲ್ಲಾ ಸುಳ್ಳು. ಕಟ್ಟು ಕಥೆ. ಬರೀ ಗಾಸಿಪ್ ಎನ್ನುತ್ತಿದ್ದಾರೆ.
'ಆದಿಪುರುಷ್'
ಬಗ್ಗೆ
ಟೀಕೆ:
ನಿರ್ದೇಶಕನ
ಬೆನ್ನಿಗೆ
ನಿಂತ
ಕೃತಿ
ಸೆನನ್,
ಬಿಡುಗಡೆ
ವಿಳಂಬಕ್ಕೆ
ಕೊಟ್ಟರು
ಕಾರಣ
ಕೆಲ ದಿನಗಳ ಹಿಂದೆ ಪ್ರಭಾಸ್ - ಕೃತಿ ಡೇಟಿಂಗ್ ಗಾಸಿಪ್ ಎಲ್ಲಾ ಪಿಆರ್ ಸ್ಟಂಟ್ ಎಂದು ಹೇಳಲಾಗಿತ್ತು. ಸಿನಿಮಾ ಪ್ರಚಾರಕ್ಕಾಗಿ ಬಾಲಿವುಡ್ ಮಂದಿ ಇಂತಹ ಗಾಸಿಪ್ ತೇಲಿ ಬಿಟ್ಟಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿತ್ತು.

ಹೊಸ ವರ್ಷಕ್ಕೆ ಪ್ರಭಾಸ್ ಪ್ರಪೋಸ್
2022ಕ್ಕೆ ಬೈ ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಸಿದ್ಧವಾಗಿದೆ. ಹೊಸವರ್ಷದ ಸಂಭ್ರಮದಲ್ಲೇ ಪ್ರಭಾಸ್ ನಟಿ ಕೃತಿ ಸನೂನ್‌ಗೆ ಪ್ರಪೋಸ್ ಮಾಡ್ತಾರೆ ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಓವರ್‌ಸೀಸ್ ಸೆನ್ಸಾರ್ ಬೋರ್ಡ್ ಸದಸ್ಯ ಎಂದು ಹೇಳಿಕೊಳ್ಳುವ ಉಮೈರ್ ಸಂಧು ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಭಾಸ್ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಇದೆಲ್ಲಾ ಬರೀ ಗಾಸಿಪ್, ಯಾರು ನಂಬಬೇಡಿ ಎನ್ನುತ್ತಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಹೊಸ ವರ್ಷಾಚರಣೆ
ಬರೀ ಪ್ರಭಾಸ್ ಪ್ರಪೋಸ್ ಮಾಡ್ತಾರೆ ಅಂತ ಅಷ್ಟೇ ಉಮೈರ್ ಸಂಧು ಟ್ವೀಟ್ ಮಾಡಿಲ್ಲ. ಜೋಡಿ ಮಾಲ್ಡೀವ್ಸ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಿದ್ದಾರೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ರೊಮ್ಯಾಂಟಿಕ್ ಪ್ಲೇಸ್‌ನಲ್ಲಿ ಕೃತಿಗೆ ಪ್ರಪೋಸ್ ಮಾಡಿ ಜೋಡಿ ಹೊಸ ವರ್ಷವನ್ನು ಅಲ್ಲೇ ಸ್ವಾಗತಿಸಲಿದೆ ಎಂದು ಬರೆದುಕೊಂಡಿದ್ದಾರೆ. ಈ ಎರಡು ಟ್ವೀಟ್‌ಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಯಾವುದೇ ದೊಡ್ಡ ಸಿನಿಮಾ ರಿಲೀಸ್‌ಗೂ ಮುನ್ನ ಫಸ್ಟ್ ರಿವ್ಯೂ ಎಂದು ಹೇಳಿ ಉಮೈರ್ ಸಂಧು ಟ್ವೀಟ್ ಮಾಡುತ್ತಿರುತ್ತಾರೆ. ಆದರೆ ಇದನ್ನು ಕೆಲವರು ಗಂಭೀರವಾಗಿ ಪರಿಗಣಿಸುವುದಿಲ್ಲ.

ಮದುವೆ ಬಗ್ಗೆ ಪ್ರಭಾಸ್ ಮಾತು
ವಯಸ್ಸು 40 ದಾಟಿದ್ರು ಪ್ರಭಾಸ್ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣಿಸುತ್ತಿಲ್ಲ. ಅಭಿಮಾನಿಗಳು ಕೂಡ ಈ ಪ್ರಶ್ನೆ ಕೇಳಿ ಕೇಳಿ ಸುಸ್ತಾಗಿದ್ದಾರೆ. ಯಾವುದೇ ಸಂದರ್ಶನ ಆದರೂ ಡಾರ್ಲಿಂಗ್‌ಗೆ ಈ ಪ್ರಶ್ನೆ ಎದುರಾಗುತ್ತದೆ. ಇತ್ತೀಚೆಗೆ 'ಅನ್‌ಸ್ಟಾಪಬಲ್- 2' ಶೋನಲ್ಲಿ ಪ್ರಭಾಸ್ ಭಾಗವಹಿಸಿದ್ದರು. ನಟ ಬಾಲಕೃಷ್ಣ ನಡೆಸಿಕೊಡುವ ಓಟಿಟಿ ಶೋ ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಈ ಕಾರ್ಯಕ್ರಮದಲ್ಲೂ ಬಾಲಯ್ಯ ಮದುವೆ ಪ್ರಶ್ನೆಯನ್ನು ಪ್ರಭಾಸ್ ಮುಂದೆ ಇಟ್ಟಿದ್ದರು. "ಸಲ್ಮಾನ್ ಖಾನ್ ಮದುವೆ ಆದಮೇಲೆ ನನ್ನ ಮದುವೆ" ಎಂದು ಹೇಳಿ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಜಾರಿಕೊಂಡಿದ್ದರು.

4 ಸಿನಿಮಾಗಳಲ್ಲಿ ಪ್ರಭಾಸ್ ನಟನೆ
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಪ್ರಭಾಸ್ 4 ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 'ಆದಿಪುರುಷ್' ಸಿನಿಮಾ ರೀವರ್ಕ್ ನಡೀತಿದೆ. 'ಸಲಾರ್' ಶೂಟಿಂಗ್ 85% ಕಂಪ್ಲೀಟ್ ಆಗಿದೆ. ಬಹುಕೋಟಿ ವೆಚ್ಚದ 'ಪ್ರಾಜೆಕ್ಟ್- K' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ದಿಲ್ಲದೇ ಮಾರುತಿ ನಿರ್ದೇಶನದ ಸಿನಿಮಾದ 2ನೇ ಶೆಡ್ಯೂಲ್ ನಡೀತಿದೆ. ಬಾಹುಬಲಿ ಸರಣಿ ನಂತರ ಪ್ರಭಾಸ್ ಹೆಚ್ಚು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.