»   » ಸ್ಟಾರ್ ಆಂಕರ್ ಅನುಶ್ರೀ ಅಮ್ಮಾವ್ರೇ ಇದು ಹೌದಾ?

ಸ್ಟಾರ್ ಆಂಕರ್ ಅನುಶ್ರೀ ಅಮ್ಮಾವ್ರೇ ಇದು ಹೌದಾ?

By: ಜೀವನರಸಿಕ
Subscribe to Filmibeat Kannada

ಕನ್ನಡದ ಒನ್ ಅಂಡ್ ಓನ್ಲಿ ಬ್ಯೂಟಿಫುಲ್ ಫೀಮೇಲ್ ಸ್ಟಾರ್ ಆಂಕರ್ ಯಾರು ಗೊತ್ತಾ? ಅದು ಮತ್ಯಾರೂ ಅಲ್ಲ ಅನುಶ್ರೀ. ಹೌದಾ ಅಂತ ನೀವು ಕೇಳೋದಿಲ್ಲ. ಅದೇ ಈಗ ಎಡವಟ್ಟಾಗಿರೋದು. ಈಗ ಹೀರೋಯಿನ್ ಬೇರೆ, ಯಾಕೇಳ್ತೀರ ಅದರ ಅಬ್ಬರಾನಾ. ಹೀರೋಯಿನ್ ಆದ ಕೂಡ್ಲೇ ಅನುಶ್ರೀ ಆಡ್ತಿರೋ ಆಟ ಒಂದೆರಡಲ್ಲ.

ಅನುಶ್ರೀ ಒಳ್ಳೆಯ ಮಾತುಗಾತಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಇತ್ತೀಚೆಗೆ ಈ ಚೆಲುವೆಯ ಮೊದಲ ಸಿನಿಮಾ 'ಬೆಂಕಿಪಟ್ಣ' ತೆರೆಗೂ ಬಂದಿದೆ. ಹೀರೋಯಿನ್ ಆದ ನಂತರ ಅನುಶ್ರೀ ಕಂಪ್ಲೀಟ್ ಬದ್ಲಾಗಿದ್ದಾರೆ ಅಂತಾರೆ ಅಕ್ಕಪಕ್ಕದವ್ರು. [ಬೆಂಕಿಪಟ್ಣ ಚಿತ್ರ ವಿಮರ್ಶೆ]ಸುವರ್ಣ ಟಿವಿ, ಕಸ್ತೂರಿ ಸೇರಿದಂತೆ ಹಲವು ಮನರಂಜನಾ ವಾಹಿನಿಗಳಲ್ಲಿ ಹಲವು ಕಾರ್ಯಕ್ರಮಗಳನ್ನ ನಡೆಸಿಕೊಡ್ತಿರೋ ಅನುಶ್ರೀ ತೊಗೊಳ್ಳೋ ಪೇಮೆಂಟ್ ಜಾಸ್ತೀನೇ ಇದೆ. ಪೇಮೆಂಟ್ ಕೊಟ್ರೂ ಕಾರ್ಯಕ್ರಮದಲ್ಲಿ ಚಾನೆಲ್ ನವ್ರು ಅನುಶ್ರೀ ಹೇಳಿದ ಹಾಗೆ ಕೇಳ್ಬೇಕಂತೆ.


ಇನ್ನು ಸ್ಟೇಜ್ ಮೇಲೇರಿ ಮಾತ್ನಾಡೋಕೆ ಶುರು ಮಾಡಿದ್ರೆ ಅವ್ರು ಮಾತ್ನಾಡಿದ್ದನ್ನೆಲ್ಲ ಸಹಿಸಿಕೊಳ್ಳಬೇಕಂತೆ. ಇನ್ನು ಅನುಶ್ರೀ ಮೇಕಪ್ ಗೆ ಕುಳಿತ್ರೆ ಹೆಚ್ಚೂ ಕಡಿಮೆ ಎರಡು ಗಂಟೆ ಬೇಕಂತೆ. ಈ ತರಹದ ಕಥೆ ಮನರಂಜನ ವಾಹಿನಿಗಳ ಕಡೆಯಿಂದ ಬರ್ತಿದೆ.


ಬೆಂಕಿ ಇಲ್ಲದೇ ಹೊಗೆ ಆಡುತ್ತಾ. ಮೊದ್ಲೇ 'ಬೆಂಕಿಪಟ್ಣ' ಕಡ್ಡಿ ಇಲ್ಲದೆ ಖಾಲಿ ಹೊಡೀತಿದೆ. ಹಿಂಗೆ ಮಾಡ್ತಿದ್ರೆ ಅಮ್ಮಾವ್ರ ಕಥೆ ಅಷ್ಟೇ ಎನ್ನುತ್ತಿದೆ ಗಾಂಧಿನಗರ. 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಅನುಶ್ರೀ ಅವರ ಆಟಪಾಠ ನೋಡಿದವರು ಇರಬಹುದು ಬಿಡಿ ಎನ್ನುತ್ತಿದ್ದಾರೆ.

English summary
After becoming heroine in 'Benki Patna', Anushree becoming star anchor on Kannada small screen. Grapevine has it that, Anusheree is demanding more money for anchoring.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada