»   » 'ಕುರುಕ್ಷೇತ್ರ'ದಲ್ಲಿ ಕುಂತಿ ಆಗಲು ಒಲ್ಲೆ ಎಂದ್ರಾ ನಟಿ ಲಕ್ಷ್ಮಿ.?

'ಕುರುಕ್ಷೇತ್ರ'ದಲ್ಲಿ ಕುಂತಿ ಆಗಲು ಒಲ್ಲೆ ಎಂದ್ರಾ ನಟಿ ಲಕ್ಷ್ಮಿ.?

Posted By:
Subscribe to Filmibeat Kannada

'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರದಿಂದ ಸಾಗುತ್ತಿದೆ. ಹೀಗಿರುವಾಗಲೇ, ಪಾತ್ರಗಳ ಆಯ್ಕೆ ವಿಚಾರದಲ್ಲೂ ಕೊಂಚ ಬದಲಾವಣೆ ಕೂಡ ಮಾಡಲಾಗುತ್ತಿದೆ.

ದುರ್ಯೋಧನ ಪತ್ನಿ ಭಾನುಮತಿ ಪಾತ್ರಕ್ಕೆ ರೆಜಿನಾ ಬದಲು ರಮ್ಯಾ ನಂಬೀಸನ್ ರವರನ್ನ ಆಯ್ಕೆ ಮಾಡಲಾಗಿದೆ. ಹಾಗೇ, ಕುಂತಿ ಪಾತ್ರಕ್ಕೆ ಹಿರಿಯ ನಟಿ ಲಕ್ಷ್ಮಿ ಬದಲು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ರವರನ್ನ ಕರೆ ತರುವ ಸಾಧ್ಯತೆ ಇದೆ.

ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?

Bharathi Vishnuvardhan to replace Lakhmi as Kunti in 'Kurukshetra'?

ಕುಂತಿ ಪಾತ್ರದಲ್ಲಿ ನಟಿ ಲಕ್ಷ್ಮಿ ಅಭಿನಯಿಸುವುದು ಪಕ್ಕಾ ಅಂತ ಈ ಹಿಂದೆ ಹೇಳಲಾಗಿತ್ತು. ಚಿತ್ರದ ಮುಹೂರ್ತ ಆಹ್ವಾನ ಪತ್ರಿಕೆಯಲ್ಲೂ ಲಕ್ಷ್ಮಿ ರವರ ಫೋಟೋ ಹಾಕಲಾಗಿತ್ತು. ಆದ್ರೀಗ, ಕುಂತಿ ಪಾತ್ರದಲ್ಲಿ ನಟಿ ಲಕ್ಷ್ಮಿ ಅಭಿನಯಿಸುತ್ತಿಲ್ಲ ಎನ್ನಲಾಗಿದೆ.

'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾಗಿರುವ ನಟಿ ಲಕ್ಷ್ಮಿ ರವರ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಕುಂತಿ ಪಾತ್ರಕ್ಕೆ ಭಾರತಿ ವಿಷ್ಣುವರ್ಧನ್ ರವರ ಬಳಿ ಮಾತುಕತೆ ನಡೆಸಲಾಗಿದೆ ಎಂಬುದು ಮೂಲಗಳ ಮಾಹಿತಿ.

ಕುಂತಿ ಪಾತ್ರದಲ್ಲಿ ನಟಿಸಲು ನಟಿ ಭಾರತಿ ವಿಷ್ಣುವರ್ಧನ್ ಗ್ರೀನ್ ಸಿಗ್ನಲ್ ಕೊಡ್ತಾರಾ.? ನೋಡೋಣ.

English summary
Will Bharathi Vishnuvardhan replace Lakhmi for Kunti in Darshan starrer Kannada Movie 'Kurukshetra'?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada