»   » 'ಬಿಗ್ ಬಾಸ್ ಕನ್ನಡ 3' ರಿಯಾಲಿಟಿ ಶೋ ಗೆದ್ದು ಬಿಟ್ಟರೆ ನಟಿ ಶ್ರುತಿ?

'ಬಿಗ್ ಬಾಸ್ ಕನ್ನಡ 3' ರಿಯಾಲಿಟಿ ಶೋ ಗೆದ್ದು ಬಿಟ್ಟರೆ ನಟಿ ಶ್ರುತಿ?

Posted By:
Subscribe to Filmibeat Kannada

ನೀವು ನಂಬ್ತೀರೋ, ಬಿಡ್ತೀರೋ, ನಮಗಂತೂ ಗೊತ್ತಿಲ್ಲ. ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಬಂದಿರುವ ಮಾಹಿತಿಯನ್ನ ನಿಮ್ಮ ಮುಂದೆ ಇಡ್ತಾಯಿದ್ದೀವಿ, ಓದಿ.....

'ಬಿಗ್ ಬಾಸ್-3' ರಿಯಾಲಿಟಿ ಶೋ ಗೆಲುವಿನ ಪಟ್ಟ ದಕ್ಕಿರುವುದು ನಟಿ ಶ್ರುತಿಗೆ.! 'ಬಿಗ್ ಬಾಸ್' ಮನೆಯಲ್ಲಿ ಇದ್ದ 98 ದಿನಗಳಲ್ಲಿ ಎಲ್ಲೂ ತಾಳ್ಮೆ ಕಳೆದುಕೊಳ್ಳದೆ, ಯಾರೊಂದಿಗೂ ಜಗಳವಾಡದೆ ಇದ್ದ ನಟಿ ಶ್ರುತಿ ವಿಜೇತರಾಗಿ ಹೊರ ಹೊಮ್ಮಿದ್ದಾರಂತೆ. [ಕನ್ನಡ 'ಬಿಗ್ ಬಾಸ್' ಸೀಸನ್ 3 ಗೆಲುವಿನ ಪಟ್ಟ ಯಾರಿಗೆ?]

'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ನಿನ್ನೆಯಿಂದ (ಶನಿವಾರ ಜನವರಿ 30 ರಂದು) ಇಂದು ಮುಂಜಾನೆ ವರೆಗೂ ನಡೆದಿದೆ. ಉಳಿದ ನಾಲ್ಕು ಸ್ಪರ್ಧಿಗಳನ್ನ ಹಿಂದಿಕ್ಕಿ 50 ಲಕ್ಷ ಬಹುಮಾನವನ್ನ ನಟಿ ಶ್ರುತಿ ಪಡೆದಿದ್ದಾರೆ ಎನ್ನಲಾಗಿದೆ. ಮುಂದೆ ಓದಿ.....

ವಿಜೇತರಾದರು ನಟಿ ಶ್ರುತಿ!

ನಟಿ ಶ್ರುತಿ 'ಬಿಗ್ ಬಾಸ್-3' ವಿನ್ನರ್ ಅಂತ ನಂಬುವುದಕ್ಕೆ ನಿಮಗೆ ಆಗದೇ ಇದ್ದರೆ, ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಲೀಕ್ ಆಗಿರುವ ಈ ಫೋಟೋ ನೋಡಿ.... [ಇವರೆಲ್ಲರಿಗೂ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ಮುಖ್ಯ! ಯಾಕೆ ಗೊತ್ತಾ?]

ಚಂದನ್ ರನ್ನರ್ ಅಪ್!

ಅಚ್ಚರಿ ವಿಷಯ ಅಂದ್ರೆ ಇದು ನೋಡಿ...ನಟಿ ಶ್ರುತಿ ವಿನ್ನರ್ ಆದ್ರೆ, ಎರಡನೇ ಸ್ಥಾನದವರೆಗೂ ನಟಿ ಶ್ರುತಿಗೆ ಪೈಪೋಟಿ ನೀಡಿದವರು ನಟ ಚಂದನ್. [ನಟಿ ಶ್ರುತಿ 'ಬಿಗ್ ಬಾಸ್' ಮನೆಗೆ ಬಂದಿರುವುದು ಯಾಕೆ ಗೊತ್ತಾ?]

ಮೂರನೇ ಸ್ಥಾನದಲ್ಲಿ ಮಾಸ್ಟರ್ ಆನಂದ್?

'ಬಿಗ್ ಬಾಸ್' ಮನೆಯಲ್ಲಿ ಇದ್ದ ಅಷ್ಟೂ ದಿನವೂ ಮನರಂಜನೆಯ ರಸದೌತಣ ನೀಡಿದ್ದ ಮಾಸ್ಟರ್ ಆನಂದ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರಂತೆ.

ನಾಲ್ಕನೇ ಸ್ಥಾನದಲ್ಲಿ ರೆಹಮಾನ್

ಇನ್ನೂ ಖ್ಯಾತ ನಿರೂಪಕ ರೆಹಮಾನ್ ನಾಲ್ಕನೇ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.

ಮೊದಲು ಔಟ್ ಆಗಿದ್ದು ಪೂಜಾ ಗಾಂಧಿ!

ಐವರು ಫೈನಲಿಸ್ಟ್ ಗಳ ಪೈಕಿ ಮೊದಲು ರೇಸ್ ನಿಂದ ಔಟ್ ಆಗಿದ್ದು ನಟಿ ಪೂಜಾ ಗಾಂಧಿ ಅಂತ ಹೇಳಲಾಗುತ್ತಿದೆ.

ಯಾವುದು ಸತ್ಯ..?

ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಬಂದಿರುವ ಮಾಹಿತಿ ಇಷ್ಟು. ಬಂದ ಮಾಹಿತಿಯನ್ನ ಇದ್ದ ಹಾಗೆ ನಿಮ್ಮ ಮುಂದೆ ಇಟ್ಟಿದ್ದೀವಿ. ಇದರಲ್ಲಿ ಎಷ್ಟು ಸತ್ಯಾಂಶ ಇದೆ ಅಂತ ತಿಳಿಯಲು ಇಂದಿನ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಮಿಸ್ ಮಾಡ್ಬೇಡಿ. ಸಂಜೆ 6 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
According to the sources of Colors Kannada Channel, Kannada Actress Shruthi is the winner of 'Bigg Boss Kannada 3' reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada