»   » ಶುರುವಾಗಲಿದೆ 'ಬಿಗ್ ಬಾಸ್' ಕನ್ನಡ ಸೀಸನ್ 3

ಶುರುವಾಗಲಿದೆ 'ಬಿಗ್ ಬಾಸ್' ಕನ್ನಡ ಸೀಸನ್ 3

Posted By:
Subscribe to Filmibeat Kannada

ರಿಯಾಲಿಟಿ ಶೋಗಳು ಮತ್ತು ಆ ಶೋಗಳಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರು ಭಾಗವಹಿಸುತ್ತಿರುವ ಕುರಿತು ಸ್ಯಾಂಡಲ್ ವುಡ್ ನಲ್ಲಿ ವಿವಾದ ಭುಗಿಲೆದ್ದಿದೆ. ಇದರ ನಡುವೆಯೇ ಸದ್ದಿಲ್ಲದೇ 'ಬಿಗ್ ಬಾಸ್' ಸೀಸನ್ 3 ಕಾರ್ಯಕ್ರಮದ ತಯಾರಿ ಬಿರುಸಿನಿಂದ ಸಾಗುತ್ತಿದೆ.

ನಂಬಿದ್ರೆ ನಂಬಿ, ಕಲರ್ಸ್ ಕನ್ನಡ (ಈಟಿವಿ ಕನ್ನಡ)ದಲ್ಲಿ ಸದ್ಯದಲ್ಲೇ 'ಬಿಗ್ ಬಾಸ್' ಮೂರನೇ ಆವೃತ್ತಿ ಶುರುವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಡ್ಯಾನ್ಸಿಂಗ್ ಸ್ಟಾರ್-2' ಕಾರ್ಯಕ್ರಮ ಕೊನೆಯ ಹಂತ ತಲುಪಿದೆ. ಸದ್ಯದಲ್ಲೇ 'ಡ್ಯಾನ್ಸಿಂಗ್ ಸ್ಟಾರ್-2' ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

bigg boss

'ಡ್ಯಾನ್ಸಿಂಗ್ ಸ್ಟಾರ್-2' ಮುಗಿದ ಬಳಿಕ 'ಬಿಗ್ ಬಾಸ್-3' ಶುರುವಾಗಲಿದೆ. ಮೂಲಗಳ ಪ್ರಕಾರ, 'ಬಿಗ್ ಬಾಸ್-3' ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವುದು ಖಚಿತ. ['ಬಿಗ್ ಬಾಸ್' ಸ್ಪರ್ಧಿಯಾಗಲಿದ್ದಾರೆ 'ಹುಚ್ಚ ವೆಂಕಟ್']

'ಬಿಗ್ ಬಾಸ್' ಮೊದಲ ಆವೃತ್ತಿ ಪ್ರಸಾರವಾಗಿದ್ದು ಈಟಿವಿ ಕನ್ನಡದಲ್ಲಿ. ಆದ್ರೆ, ಸೆಕೆಂಡ್ ಸೀಸನ್ ಸುವರ್ಣ ವಾಹಿನಿ ಪಾಲಾಗಿತ್ತು. ಮೊದಲ ಸೀಸನ್ ನಲ್ಲಿ ಸಿಕ್ಕ ಯಶಸ್ಸು ಮತ್ತು ಪ್ರತಿಕ್ರಿಯೆ 'ಬಿಗ್ ಬಾಸ್-2'ಗೆ ಸಿಗ್ಲಿಲ್ಲ. ಸ್ಪರ್ಧಿಗಳ ಆಯ್ಕೆ ಮತ್ತು ಕಾರ್ಯಕ್ರಮದ ರೂಪುರೇಷೆ 'ಬಿಗ್ ಬಾಸ್-2' ನಲ್ಲಿ ಹೇಳಿಕೊಳ್ಳುವ ಮಟ್ಟಕ್ಕೆ ಇರ್ಲಿಲ್ಲ. ['ಬಿಗ್ ಬಾಸ್ ಕನ್ನಡ 2' ತಮಾಷೇನೇ ಇರಲಿಲ್ಲ ಸ್ವಾಮಿ!]

ಹೀಗಾಗಿ 'ಬಿಗ್ ಬಾಸ್-3' ಮತ್ತೆ ಕಲರ್ಸ್ ಕನ್ನಡ (ಈಟಿವಿ ಕನ್ನಡ) ಪಾಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮತ್ತೆ ಕಿಚ್ಚು ಹಚ್ಚಿಸುತ್ತಾರಾ ಅನ್ನೋದು ಇನ್ನೂ ಪಕ್ಕಾ ಆಗಿಲ್ಲ. ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ. 'ಬಿಗ್ ಬಾಸ್ ಕನ್ನಡ-3' ನಲ್ಲಿ ಯಾರ್ಯಾರು ಭಾಗವಹಿಸಬಹುದು ಅನ್ನೋದನ್ನ ನೀವು ಊಹಿಸಿ, ಕಾಮೆಂಟ್ ಮಾಡಿ...

English summary
'Bigg Boss' is back in Kannada. According to the sources, 'Bigg Boss-3' will be aired in 'Colours Kannada Channel'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada