»   » ದರ್ಶನ್ 51ನೇ ಸಿನಿಮಾ: ಅನುಮಾನಗಳಿಗೆ ಹಾಲೆರೆದ ಈ ಫೋಟೋ.!

ದರ್ಶನ್ 51ನೇ ಸಿನಿಮಾ: ಅನುಮಾನಗಳಿಗೆ ಹಾಲೆರೆದ ಈ ಫೋಟೋ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 48ನೇ ಸಿನಿಮಾ 'ಚಕ್ರವರ್ತಿ' ರಿಲೀಸ್ ಗೆ ರೆಡಿಯಾಗಿದೆ. ಇನ್ನೂ 49ನೇ ಚಿತ್ರ 'ತಾರಕ್' ಚಿತ್ರೀಕರಣದಲ್ಲಿ ದರ್ಶನ್ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ದರ್ಶನ್ ರವರ 50ನೇ ಹಾಗೂ 51ನೇ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

ದರ್ಶನ್ 50ನೇ ಸಿನಿಮಾ ಯಾವುದು ಎಂಬುದು ಈಗಲೂ ಯಕ್ಷ ಪ್ರಶ್ನೆಯಾಗಿ ಉಳಿದಿರುವಾಗ 51ನೇ ಚಿತ್ರ ಮಾತ್ರ ಆಗಾಗ 'ಡಿ ಬಾಸ್' ಅಭಿಮಾನಿಗಳ ತಲೆಯಲ್ಲಿ ಅನುಮಾನದ ಬೀಜ ಬಿತ್ತುತ್ತಿದೆ.

ಒಮ್ಮೆ ಫ್ಲ್ಯಾಶ್ ಬ್ಯಾಕ್ ಹೇಳ್ತೀವಿ ಕೇಳಿ...

ಅದು ಫೆಬ್ರವರಿ 16.... ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 40ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂಬರುವ ಚಿತ್ರಗಳನ್ನ ಅನೌನ್ಸ್ ಮಾಡಲಾಗಿತ್ತು. ಅದರಲ್ಲಿ ದರ್ಶನ್ ರವರ 51ನೇ ಸಿನಿಮಾ ಕೂಡ ಒಂದು.[ದರ್ಶನ್ 'ಬಾಸ್' ಹುಟ್ಟುಹಬ್ಬ ವಿಶೇಷ: 51ನೇ ಸಿನಿಮಾ ಅನೌನ್ಸ್]

ಬಿ.ಸುರೇಶ್ ಮೊದಲು ಅನೌನ್ಸ್ ಮಾಡಿದ್ದು.!

ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ರವರು ದರ್ಶನ್ ರವರ 51ನೇ ಚಿತ್ರವನ್ನ ಫೆಬ್ರವರಿ 16 ರಂದು ಅನೌನ್ಸ್ ಮಾಡಿದ್ರು.

ಸಂದೇಶ್ ನಾಗರಾಜ್ ಕಡೆಯಿಂದ ಬಂದ ಸಂದೇಶ

ಇತ್ತ ನಿರ್ಮಾಪಕ ಸಂದೇಶ್ ನಾಗರಾಜ್ ಕೂಡ ದರ್ಶನ್ ರವರ 51ನೇ ಸಿನಿಮಾ ನಿರ್ಮಾಣ ಮಾಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ರು.

ನಾನೇ ಪ್ರೊಡ್ಯೂಸರ್ ಅಂತ ಹೇಳಿಕೊಂಡಿದ್ದ ಸಂದೇಶ್ ನಾಗರಾಜ್

''ದರ್ಶನ್ ರವರ 51ನೇ ಚಿತ್ರಕ್ಕೆ ನಾನೇ ಪ್ರೊಡ್ಯೂಸರ್. ಟೈಟಲ್ ಕೂಡ ಫಿಕ್ಸ್ ಆಗಿದೆ. 'ಒಡೆಯರ್' ಅಂತ ಶೀರ್ಷಿಕೆ ಇಡಲಾಗಿದೆ'' ಅಂತ ಸ್ವತಃ ಸಂದೇಶ್ ನಾಗರಾಜ್ ಹೇಳಿದ್ದರು.['ಡಿ' ಬಾಸ್ 51ನೇ ಸಿನಿಮಾ ಯಾರಿಗೆ.? ಪೋಸ್ಟರ್ ತಂದಿಟ್ಟ ಅನುಮಾನ.!]

ದುಬಾರಿ ಕಾರು ಗಿಫ್ಟ್ ಕೊಟ್ಟಿದ್ದ ಸಂದೇಶ್ ನಾಗರಾಜ್

ಇದೇ ಸಂದರ್ಭದಲ್ಲಿ (ದರ್ಶನ್ 40ನೇ ಹುಟ್ಟುಹಬ್ಬಕ್ಕಾಗಿ) ನಿರ್ಮಾಪಕ ಸಂದೇಶ್ ನಾಗರಾಜ್ ಒಂದುವರೆ ಕೋಟಿ ರೂಪಾಯಿ ಮೌಲ್ಯದ Porsche ಕಾರ್ ನ ದರ್ಶನ್ ಗೆ ಉಡುಗೊರೆಯಾಗಿ ನೀಡಿದ್ದರು.[ನಿಮ್ಮನ್ನೆಲ್ಲ ನಿಬ್ಬೆರಗಾಗಿಸುವ ನ್ಯೂಸ್ ಇದು.! ಅದು ದರ್ಶನ್ ಕುರಿತು.!]

ಅಲ್ಲಿಗೆ, ಅರ್ಥವಾಗಿದ್ದು ಏನು.?

ಅಲ್ಲಿಗೆ, ದರ್ಶನ್ ರವರ 51ನೇ ಚಿತ್ರ 'ಒಡೆಯರ್', ನಿರ್ಮಾಪಕ ಸಂದೇಶ್ ನಾಗರಾಜ್ ಅಂತ ಎಲ್ಲರಿಗೂ ಕ್ಲಾರಿಟಿ ಸಿಕ್ಕಿತ್ತು. ಈಗ ಹಳೇ ಅನುಮಾನಕ್ಕೆ ಹೊಸ ಫೋಟೋವೊಂದು ಹಾಲೆರೆದಿದೆ.[ಎಕ್ಸ್ ಕ್ಲೂಸಿವ್: ದರ್ಶನ್ 51ನೇ ಸಿನಿಮಾದ ಬಗ್ಗೆ ಇದ್ದ ಡೌಟ್ ಕ್ಲಿಯರ್.!]

ಮೊದಲು ಈ ಫೋಟೋ ನೋಡಿ....

ನಿರ್ಮಾಪಕ ಕಮ್ ನಿರ್ದೇಶಕ ಬಿ.ಸುರೇಶ್, ಶೈಲಜಾ ನಾಗ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 'ಡಿ-ಬೀಟ್ಸ್' ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ಈ ಫೋಟೋ ಶೇರ್ ಆಗಿದ್ದು 51ನೇ ಚಿತ್ರದ ಮೀಟಿಂಗ್ ಅಂತ ಬರೆಯಲಾಗಿದೆ.

ಕಾಡುತ್ತಿದೆ ಹೊಸ ಡೌಟ್

ಅಂದ್ರೆ.., ದರ್ಶನ್ ರವರ 51ನೇ ಚಿತ್ರ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಪಾಲಾಗಿದ್ಯಾ.? ಎಂಬ ಅನುಮಾನ ಈ ಫೋಟೋ ನೋಡಿದ ಮೇಲೆ ಮೂಡದೆ ಇರುವುದಿಲ್ಲ.

ಸಂದೇಶ್ ನಾಗರಾಜ್ ಇದ್ದಾರಲ್ಲ.!

ಅತ್ತ ಸಂದೇಶ್ ನಾಗರಾಜ್ ಕೂಡ ದರ್ಶನ್ ಕಾಲ್ ಶೀಟ್ ಪಡೆದುಕೊಂಡಿದ್ದಾರೆ. ದರ್ಶನ್ ರವರ 51ನೇ ಸಿನಿಮಾ ನಮ್ಮ ಬ್ಯಾನರ್ ನಲ್ಲಿಯೇ ಅಂತ ಹೇಳಿಕೊಂಡಿದ್ದಾರೆ. ಇದನ್ನೆಲ್ಲ ನೋಡುತ್ತಿರುವ 'ಡಿ ಬಾಸ್' ಅಭಿಮಾನಿಗಳು ತಲೆಗೆ ಹುಳ ಅಲ್ಲ.. ಹೆಬ್ಬಾವು ಬಿಟ್ಟುಕೊಂಡಿದ್ದಾರೆ.

ದರ್ಶನ್ ರವರೇ ಸ್ಪಷ್ಟನೆ ಕೊಡಬೇಕು.!

ದರ್ಶನ್ ರವರ 51ನೇ ಸಿನಿಮಾ ಯಾರಿಗೆ ಎಂಬ ನಿರ್ಧಾರ ದರ್ಶನ್ ರವರೇ ಮಾಡಬೇಕು. ಸ್ಪಷ್ಟನೆ ಅವರ ಬಾಯಿಂದಲೇ ಬರಬೇಕು.

English summary
Big Confusion: Who will produce Darshan's 51st Movie.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada