»   » ಶಿವರಾಜ್ ಕುಮಾರ್ ಚಿತ್ರಕ್ಕಾಗಿ ಬರ್ತಾರಂತೆ ಬಿಪಾಶ ಬಸು!

ಶಿವರಾಜ್ ಕುಮಾರ್ ಚಿತ್ರಕ್ಕಾಗಿ ಬರ್ತಾರಂತೆ ಬಿಪಾಶ ಬಸು!

Posted By:
Subscribe to Filmibeat Kannada

ಬಾಲಿವುಡ್ ಹಾಟ್ ಬ್ಯೂಟಿ ಬಿಪಾಶ ಬಸು ಕನ್ನಡಕ್ಕೆ ಬರ್ತಾರೆ ಎಂಬ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಚಿತ್ರಕ್ಕಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಹೌದು, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಲೀಡರ್' ಚಿತ್ರಕ್ಕಾಗಿ ಬಿಪಾಶ ಬಸು ಅವರನ್ನ ಕರೆತರುವ ಯೋಚನೆಯಲ್ಲಿದೆಯಂತೆ ಚಿತ್ರತಂಡ. ಎಲ್ಲ ಅಂದುಕೊಂಡಂತೆ ಆದರೇ, 'ಲೀಡರ್' ಚಿತ್ರದ ಐಟಂ ನಂಬರ್ ನಲ್ಲಿ ಬಿಪಾಶ ಬಸು ಹೆಜ್ಜೆ ಹಾಕಲಿದ್ದಾರಂತೆ.['ಲೀಡರ್' ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್]

Bipasha Basu To Make Item Number With Shivarajkumar!

ಸದ್ಯ, 'ಲೀಡರ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಖತ್ ಸೌಂಡ್ ಮಾಡ್ತಿದೆ. ಪ್ರಣೀತಾ ಸುಭಾಷ್ ಶಿವಣ್ಣನಿಗೆ ಜೋಡಿಯಾಗಿದ್ದು, ನಟ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ವಂಶಿ ಕೃಷ್ಣ ಹಾಗೂ ಲೂಸ್ ಮಾದ ಯೋಗೇಶ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.[ವಿಡಿಯೋ: ಶಿವಣ್ಣನ 'ಲೀಡರ್' ಟೀಸರ್, ಸಖತ್ ಮಾಸ್ ಗುರು!]

Bipasha Basu To Make Item Number With Shivarajkumar!

'ಲೀಡರ್' ಚಿತ್ರಕ್ಕೆ 'ರೋಸ್' ಖ್ಯಾತಿಯ ನಿರ್ದೇಶಕ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಚನದಲ್ಲಿ ತರುಣ್ ಶಿವಪ್ಪ ಹಾಗೂ ಹಾರ್ದಿಕ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಮತ್ತು ಗುರು ಪ್ರಶಾಂತ್ ಛಾಯಾಗ್ರಹಣವಿದೆ.['ಲೀಡರ್' ಚಿತ್ರದಲ್ಲೂ ಶಿವರಾಜ್ ಕುಮಾರ್ 'ಲಾಂಗ್' ಬಿಟ್ಟಿಲ್ಲ.!]

ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಲೀಡರ್ ಚಿತ್ರತಂಡ, ಭರದಿಂದ ಶೂಟಿಂಗ್ ಮಾಡುತ್ತಿದೆ. ಈ ಮಧ್ಯೆ ಬಿಪಾಶ ಬಸು ಅವರನ್ನ ಚಂದನವನದಲ್ಲಿ ಹೆಜ್ಜೆ ಹಾಕಿಸುವ ಉದ್ದೇಶ ಚಿತ್ರತಂಡಕ್ಕಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ನಿಜಾ ಆಗುತ್ತೆ ಎಂಬುದು ಕಾದು ನೋಡಬೇಕಿದೆ.

English summary
Bollywood hottie Bipasha Basu might shimmy for an item number for the movie Leader, directed by Narasimha. The makers of the film are trying to rope in Bipasha Basu to do a special number, but nothing is confirmed yet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada