»   » ಬಿಗ್ ಬಾಸ್ ಮನೆಯಿಂದ ಕ್ರಿಕೆಟರ್ ಅಯ್ಯಪ್ಪ ಔಟ್?

ಬಿಗ್ ಬಾಸ್ ಮನೆಯಿಂದ ಕ್ರಿಕೆಟರ್ ಅಯ್ಯಪ್ಪ ಔಟ್?

By: ಸೋನು ಗೌಡ
Subscribe to Filmibeat Kannada

ಮೊದಲು ಪೂಜಾ ಗಾಂಧಿ ಆಯ್ತು ತದನಂತರ ಕಿರುತೆರೆ ನಟಿ ಗೌತಮಿ ಅವರೊಟ್ಟಿಗೆ ಅಂತ ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ಒಂದಲ್ಲಾ ಒಂದು ಹುಡುಗಿಯರ ಜೊತೆ ಫರ್ಟ್ ಮಾಡುತ್ತಿದ್ದ ಕ್ರಿಕೆಟರ್ ಅಯ್ಯಪ್ಪ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಈ ಮೊದಲು ಅಯ್ಯಪ್ಪ ಅವರು ಫೈನಲ್ ಗೆ ಹೋಗಬಾರದು ಎಂದು ವೀಕ್ಷಕರೇ ಫೇಸ್ ಬುಕ್ಕಿನಲ್ಲಿ ಕಮೆಂಟ್ ಹಾಕುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಟಿವಿ9 ರೆಹಮಾನ್, ನಟಿ ಶ್ರುತಿ ಮತ್ತು ನಟ ಚಂದನ್ ಅವರು ಫೈನಲ್ ಗೆ ಹೋದರೂ ಪರವಾಗಿಲ್ಲ ಅಯ್ಯಪ್ಪ ಮಾತ್ರ ಬೇಡ ಎಂದು ಡೈಲಿ ಬಿಗ್ ಬಾಸ್ ನೋಡುವ ವೀಕ್ಷಕರು ಪಟ್ಟು ಹಿಡಿದಿದ್ದರು.['ಬಿಗ್ ಬಾಸ್-3' ಫೈನಲ್ ಗೆ ಅಯ್ಯಪ್ಪ ಹೋಗಲೇ ಬಾರದು!]

Bigg Boss Kannada 3: Cricketer Ayyappa Eliminated

ಇದೀಗ ವೀಕ್ಷಕರ ಆಸೆಯಂತೆ ಕ್ರಿಕೆಟರ್ ಅಯ್ಯಪ್ಪ ಅವರು ಈ ವಾರ ಮನೆಯಿಂದ ಹೊರಬರುತ್ತಿದ್ದಾರೆ. ಇನ್ನು ಅಯ್ಯಪ್ಪ ಅವರು ಔಟ್ ಆಗಿರುವ ಸುದ್ದಿ ಬಲ್ಲ ಮೂಲಗಳಿಂದ ತಿಳಿಯುತ್ತಿದ್ದಂತೆ ಕೆಲವು ವೀಕ್ಷಕರು ಹರ್ಷ ವ್ಯಕ್ತಪಡಿಸಿದರೆ ಇನ್ನು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.['ಡೇಂಜರ್ ಝೋನ್'ನಲ್ಲಿದ್ದಾರೆ ಚಂದನ್ ಮತ್ತು ಅಯ್ಯಪ್ಪ!]

ಒಟ್ನಲ್ಲಿ ವೀಕ್ಷಕರ ಫೇಸ್ ಬುಕ್ ಅಭಿಪ್ರಾಯದಂತೆ ಅಯ್ಯಪ್ಪ ಅವರು ಔಟ್ ಆಗಿದ್ದು ಇನ್ನು ಮಳೆ ಹುಡುಗಿ ಪೂಜಾ ಅವರು ಇದನ್ನು ಯಾವ ರೀತಿ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಅಯ್ಯಪ್ಪ ಅವರನ್ನು ಕಳುಹಿಸಿ ಕೊಡುವಾಗ ಗಳಗಳನೇ ಅಳಬಹುದೇನೋ?.

English summary
Bigg Boss Kannada 3: Cricketer Ayyappa is Eliminated from Bigg Boss house This week.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada